ಶಿವಮೊಗ್ಗದ ನಗರದ ಆರ್‌ಎಂಸಿ ಆಟೋ ನಿಲ್ದಾಣದ ಆಟೋ ಚಾಲಕ ಪ್ರಯಾಣಿಕರಿಗೆ ಮೊಬೈಲ್ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದು, ದೊಡ್ಡಪೇಟೆ ಪೋಲೀಸರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ನಗರದ ಬಸ್ ನಿಲ್ದಾಣದಿಂದ ಇಂದು ಗಾಡಿಕೊಪ್ಪಕ್ಕೆ ಪ್ರಯಾಣಿಕರೊಬ್ಬರು ಆಟೋದಲ್ಲಿ ತೆರಳುವಾಗ ಮೊಬೈಲನ್ನು ಆಟೋದಲ್ಲಿ ಬೀಳಿಸಿಕೊಂಡು ಹೋಗಿದ್ದರು. ನಂತರ ಆಟೋ ಚಾಲಕ ಪ್ರಫುಲ್ ಚಂದ್ರ ಎಂಬುವವರು ಮೊಬೈಲನ್ನು ವಾರಸುದಾರರಿಗೆ ಹಿಂದುರಿಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಈ ಸುದ್ದಿ ಓದಿದ್ದೀರ? ಕಲಬುರಗಿ | ಔಷಧಿ ಪಡೆಯಲು ಹೋದ ವ್ಯಕ್ತಿ ಜಯದೇವ ಆಸ್ಪತ್ರೆಯ ಆಳವಾದ ಗುಂಡಿಗೆ ಬಿದ್ದು ಗಂಭೀರ
ಆಟೋ ಚಾಲಕ ಪ್ರಫುಲ್ ಚಂದ್ರ ನಗರದ ಆರ್‌ಎಂಸಿ ಆಟೋ ನಿಲ್ದಾಣದ ಅಧ್ಯಕ್ಷರಾಗಿದ್ದಾರೆ. ಇವರ ಪ್ರಾಮಾಣಿಕ ಕಾರ್ಯಕ್ಕೆ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ಪಿಐ ರವಿ ಸಂಗನಗೌಡ ಪಾಟೀಲ್ ಶ್ಲಾಘಿಸಿದ್ದಾರೆ.