ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಮೀಪದಲ್ಲಿರುವ ಕೊಣೆಬೈಲು ಗ್ರಾಮದಲ್ಲಿ ದಲಿತ ಸಮುದಾಯದ 60ಕ್ಕಿಂತ ಅಧಿಕ ಕುಟುಂಬಗಳು ನೂರಾರು ವರ್ಷದಿಂದ ಬದುಕು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಆದರೆ ಈವರೆಗೆ ಸರಿಯಾದ ಸವಲತ್ತುಗಳಿಲ್ಲದೆ ಮೂಲಸೌಕರ್ಯದಿಂದ ವಂಚಿತರಾಗಿದ್ದಾರೆ.
“ಕುಡಿಯುವ ನೀರು ವ್ಯವಸ್ಥೆಯಿಲ್ಲ, ದಾರಿ ದೀಪಗಳಿಲ್ಲ, ಓಡಾಡಲು ಸೂಕ್ತವಾದ ರಸ್ತೆಯಿಲ್ಲ, ಇಷ್ಟು ವರ್ಷದಿಂದ ವಾಸ ಮಾಡಿದರೂ ಹಕ್ಕುಪತ್ರವಿಲ್ಲದೆ ಪರದಾಟ ಹೀಗೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸುಮಾರು ವರ್ಷದಿಂದ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದನೆ ಸಿಗುತ್ತಿರಲಿಲ್ಲ. ನಂತರ ಪಟ್ಟು ಬಿಡದೆ ಅಧಿಕಾರಿಗಳ ಕಚೇರಿಗೆ ಅಲೆದು, ಕುಡಿಯುವ ನೀರಿನ ವ್ಯವಸ್ಥೆಯಾಗಿದೆ” ಎಂದು ಸ್ಥಳೀಯರು ಹೇಳುತ್ತಾರೆ.

“ಕುಡಿಯುವ ನೀರಿಗೆ ಪಕ್ಕದ ಕಾಫಿ ಎಸ್ಟೇಟ್ ಮಾಲೀಕ 4 ಇಂಚು ಪೈಪ್ ಅಳವಡಿಸಿಕೊಂಡು, ಕುಡಿಯಲು ಹಾಗೂ ತನ್ನ ಕಾಫಿ ತೋಟಕ್ಕೆ ನೀರನ್ನು ಬಳಸಿಕೊಳ್ಳುತ್ತಿದ್ದಾರೆ. ಮುಕ್ಕಾಲು ಇಂಚು ಪೈಪ್ ಮಾತ್ರ ನಮಗೆ ಹಾಕಿದ್ದಾರೆ. ಅಧಿಕಾರಿಗಳು ಬಂದು ಸಮಸ್ಯೆಯನ್ನು ಬಗೆ ಹರಿಸಿದರು, ಸದ್ಯಕ್ಕೆ ಕುಡಿಯಲು ತಾತ್ಕಾಲಿಕ ವ್ಯವಸ್ಥೆ ಮಾತ್ರವಿದೆ” ಎಂದು ಗ್ರಾಮಸ್ಥರು ಈ ದಿನ.ಕಾಮ್ಗೆ ತಿಳಿಸಿದರು.

“ಅದೆಷ್ಟೋ ವರ್ಷಗಳ ನಂತರ ಪಂಚಾಯಿತಿಯಿಂದ ಬೀದಿದೀಪ, ಮನೆಗೆ ವಿದ್ಯುತ್ ದೀಪಗಳನ್ನು ಕೆಂಡೆವು. ಆದರೆ, ವಿದ್ಯುತ್ ದೀಪಗಳು ಹಾಳಾದರೂ ಅಧಿಕಾರಿಗಳು ಗಮನ ಹರಿಸುವುದಿಲ್ಲ. ಗ್ರಾಮಸ್ಥರೆಲ್ಲ ಸೇರಿ ಪಂಚಾಯಿತಿಗೆ ಹೋಗಿ ಕೇಳಿದಾಗ ಪಿಡಿಒ ಅವರು ಹಾಕಿಸಿಕೊಡುವುದಾಗಿ ಹೇಳಿದ್ದಾರೆ. ಆದರೆ ಅದೆಷ್ಟರ ಮಟ್ಟಿಗೆ ಕೆಲಸವಾಗುತ್ತದೆಂದು ಕಾದು ನೋಡಬೇಕು” ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

