ಮುಂಬೈನಲ್ಲಿರುವ ತನ್ನ ನಿವಾಸದಲ್ಲಿ ಚಾಕು ಇರಿತಕ್ಕೆ ಒಳಗಾದ ನಟ ಸೈಫ್ ಅಲಿ ಖಾನ್ ಚೇತರಿಸಿಕೊಳ್ಳುತ್ತಿದ್ದು, ಇನ್ನೆರಡು ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಬಹುದು ಎಂದು ಶನಿವಾರ ವೈದ್ಯರು ಹೇಳಿದ್ದಾರೆ.
ಕುತ್ತಿಗೆ, ಬೆನ್ನು ಮೂಳೆ ಸೇರಿದಂತೆ ದೇಹದ ಹಲವು ಕಡೆ ಸೈಫ್ ಅಲಿ ಖಾನ್‌ಗೆ ಗುರುವಾರ ಚಾಕುವಿನಿಂದ ಇರಿಯಲಾಗಿದೆ. ಕಳ್ಳತನ ಮಾಡಲು ಬಂದಾತ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಸದ್ಯ ಸೈಫ್ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನು ಓದಿದ್ದೀರಾ? ನಟ ಶಿವರಾಜ್‌ಕುಮಾರ್‌ಗೆ ಕ್ಯಾನ್ಸರ್: ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿ; ವೈದ್ಯರು ಹೇಳಿದ್ದೇನು?
ಸದ್ಯ ಸೈಫ್ ಅವರನ್ನು ತುರ್ತು ನಿಗಾ ಘಟಕದಿಂದ ಸ್ಥಳಾಂತರಿಸಲಾಗುತ್ತಿದ್ದು, ಆರೋಗ್ಯ ಸುಧಾರಿಸುತ್ತಿದೆ ಎಂದು ಹೇಳಲಾಗಿದೆ.
“ನಾವೆಲ್ಲರೂ ಸೈಫ್ ಅಲಿ ಖಾನ್‌ನ ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸಿದ್ದೇವೆ. ಚಿಕಿತ್ಸೆಗೆ ಉತ್ತಮ ಪ್ರತಿಕ್ರಿಯೆಯಿದೆ. ಸದ್ಯ ಅವರು ಕೊಂಚ ಸಮಯ ವಿಶ್ರಾಂತಿ ಪಡೆಯಬೇಕು. ಇನ್ನು ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು” ಎಂದು ಲೀಲಾವತಿ ಆಸ್ಪತ್ರೆಯ ವೈದ್ಯ ಡಾ. ನಿತಿನ್ ಡಂಗೆ ಹೇಳಿದ್ದಾರೆ.
ಇನ್ನು ಸೈಫ್ ಅಲಿ ಖಾನ್ ಮೇಲೆ ಹಲ್ಲೆ ಮಾಡಿದ ಆರೋಪಿಯ ಪತ್ತೆಗಾಗಿ ಪೊಲೀಸರು 30 ತಂಡಗಳನ್ನು ರಚಿಸಿದೆ. ಶಂಕಿತ ಆರೋಪಿಯ ಸಿಸಿಟಿವಿ ಚಿತ್ರ ಬಿಡುಗಡೆ ಮಾಡಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ.
