ಬೆಳಗಾವಿ ನಗರದಲ್ಲಿ ರಾಮದುರ್ಗ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅಶೋಕ ಪಟ್ಟಣ ಸುದ್ದಿಗಾರರೊಂದಿಗೆ ಮಾತನಾಡಿ “ನಾನು ಬಸವ ತತ್ವ ಪಾಲಿಸುವವನು ಸಚಿವ ಸ್ಥಾನ ಕೊಡುವುದಾಗಿ ಸಿದ್ದರಾಮಯ್ಯನವರು ಹೇಳಿದ್ದಾರೆ ಕಾಯುತ್ತೆನೆ” ಎಂದು ಹೇಳಿದ್ದಾರೆ
“ಜಾತಿ ಆಧಾರದಲ್ಲಿ ನಾನು ಸಚಿವ ಸ್ಥಾನ ಕೇಳುವದಿಲ್ಲ ನಾನು ಬಸವ ತತ್ವ ಪಾಲಿಸುವವನು ಮಾರ್ಚ್ ಬಜೆಟ್ ನಂತರ ಸಚಿವ ಸಂಪುಟ ಪುನಾರಚನೆ ಆಗುವ ಸಾಧ್ಯತೆಗಳಿವೆ ಅಭಿಮಾನಿಗಳು ನಾನು ಸಚಿವರಾಗಲಿ ಎಂದು ಬಯಸುವುದು ಸಹಜ ಸಿದ್ದರಾಮಯ್ಯನವರು ನನಗೆ ಸಚಿವರನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದಾರೆ ಕಾಯುತ್ತೆನೆ” ಎಂದು ಹೇಳಿದ್ದಾರೆ