“ದೇವರಗುಡ್ಡ ಮಾರ್ಗವಾಗಿ ಹೋಗುವ ಕೊಣೆಬೈಲು ಗ್ರಾಮಕ್ಕೆ ಸರಿಯಾದ ರಸ್ತೆಗಳೇ ಇಲ್ಲ. ಕಲ್ಲು,ಮುಳ್ಳು, ಗುಂಡಿಗಳಿಂದ ಕೂಡಿರುವ ರಸ್ತೆಯಿದೆ. ಗರ್ಭಿಣಿಯರು, ಬಾಣಂತಿಯರು ಆಸ್ಪತ್ರೆಗೆ ಹೋಗಬೇಕೆಂದರೆ ಹರಸಾಹಸ ಪಡಬೇಕು. ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ಈ ರಸ್ತೆಯಲ್ಲೇ ಓಡಾಡಬೇಕು. ಅದರೆ, ಮಳೆಗಾಲದಲ್ಲಂತೂ ಕೆಸರು ಮೈಯಿಗೆ ಮೆತ್ತಿ ಪಠ್ಯಪುಸ್ತಕ ಕೆಸರಿನಮಯವಾಗುತ್ತೆದೆ. ಅದರಲ್ಲೂ ನಮಗೆ ಓಡಾಡಲು ಎಸ್ಟೇಟ್ ಮಾಲೀಕರು ಬಿಡುವುದಿಲ್ಲ. ಗೇಟಿಗೆ ಬೀಗ ಹಾಕುತ್ತಾರೆ. ನಮಗೆ ಒಂದೊಂದು ಸಲ ಶಾಲೆಗೆ ಹೋಗಲೂ ಆಗುವುದಿಲ್ಲ” ಎಂದು ಅಲ್ಲಿನ ಮಕ್ಕಳು ಕಣ್ಣೀರಿಟ್ಟರು.

“ಸುಮಾರು ವರ್ಷಗಳಿಂದ ಕೊಣೆಬೈಲು ಗ್ರಾಮದ ಈ ಭಾಗಕ್ಕೆ ಓಡಾಡಲು ನಕಾಶೆ ರಸ್ತೆ ಇದ್ದರೂ, ಕಾಫಿ ಎಸ್ಟೇಟ್ ಮಾಲೀಕ ಸತ್ಯಾನಂದ ಆ ಜಾಗದಲ್ಲಿ ನಾವು ತಿರುಗಾಡಲು, ಬೈಕ್ ಅಥವಾ ಆಟೊಗಳು ಬರಲೂ ಕೂಡಾ ಬಿಡುವುದಿಲ್ಲ. ʼಇಲ್ಲಿ ಯಾರನ್ನು ಹೇಳಿ ಕೇಳಿ ಓಡಾಡುತ್ತೀರಾ, ಇಲ್ಲಿ ಯಾರೂ ತಿರುಗಾಡಬಾರದುʼ ಎಂದು ಧಮ್ಕಿ ಹಾಕಿದ್ದರು. ನಮಗೆ ಪರ್ಯಾಯ ರಸ್ತೆಯಿಲ್ಲದ ಕಾರಣ ನಾವು ಇದೇ ರಸ್ತೆಯಲ್ಲೇ ತಿರುಗಡಬೇಕು. ನಾವು ತಿರುಗಾಡದಂತೆ ಒಂದು ಗೇಟ್ ನಿರ್ಮಿಸಿ, ಅದಕ್ಕೆ ಬೀಗ ಹಾಕಿದ್ದಾರೆ. ಇದರಿಂದ ಎಲ್ಲರಿಗೂ ಸಮಸ್ಯೆ ಆಗುತ್ತಿದೆ” ಎಂದರು.

ಇಸನ್ನೂ ಓದಿದ್ದೀರಾ?ಚಿಕ್ಕಮಗಳೂರು | ಸರ್ಕಾರದ ಕಾನೂನು ಆದೇಶದಂತೆ ಅರಣ್ಯ ಒತ್ತುವರಿ ತೆರವು; ಅಡಕೆ ತೋಟ ಸಂಹಾರ
“ನಮ್ಮ ಗ್ರಾಮದಲ್ಲಿ ಆಗುತ್ತಿರುವ ಸಮಸ್ಯೆಯನ್ನು ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಬಗೆಹರಿಸಬೇಕು. ಈ ಗ್ರಾಮಕ್ಕೆ ಆಗಬೇಕಾದ ಅಭಿವೃದ್ಧಿ ಹಾಗೂ ಸಮಸ್ಯೆಗಳನ್ನು ಅಧಿಕಾರಿಗಳು ಕೂಡಲೇ ಬಗೆಹರಿಸಬೇಕು” ಎಂದು ಮನವಿ ಮಾಡಿದರು.
ಆ ಎಸ್ಟೇಟ್ ಓನರ್ ನನ್ನ ಶಾಟಕ್ಕೆ ಸಮ.. ಬೇಕಾದರೆ ಗೂಗಲ್ನಲ್ಲಿ ಹುಡುಕಿ, ಅವನ ಹೆಸರನ್ನು ಟೈಪ್ ಮಾಡಿ ನೋಡಿ ನನ್ನ ಶಾಟದ ಚಿತ್ರ ಬರುತ್ತದೆ