ವಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಪಕ್ಷವಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಲು ಮೌಲ್ಯಾಧಾರಿತ ವಿಚಾರಗಳ ಮೇಲೆ ಶ್ರಮಿಸುತ್ತಿದೆ ಎಂದು ವೆಲ್ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್ ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ನಗರದಲ್ಲಿ ಜಿಲ್ಲಾ ಘಟಕದ ಪದಾಧಿಕಾರಿಗಳ ನೇಮಕ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, “ವೆಲ್ಫೇರ್ ಪಾರ್ಟಿ ಕೇವಲ ರಾಜಕಾರಣಕ್ಕೆ ಸೀಮಿತವಾಗದೆ ಮೌಲ್ಯಾಧಾರಿತ ವಿಚಾರಗಳು, ನೈತಿಕ ನಿಯಮದ ಮೇಲೆ ನಡೆಯುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಲೋಕಾಯುಕ್ತದಲ್ಲಿ ಸರ್ಕಾರಿ ಅಧಿಕಾರಿಗಳ ಆಸ್ತಿ ವಿವರ ಸಿಗುವಂತಾಗಲಿ: ನಿರುಪಾದಿ ಕೆ ಗೋಮರ್ಸಿ
“ಪಕ್ಷವು ಹಲವು ವರ್ಷಗಳಿಂದ ದೇಶಾದ್ಯಂತ ಸಮಾಜ ಸೇವೆ ಚಟುವಟಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತ ಬಂದಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು ವೆಲ್ಫೇರ್ ಪಾರ್ಟಿಯನ್ನು ಬೆಂಬಲಿಸುತ್ತ ಕೈ ಜೋಡಿಸಿದ್ದಾರೆ” ಎಂದರು.
ಈ ವೇಳೆ ಜಿಲ್ಲಾ ಜಿಲ್ಲಾಧ್ಯಕ್ಷ ಮೌಲಾನಾ ಶೇಕ್ ಫರೀದ್ ಉಮ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಘನಿ, ಉಪಾಧ್ಯಕ್ಷರಾಗಿ ಮೆಹಬೂಬ್ ಖಾನ್, ಗುಲಾಮ್ ಮೊಹಮ್ಮದ್, ಫಾರೂಕ್ ಮನಿಯಾರ್, ಎಂಎಎಚ್ ಮುಕೀಮ್, ನಾಸೀರ್ ಅಲಿ ಸೇರಿದಂತೆ ಇತರರು ಇದ್ದರು.
