ಬಿಎಂಟಿಸಿ ಎಲೆಕ್ಟ್ರಿಕಲ್ ಬಸ್ ಬ್ರೇಕ್ ವಿಫಲವಾಗಿ ಬೀಡಾ ಅಂಗಡಿ ಹಾಗೂ ಡಾಬಾ ಗೋಡೆಗೆ ಡಿಕ್ಕಿಯಾದ ಘಟನೆ ಕೆಂಗೇರಿಯ ನಾಗದೇವನಹಳ್ಳಿ ರಸ್ತೆಯಲ್ಲಿ ನಡೆದಿದೆ.
ಬೆಳಗ್ಗೆ 6.27ರ ಸುಮಾರಿಗೆ ಬಸ್ ಶಿರ್ಕೆ ಸರ್ಕಲ್‌ನಿಂದ ನಾಗರಭಾವಿ ಕಡೆ ಹೊರಟಿತ್ತು. ಈ ಸಮಯದಲ್ಲಿ ಬಸ್ ಅಪಘಾತ ನಡೆದಿದೆ. ಅಪಘಾತದ ವೇಳೆ ರಸ್ತೆಯಲ್ಲಿ ಯಾರು ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ.
ಅವಘಡದಿಂದ ಬಸ್‌ನಲ್ಲಿದ್ದ ಮೂವರು ಪ್ರಯಾಣಿಕರು ಕೆಲ ಸಮಯ ಆತಂಕಕ್ಕೆ ಒಳಗಾಗಿದ್ದರು.ಅಪಘಾತದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದಲ್ಲೇವಾಲ್ ಉಪವಾಸಕ್ಕೂ ಸ್ಪಂದಿಸದ ಮೋದಿ ಮತ್ತೆ ಮಂಡಿಯೂರುವುದು ಸನ್ನಿಹಿತ!
ಒಂದು ದಿನದ ಹಿಂದಷ್ಟೆ ಚಾಮರಾಜ ನಗರ ಅಜ್ಜೀಪುರ – ಹನೂರು ಮಾರ್ಗಮಧ್ಯೆ ಕೆಎಸ್‌ಆರ್‌ಟಿಸಿ ಬಸ್ ಬ್ರೇಕ್ ವಿಫಲವಾಗಿ, ಚಾಲಕನ ಸಮಯಪ್ರ ಜ್ಞೆಯಿಂದ ಪ್ರಯಾಣಿಕರು ಪಾರಾಗಿದ್ದರು.
ಬೆಳಗ್ಗೆ 10 ಗಂಟೆಯಲ್ಲಿ ಬಸ್ ರಾಮಾಪುರದಿಂದ ಹನೂರಿನತ್ತ ತೆರಳುತ್ತಿತ್ತು . 60 ಜನ ಪ್ರಯಾಣಿಸುತ್ತಿದ್ದರು. ಈ ವೇಳೆ ಅಜ್ಜೀ ಪುರ ಗ್ರಾಮ ಸಮೀಪದ ಆಂಜನೇಯಸ್ವಾಮಿ ದೇಗುಲದ ಬಳಿ ಬಸ್‌ನ ಬ್ರೇಕ್ ವಿಫಲಗೊಂಡಿತು. ಇದನ್ನು ಅರಿತ ಚಾಲಕ ರಸ್ತೆ ಬದಿಯಲ್ಲಿ ನಿಧಾನವಾಗಿ ಬಸ್ ನಿಲ್ಲಿಸುವ ಮೂಲಕ ಸಮಯಪ್ರಜ್ಞೆಯನ್ನು ಮೆರೆದಿದ್ದರು. ನಂತರ ಬೇರೊಂದು ಬಸ್ಸಿನಲ್ಲಿ ಎಲ್ಲರೂ ನಿಗದಿತ ಸ್ಥಳಕ್ಕೆ ತೆರಳಲು ಅನುವು ಮಾಡಿಕೊಡಲಾಯಿತು.
