ಡೈರಿಯೊಂದರಲ್ಲಿ ಶುದ್ಧ ಹಾಲಿಗೆ ಸಿಬ್ಬಂದಿಯೋರ್ವ ನೀರನ್ನು ಕಲಬೆರಕೆ ಮಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಾಡಿಕೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಬಿಎಂಸಿ ಕೇಂದ್ರದಲ್ಲಿ ಹಾಲಿಗೆ ನೀರು ಬೆರೆಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಿಎಂಸಿ ಕೇಂದ್ರದಲ್ಲಿ ಕೆಲಸ ನಿರ್ವಹಿಸುವ ಸಹಾಯಕ ಚೇತನ್ ಹಾಗೂ ಇತರರು ಹಾಲಿಗೆ ನೀರು ಬೇರೆಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೋಚಿಮುಲ್ ಎಂಡಿ ಶ್ರೀನಿವಾಸ್ ಗೌಡ, ಹಾಲಿಗೆ ನೀರು ಬೇರೆಸಿದ್ದು ಸರಿಯಲ್ಲ. ಹಾಲಿಗೆ ನೀರು ಬೆರೆಸಿರುವ ಸಿಬ್ಬಂದಿಯನ್ನು ಈಗಾಗಲೇ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.