ರಾಜ್ಯದಲ್ಲಿ ಹಗಲು ದರೋಡೆ ಕಳ್ಳತನ ಪ್ರಯತ್ನಕ್ಕೆ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ರಾಯಚೂರು ತಾಲೂಕು ವ್ಯಾಪ್ತಿಯ ಬ್ಯಾಂಕ್ ಅಧಿಕಾರಿಗಳೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಅಧ್ಯಕ್ಷತೆಯಲ್ಲಿ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಿತು.
“ಬೀದರ್ ನಗರದಲ್ಲಿ ಎಟಿಎಂನಲ್ಲಿ ಹಣ ತುಂಬಲು ತೆಗದುಕೊಂಡು ಹೋಗುತ್ತಿರುವಾಗ ದರೋಡೆ ಮಾಡಿ ಒಬ್ಬ ಬ್ಯಾಂಕ್ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಲೆ ಮಾಡಿದ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಬ್ಯಾಂಕ್‌ನಲ್ಲಿ ಹಗಲು ದರೋಡೆ ಪ್ರಕರಣಗಳು ದಾಖಲಾಗಿದ್ದು, ಸಿಬ್ಬಂದಿಗಳು ಎಚ್ಚೆತ್ತುಕೊಳ್ಳಬೇಕು” ಎಂದರು.
“ಬ್ಯಾಂಕ್‌ನಲ್ಲಿ ಇರುವ ಸಿಸಿಟಿವಿಗಳು ಸುವ್ಯಸ್ಥೆಯಲ್ಲಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಬ್ಯಾಂಕ್‌ನಲ್ಲಿರುವ ಸೆಕ್ಯೂರಿಟಿ ಸಿಬ್ಬಂದಿಗಳಿಗೆ ಬ್ಯಾಂಕ್ ಸೆಕ್ಯೂರಿಟಿಯ ಬಗ್ಗೆ ಸರಿಯಾಗಿ ನಿಗಾವಹಿಸುವಂತೆ ಖಡಕ್ ಸೂಚಿಸುವುದು. ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಹತ್ತಿರದ ಠಾಣೆಗೆ, ಸರಹದ್ದಿನ ಠಾಣೆಗೆ ಮಾಹಿತಿ ನೀಡಬೇಕು” ಎಂದು ಹೇಳಿದರು.
“ಬ್ಯಾಂಕ್ ಆವರಣದ ಸುತ್ತಮುತ್ತ ಇರುವ ಏರಿಯಾವನ್ನು ಸೆರೆಹಿಡಿಯುವ ಹಾಗೆ ಒಳ್ಳೆಯ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಬ್ಯಾಂಕ್‌ನಲ್ಲಿ ಹೆಚ್ಚಿನ ಮೊತ್ತದ ಹಣ, ಚಿನ್ನವನ್ನು ಡ್ರಾ ಮಾಡಿಕೊಂಡು ಹೋಗುವ ಗ್ರಾಹಕರಿಗೆ ಕಳ್ಳರಿಂದ, ಅಪರಿಚಿತರಿಂದ ಜಾಗೃತತೆಯಿಂದ ಇರಲು ತಿಳಿಸಬೇಕು. ಬ್ಯಾಂಕ್‌ನಲ್ಲಿ ಹತ್ತಿರದ ಪೊಲೀಸ್ ಠಾಣೆಯ, ಪೊಲೀಸ್ ಅಧಿಕಾರಿಗಳ ಫೋನ್ ನಂಬರ್‌ಗಳನ್ನು ಬ್ಯಾಂಕ್‌ನಲ್ಲಿ ಕಾಣುವಂತೆ ಹಾಕಬೇಕು” ಎಂದು ಹೇಳಿದರು.
“ಎಟಿಎಂಗಳಲ್ಲಿ ಸಿಸಿಟಿವಿ, ಅಲಾರ್ಮ್ ಹಾಗೂ 24ಗಂಟೆಯೂ ಸೆಕ್ಯೂರಿಟಿ ಗಾರ್ಡ್ ವ್ಯವಸ್ಥೆಯನ್ನು ಮಾಡುವುದು. ಒಂದು ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಬ್ಯಾಂಕ್‌ನಿಂದ ವಿತ್ ಡ್ರಾ ಹಿಂತೆಗೆದುಕೊಳ್ಳುವಾಗ ಮಾಡುವ ಗ್ರಾಹಕರೊಂದಿಗೆ ಅವರ ಸುರಕ್ಷತೆಗಾಗಿ ಜತೆಗೆ ಇನ್ನೊಬ್ಬರನ್ನು ಕರೆದುಕೊಂಡು ಬರುವಂತೆ ಬ್ಯಾಂಕ್ ಸಿಬ್ಬಂದಿಗಳು ತಿಳಿಸಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವೆಲ್ಫೇರ್ ಪಾರ್ಟಿ ಮೌಲ್ಯಾಧಾರಿತ ವಿಚಾರಗಳ ಮೇಲೆ ಶ್ರಮಿಸುತ್ತಿದೆ: ತಾಹೇರ್ ಹುಸೇನ್
“ಬ್ಯಾಂಕ್‌ನಲ್ಲಿ ಹಣವಿಡುವ ಭದ್ರತಾ ಕೋಣೆಗೆ ಸಿಸಟಿವಿ ವ್ಯವಸ್ಥೆ ಮಾಡುವುದು. ಪ್ರೈವೇಟ್ ಏಜೆನ್ಸಿಯವರು ಬ್ಯಾಂಕ್‌ನಿಂದ ಹಣವನ್ನು ವಾಹನದಲ್ಲಿ ತೆಗೆದುಕೊಂಡು ಹೋಗುವಾಗ ಸೂಕ್ತ ಭದ್ರತೆ ಬಗ್ಗೆ ದೃಢಪಡಿಸಿಕೊಳ್ಳುವುದು. ಒಂದು ವೇಳೆ ಇಲ್ಲದೇ ಇದ್ದಲ್ಲಿ ಹೆಚ್ಚಿನ ಭದ್ರತೆ ನೇಮಿಸುವುದು. ಬ್ಯಾಂಕ್‌ಗಳ ಭದ್ರತೆಗಾಗಿ ಅಧಿಕಾರಿ/ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವಾಗ ನಿವೃತ್ತ ಸೈನಿಕರು, ನಿವೃತ್ತ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಅದ್ಯತೆ ನೀಡಬೇಕು” ಎಂಬುದು ಸೇರಿದಂತೆ ಇತರೆ ಭದ್ರತಾ ವಿಚಾರಗಳ ಕುರಿತು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮುಂಜಾಗೃತಾ ಕ್ರಮಗಳನ್ನು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ, ಡಿವೈಎಸ್‌ಪಿ ಸತ್ಯನಾರಾಯಣರಾವ್ ಸೇರಿದಂತೆ ಇತರು ಇದ್ದರು.
