ಮಡಿಕೇರಿ | ಭೂಮಿ ಹಾಗೂ ನಿವೇಶನಕ್ಕಾಗಿ ಬೃಹತ್ ರ್ಯಾಲಿ; ಪ್ರಗತಿಪರ ಸಂಘಟನೆಗಳ ಬೆಂಬಲ

Date:

Advertisements

ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಇಂದು ಭೂ ಗುತ್ತಿಗೆ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ಮೂಲಕ ಸಾಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬಡ ಜನರಿಗೆ ಭೂಮಿ ಹಾಗೂ ನಿವೇಶನ ಕಲ್ಪಿಸುವಂತೆ ಧರಣಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ರ್ಯಾಲಿಗೆ ಕೊಡಗಿನ ಎಲ್ಲಾ ಪ್ರಗತಿಪರ ಸಂಘಟನೆಗಳು ರ್ಯಾಲಿಯಲ್ಲಿ ಪಾಲ್ಗೊಳ್ಳುವುದರ ಮೂಲಕ ಬೆಂಬಲ ಸೂಚಿಸಿದವು.

ಕೊಡಗಿನಲ್ಲಿ ಭೂ ಗುತ್ತಿಗೆ ಆದೇಶಾವಾಗಿದ್ದು, ಉಳ್ಳವರ ಪರವಾಗಿ ಒತ್ತುವರಿ ಮಾಡಿಕೊಂಡ ಭೂ ಮಾಲೀಕ ಕೇವಲ ಸಾವಿರಾರು ರೂಪಾಯಿ ಪಾವತಿಸಿ ಸರ್ಕಾರದಿಂದ ಅಧಿಕೃತವಾಗಿ ಮೂವತ್ತು ವರ್ಷಗಳವರೆಗೆ ಭೂ ಗುತ್ತಿಗೆ ಪಡೆಯುವ ಪ್ರಕ್ರಿಯೆ ಆರಂಭಗೊಂಡು ,ಇನ್ನೇನು  ವಿತರಿಸುವ ಹಂತಕ್ಕೆ ತಲುಪಿದೆ. ಕೊಡಗಿನ ಬಡ ಜನರ ವಿರೋಧಿ ಭೂ ಗುತ್ತಿಗೆ ಆದೇಶ ಜಾರಿಗೆ ತಂದ ಸರ್ಕಾರ,ಅನುಷ್ಠಾನ ಮಾಡುತ್ತಿರುವ ಜಿಲ್ಲಾಡಳಿತ ವಿರುದ್ಧ ಕೊಡಗಿನಲ್ಲಿ ಹೋರಾಟಗಳು ಆರಂಭಗೊಂಡಿವೆ. ಸರ್ಕಾರ ಉಳ್ಳವರಿಗೆ 25 ಎಕರೆ ಕೊಡುವುದಾದರೆ ನಿವೇಶನ , ಭೂಮಿ ಏನೂ ಇರದ ಬಡ ಜನರ ಪರಿಸ್ಥಿತಿ ಏನು? ಅಂತಹವರಿಗೆ ಭೂಮಿ ಕೊಡಿ ಭೂ ಮಾಲೀಕರು ಕೊಡುವ ಹಣಕ್ಕಿಂತ ದುಪ್ಪಟ್ಟು ಕೊಡುವುದಾಗಿ ಆಗ್ರಹ ಮಾಡಿದ್ದಾರೆ.

33e94b85 65d2 416b 8ef2 77b4937b4133

ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕುಗಳಿಂದ ಬಂದಿದ್ದ ಆದಿವಾಸಿ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದ ಜನರು ನೀಲಿ, ಕೆಂಪು, ಹಸಿರು ಬಾವುಟ ಹಿಡಿದು ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೊರ ಹಾಕುತ್ತಾ ಧಿಕ್ಕಾರ ಕೂಗುತ್ತ ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿದರು.

Advertisements

ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಮಾಯಿಸಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಜಿಲ್ಲೆಯ ದಸಂಸ, ಸಿಪಿಐಎಂ, ಸಿಪಿಐಎಂಎಲ್, ಸಿಪಿಐಎಂ(ರೆಡ್ ಸ್ಟಾರ್) ರೈತ ಸಂಘಟನೆ, ಬಹುಜನ ಕಾರ್ಮಿಕ ಸಂಘಟನೆ, ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಹಲವು ಮುಖಂಡರು ಮಾತನಾಡಿದರು.

ಈ ಸುದ್ದಿ ಓದಿದ್ದೀರಾ?: ಮಡಿಕೇರಿ | ಗ್ಯಾರಂಟಿ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು: ಧರ್ಮಜ ಉತ್ತಪ್ಪ

ಪ್ರತಿಭಟನೆಯಲ್ಲಿ ಭೂ ಗುತ್ತಿಗೆ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಕಾಮ್ರೇಡ್ ನಿರ್ವಾಣಪ್ಪ, ಸಂಚಾಲಕರಾದ ಕೆ ಮೊಣ್ಣಪ್ಪ, ರಮೇಶ್ ಮಾಯಮುಡಿ, ರಮೇಶ್ (ಸಿಪಿಐಎಂ), ಅಡ್ವೋಕೇಟ್ ಸುನಿಲ್, ದಸಂಸ ಮಾರ್ಕ್ಸ್‌ವಾದಿ ಕುಟ್ಟಪ್ಪ, ದಸಂಸ  ಸಂಚಾಲಕರಾದ ಗೋವಿಂದಪ್ಪ, ರಜನೀಕಾಂತ್, ಹೆಚ್ ಎಲ್ ದಿವಾಕರ್, ವೀರಭದ್ರಯ್ಯ, ಜಗದೀಶ್, ಭೀಮವಾದ ಸಂಘಟನೆಯ ಕೆ ಬಿ ರಾಜು, ಗ್ರಾಮ ಪಂಚಾಯ್ತಿ ಸದಸ್ಯರಾದ ಕುಸುಮಾವತಿ, ಲಕ್ಷ್ಮಿ, ಪತ್ರಕರ್ತರಾದ  ಜಯಪ್ಪ ಹಾನಗಲ್, ಮೋಹನ್ ಮೈಸೂರು ಭಾಗಿಯಾಗಿದ್ದರು.

abf1fdf6 f1ba 477e a267 f16c81ab98ca
ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X