ಕೊಡಗು ಜಿಲ್ಲೆಯ ಗೋಣಿಕೊಪ್ಪದಲ್ಲಿ ಹ್ಯೂಮಾನಿಟಿ ರಿಲೀಪ್ ಸೊಸೈಟಿಯ(ಎಚ್ಆರ್ಎಸ್) ಕಾರ್ಯಾರಂಭ ಸ್ವಾಭಾವಿಕ ಪ್ರಕೃತಿ ವಿಕೋಪ, ಅನಿರೀಕ್ಷಿತ ಅಕಸ್ಮಿಕ ಬೆಂಕಿ ಅವಘಡ ಹಾಗೂ ಅಪಘಾತಗಳು ಸಂಭವಿಸಿದಾಗ ಅದನ್ನು ನಿಭಾಯಿಸಲು ನಾವು ಸದಾ ಸನ್ನದ್ದರಾಗಬೇಕು. ಇದರ ಭಾಗವಾಗಿ ಎಚ್ಆರ್ಎಸ್ ರಕ್ಷಣಾ ತಂಡದಿಂದ ಇಂತಹ ಕಾರ್ಯಕ್ರಮಗಳು ಎಲ್ಲಡೆ ನಡೆಯಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಸಮೀರ್ ಗೋಣಿಕೊಪ್ಪ ಹೇಳಿದರು.
ಗೋಣಿಕೊಪ್ಪದ ಎಚ್ಆರ್ಎಸ್ ಹಾಗೂ ಸಾಲಿಡಾರಿಟಿ ಯೂತ್ ವಿಂಗ್ ಜಂಟಿಯಾಗಿ ಆಯೋಜಿಸಿದ್ದ ಹ್ಯೂಮಾನಿಟಿ ರಿಲೀಪ್ ಸೊಸೈಟಿಯ ಲೋಗೋ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಇಬ್ರಾಹಿಂ ಮೌಲವಿ ವಹಿಸಿದ್ದರು. ಜಮಾಅತೆ ಇಸ್ಲಾಮೀ ಹಿಂದ್ ಮೈಸೂರು ವಲಯ ಕಾರ್ಯದರ್ಶಿ ಪಿ ಕೆ ಅಬ್ದುಲ್ ರೆಹಮಾನ್, ಸಗೀರ್ ಮೌಲವಿ ಶುಭ ಹಾರೈಸಿದರು.
ಈ ಸುದ್ದಿ ಓದಿದ್ದೀರಾ? ಮಡಿಕೇರಿ | ಭೂಮಿ ಹಾಗೂ ನಿವೇಶನಕ್ಕಾಗಿ ಬೃಹತ್ ರ್ಯಾಲಿ; ಪ್ರಗತಿಪರ ಸಂಘಟನೆಗಳ ಬೆಂಬಲ
ಕಾರ್ಯಕ್ರಮದಲ್ಲಿ ಉದ್ಘಾಟನಾ ಭಾಗವಾಗಿ ಪ್ರಥಮ ಚಿಕಿತ್ಸಾ ವಿಧಾನದ ಬಗ್ಗೆ ಲಘು ತರಬೇತಿಯನ್ನು ಎಚ್ಆರ್ಎಸ್ನ ತರಬೇತುದಾರ ಉಡುಪಿಯ ಸಲೀಮ್ ಹಾಗೂ ಮಲ್ಪೆಯ ಝುಬೇರ್ ಪ್ರಾತ್ಯಕ್ಷಿಕೆಯಾಗಿ ತರಬೇತಿ ನೀಡಿದರು.