ಗುಬ್ಬಿ | ರಾಷ್ಟ್ರೀಯ ಯುವ ದಿನ ಅಂಗವಾಗಿ ಅಯೋಡಿನ್ ಕೊರತೆ ಅಸ್ಪಷ್ಟತೆ ಬಗ್ಗೆ ಜಾಗೃತಿ ಅಧಿವೇಶನ

Date:

Advertisements

ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನ ಅಂಗವಾಗಿ ನಿಟ್ಟೂರು ಹೋಬಳಿ ಕುಂದರನಹಳ್ಳಿ ಗೇಟ್ ಬಳಿಯ ಶ್ರೀ ರಂಗನಾಥ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಅಯೋಡಿನ್ ಕೊರತೆ ಅಸ್ಪಷ್ಟತೆ ಕುರಿತು ಅಧಿವೇಶನ ಆಯೋಜಿಸಲಾಗಿತ್ತು.

ಬೆಂಗಳೂರಿನ ಐಜಿಡಿ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನ ಹಾಗೂ ಅಯೋಡಿನ್ ಕೊರತೆ ಅಸ್ಪಷ್ಟತೆ ಅಧಿವೇಶನದಲ್ಲಿ ನೂರಾರು ಮಕ್ಕಳು ಆರೋಗ್ಯ ಜಾಗೃತಿ ಬಗ್ಗೆ ಸಾಕ್ಷಷ್ಟು ಮಾಹಿತಿ ಹಾಗೂ ಅಯೋಡಿನ್ ಕೊರತೆಯಿಂದ ಆಗುವ ದುಷ್ಪರಿಣಾಮ ಬಗ್ಗೆ ತಿಳಿಯಲಾಯಿತು.

ಐಜಿಡಿ ಸಂಸ್ಥೆಯ ಡಾ.ಸುಷ್ಮಾ ಮಾತನಾಡಿ ಮಾನಸಿಕ ಆರೋಗ್ಯಕ್ಕೆ ಸಮಸ್ಯೆ ನೀಡುವ ಅಯೋಡಿನ್ ಕೊರತೆ ಮನುಷ್ಯನಲ್ಲಿ ನಾನಾ ರೋಗಗಳಿಗೆ ಮೂಲವಾಗಿದೆ. ಅಸ್ಪಷ್ಟತೆ ಬಗ್ಗೆ ಡಾಕ್ಟರ್ ಸಲಹೆ ಅತ್ಯಗತ್ಯ. ಮೈಕ್ರೋ ನ್ಯೂಟ್ರಿನ್ ಅವಶ್ಯಕತೆ ಬಗ್ಗೆ ಸಹ ಮಕ್ಕಳು ತಿಳಿಯಬೇಕು ಎಂದ ಅವರು ಉಪ್ಪಿನ ದ್ರಾವಣ ಅಂಶ ಸೇವನೆ ಕಡಿಮೆಯಾಗದಂತೆ ಗಮನಹರಿಸಬೇಕು. ಕೆಲ ಪ್ರದೇಶದಲ್ಲಿ ಮಣ್ಣಿನಲ್ಲಿ ಅಯೋಡಿನ್ ಕಡಿಮೆ ಇದ್ದು ಅಲ್ಲಿನ ಬೆಳೆಗಳ ತಿನ್ನುವರಲ್ಲಿ ಅಯೋಡಿನ್ ಕೊರತೆ ಕಾಣುತ್ತದೆ. ಸಮುದ್ರಾಹಾರ ಸೇವನೆ ಮಾಡುವುದು ಉತ್ತಮ ಎಂದರು.

Advertisements

ಶಿಕ್ಷಕಿ ಪೂರ್ಣಿಮಾ ಮಾತನಾಡಿ ಸ್ವಾಮಿ ವಿವೇಕಾನಂದರ ಜಯಂತಿ ದಿನವನ್ನು ರಾಷ್ಟ್ರೀಯ ದಿನಾಚರಣೆಯಾಗಿ ಆಚರಿಸುವ ಹಿನ್ನಲೆ ಮುಂದಿನ ಪೀಳಿಗೆಗೆ ಆರೋಗ್ಯ ಕಾಳಜಿ ಬಗ್ಗೆ ತಿಳಿಸಬೇಕಿದೆ. ವೀರ ಸನ್ಯಾಸಿ ಎಂದೇ ವಿಶ್ವ ಖ್ಯಾತಿ ಪಡೆದ ವಿವೇಕಾನಂದರ ವಾಣಿ ಎಂದಿಗೂ ಯುವ ಜಾಗೃತಿ ಮೂಡಿಸುತ್ತದೆ. ಅಧ್ಯಾತ್ಮಿಕ ಚಿಂತಕರಾಗಿ ಪ್ರಭಾವಿಗಳಾಗಿ ವಿಶ್ವವೇ ನಿಬ್ಬೆರಗಾಗುವ ಮಾತುಗಳು ವಿಶ್ವ ಸಮ್ಮೇಳನದಲ್ಲಿ ಆಡಿದ್ದರು. ಅವರ ಪ್ರಕಾರ ಆರೋಗ್ಯವಂತ ಯುವಕರು ಆರೋಗ್ಯ ಸಮಾಜಕ್ಕೆ ಮಾರ್ಗಸೂಚಿ ಎಂದರು.

ಐಜಿಡಿ ಸಂಸ್ಥೆಯ ಕ್ಷೇತ್ರ ಮಾರ್ಗದರ್ಶಕ ಶಿವರಾಜ್ ಮಾತನಾಡಿ ಗ್ರಾಮೀಣ ಭಾಗದ ಮಕ್ಕಳಲ್ಲಿ ಆರೋಗ್ಯ ಅರಿವು ಅತೀ ಮುಖ್ಯವಾಗಿದೆ. ದೈಹಿಕ ಸ್ವಾಸ್ಥ್ಯ ಕುರಿತು ಅಯೋಡಿನ್ ಕೊರತೆಯಿಂದ ಆಗುವ ದುಷ್ಪರಿಣಾಮ ಬಗ್ಗೆ ತಿಳಿಯುವುದು ಅವಶ್ಯವಿದೆ. ವಿವೇಕಾನಂದ ಜಯಂತಿ ದಿನವೇ ಯುವ ಜನಾಂಗಕ್ಕೆ ಆರೋಗ್ಯ ಜಾಗೃತಿ ಮೂಡಿಸುವ ಕೆಲಸ ಸಂಸ್ಥೆ ನಿರಂತರ ನಡೆಸಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ನಟರಾಜು, ಶಿಕ್ಷಕರಾದ ಎಸ್.ಡಿ.ಕುಮಾರ್, ತನುಜ್ ಕುಮಾರ್, ಐಜಿಡಿ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ರಾಜಶ್ರೀ, ಎಚ್ ಆರ್ ನವೀನ್ ಕುಮಾರ್ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X