ರಾಯಚೂರು ನಗರದ ಗೋಶಾಲ ರಸ್ತೆಯಿಂದ ಚಂದ್ರಮೌಳೇಶ್ವರ ವೃತ್ತದವರೆಗಿನ 80 ಅಡಿ ರಸ್ತೆಗೆ ಸಮಾಜ ಸುಧಾರಕರ ಹೆಸರಿಡಬೇಕು. ಸಚಿವ ಎನ್ ಎಸ್ ಬೋಸರಾಜು ಹೆಸರು ಇಡಬಾರದು ಎಂದು ಅಖಿಲ ಭಾರತ ಬಿ ಆರ್ ಅಂಬೇಡ್ಕರ್ ಸಂಘದಿಂದ ಒತ್ತಾಯಿಸಿದರು.
ರಾಯಚೂರು ನಗರದ ಗೋಶಾಲ ರಸ್ತೆಯಿಂದ ಚಂದ್ರಮೌಳೇಶ್ವರ ವೃತ್ತದವರೆಗೆ ಇರುವ 80 ಅಡಿ ರಸ್ತೆಗೆ ಎನ್.ಎಸ್.ಬೋಸರಾಜು ಹೆಸರು ನೋಂದಾಯಿಸುವುದು ಸೂಕ್ತವಾಗಿರುವುದಿಲ್ಲ. ಸದರಿ ರಸ್ತೆಗೆ ಗೌತಮ ಬುದ್ಧ, ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನರಾಮ್, ಎ.ಪಿ.ಜೆ. ಅಬ್ದುಲ್ ಕಲಾಂ, ಶ್ರೀ ಶರಣ ಅರಳ್ಳಯ್ಯ ಹೀಗೆ ಅನೇಕ ಸಮಾಜ ಸುಧಾರಕ ಹೆಸರಿಡಬೇಕು ಎಂದು ಮನವಿ ಮಾಡಿದರು.
ಯಾವುದೇ ರಾಜಕೀಯ ವ್ಯಕ್ತಿಗಳ ಅಲ್ಲದೇ ತಮ್ಮ ಸ್ವಂತ ಪರಿಶ್ರಮದಿಂದ ಯಾವುದೇ ಆಸೆ ಆಕಾಂಕ್ಷಿಗಳಲ್ಲದೇ ಸಮಾಜ ಸುಧಾರಕರ ಹೆಸರು ಇಡಬೇಕೆಂದು ಸಾರ್ವಜನಿಕರ ಅಭಿಪ್ರಾಯವಾಗಿರುತ್ತದೆ. ಇದರಿಂದ ಸಮಾಜದಲ್ಲಿ ಯುವಕರು ಇಂತಹ ಮಹಾನೀಯರ ಮಾರ್ಗಸೂಚಿಗಳನ್ನು ಮೈಗೂಡಿಸಿಕೊಳ್ಳುವಂತಾಗಬೇಕು. ಈ ವಿಷಯದ ಕುರಿತು ನಗರದಲ್ಲಿ ರಾಜಕೀಯ ಪಕ್ಷಗಳು ನಮ್ಮ ಪಕ್ಷ, ಗೊಂದಲಗಳಿವೆ ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಜ.21ರಂದು ‘ಗಾಂಧಿ ಭಾರತ’ ಸಮಾವೇಶ: ಸಚಿವ ಮಧು ಬಂಗಾರಪ್ಪ
ಸಂಬಂಧ ಪಟ್ಟ ಇಲಾಖೆ ರಾಯಚೂರು ನಗರದ ಗೋಶಾಲ ರಸ್ತೆಯಿಂದ ಚಂದ್ರಮೌಳೇಶ್ವರ ವೃತ್ತದವರೆಗೆ ಸಮಾಜ ಸುಧಾರಕರ ಹೆಸರು ಇಡಬೇಕು ಹಾಗೂ ಈ ರಸ್ತೆಗೆ ನಾಮಕರಣ ಮಾಡಬೇಕೆಂದು ಆಗ್ರಹಿಸಿದರು.
ಈ ವೇಳೆ ಹನುಮಂತ ,ಮಾರೆಪ್ಪ , ನರಸಿಂಹಲು ,ಮಲ್ಲಿಕಾರ್ಜುನ, ವೀರೇಶ್ ಇನ್ನಿತರರು ಹಾಜರಿದ್ದರು.
