ಕುಂಭಮೇಳ | ಭಕ್ತರ ಪಾಪ ತೊಳೆಯುತ್ತಿದ್ದಾರೆ ಶೌಚಾಲಯ ಸ್ವಚ್ಛಗೊಳಿಸುವವರು!

Date:

Advertisements

ಉತ್ತರ ಪ್ರದೇಶದ ಪ್ರಯಾಗರಾಜ್ ನಗರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಧಾರ್ಮಿಕ ಸ್ನಾನ ಮಾಡಿದ ಲಕ್ಷಾಂತರ ಭಕ್ತರು ತಮ್ಮ ಪಾಪಗಳನ್ನು ಶುದ್ಧೀಕರಿಸಲು ಪೌರ ಕಾರ್ಮಿಕರನ್ನು ಅವಲಂಬಿಸಿದ್ದಾರೆ. ಹಿಂದು ಜಾತಿ ವ್ಯವಸ್ಥೆಯಲ್ಲಿ ತಳಮಟ್ಟದಲ್ಲಿರುವ, ತಳ ಸಮುದಾಯಕ್ಕೆ ಸೇರಿದ ಈ ಕಾರ್ಮಿಕರು ಕುಂಭಮೇಳದಲ್ಲಿ ಭಕ್ತರು ಧಾರ್ಮಿಕ ಸ್ನಾನ ಮಾಡಿ, ಬಿಟ್ಟುಹೋದ ಪಾಪಗಳನ್ನು ತೊಳೆಯುತ್ತಿದ್ದಾರೆ. 1.5 ಲಕ್ಷ ಶೌಚಾಲಯಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳುತ್ತಿದ್ದಾರೆ. ಸ್ವಚ್ಛವಾಗಿಡುತ್ತಿದ್ದಾರೆ.

ಸೋಮವಾರ ಆರಂಭವಾದ ಕುಂಭಮೇಳ ಉತ್ಸವವು ಫೆಬ್ರವರಿ 26ರವರೆಗೆ ನಡೆಯಲಿದೆ. ಕುಂಭಮೇಳದಲ್ಲಿ ತಮ್ಮ ಧರ್ಮನಿಷ್ಠೆ ಮತ್ತು ಧಾರ್ಮಿಕ ಸೇವೆಗಳನ್ನು ಸಲ್ಲಿಸಿ, ಗಂಗಾ-ಯಮುನಾ ನದಿಗಳ ಸಂಗಮದಲ್ಲಿ ಸ್ನಾನ ಮಾಡಲು ಲಕ್ಷಾಂತರ ಜನರು ಪ್ರಯಾಗರಾಜ್‌ ನಗರಕ್ಕೆ ಬರುತ್ತಿದ್ದಾರೆ. ಇಡೀ ನಗರ ಜನರಿಂದ ತುಂಬಿಹೋಗಿದೆ. ಆರು ವಾರಗಳ ಕಾಲ ನಡೆಯುವ ಉತ್ಸವದಲ್ಲಿ ಸುಮಾರು 40 ಕೋಟಿ ಜನರು ಭಾಗಿಯಾಗುವ ಸಾಧ್ಯತೆ ಇದೆ.

ಆರು ವಾರಗಳಲ್ಲಿ ಒಂದು ಪ್ರದೇಶಕ್ಕೆ 40 ಕೋಟಿ ಜನರು ತೆರಳುವುದು, ಸ್ನಾನ ಮಾಡುವುದು, ಶೌಚ ಸೇರಿದಂತೆ ನಾನಾ ಕೊಳಕನ್ನು ಮಾಡುವುದು, ತ್ಯಾಜ್ಯಗಳನ್ನು ಹರಡುವುದು ಸಾರ್ವಜನಿಕ ಆರೋಗ್ಯಕ್ಕೆ ಸವಾಲು ವೊಡ್ಡುತ್ತವೆ. ಕುಂಭಮೇಳಕ್ಕಾಗಿ ನದಿ ದಂಡೆಯಲ್ಲಿ 1,50,000 ತಾತ್ಕಾಲಿಕ ಶೌಚಾಲಯಗಳನ್ನು ಸ್ಥಾಪಿಸಲಾಗಿದೆ.

Advertisements

ಭಕ್ತರು ನಗರದಲ್ಲಿ ಉಂಟುಮಾಡುವ ತೊಳೆಯಲು, ಶೌಚಗಳನ್ನು ಶುಚಿಗೊಳಿಸಲು ಸುಮಾರು 5,000 ಪೌರ ಕಾರ್ಮಿಕರನ್ನು ನೇಮಿಸಲಾಗಿದೆ. ಕುಂಭಮೇಳ ನಡೆಯುವಲ್ಲಿ ಈ ಕಾರ್ಮಿಕರು ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಈ ಕಾರ್ಮಿಕರಿಂದಲೇ ಕುಂಭಮೇಳವು ಆರೋಗ್ಯಕರವಾಗಿ ನಡೆಯಲು ಸಾಧ್ಯವಾಗುತ್ತಿದೆ. ಆದರೆ, ಈ ಕಾರ್ಮಿಕರು ಯಾರು? ಇದೇ ಹಿಂದು ಧರ್ಮದಲ್ಲಿ ಸಾಮಾಜಿಕವಾಗಿ ಅಂಚಿಗೆ ದೂಡಲ್ಪಟ್ಟವರು, ಸಾಮಾಜಿಕ ಶ್ರೇಣಿಯಲ್ಲಿ ಕೆಳ ಹಂತದಲ್ಲಿ ಇರುವವರು.

“ನಾವು ಪ್ರದೇಶಗಳನ್ನು ನಿರಂತರವಾಗಿ ಸ್ವಚ್ಛಗೊಳಿಸುತ್ತಿದ್ದೇವೆ. ನೈರ್ಮಲ್ಯ ಕಾಪಾಡಲು ದುಡಿಯುತ್ತಿದ್ದೇವೆ. ಆದರೆ, ಜನರು ಕೇವಲ 10 ನಿಮಿಷಗಳಲ್ಲಿ ಮತ್ತೆ ಹಾಳುಮಾಡುತ್ತಾರೆ. ಅವ್ಯವಸ್ಥೆಗೊಳಿಸುತ್ತಾರೆ” ಎಂದು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿದ್ದ ಸುರೇಶ್ ವಾಲ್ಮೀಕಿ ಹೇಳಿದ್ದಾರೆ.

ಪ್ರಯಾಗ್‌ರಾಜ್ ನಗರದ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುತ್ತಿರುವ ಪ್ರತಿ ಹತ್ತು ಕಾರ್ಮಿಕರಲ್ಲಿ ಒಂಬತ್ತು ಮಂದಿ ಅಂಚಿಗೆ ತಳ್ಳಲ್ಪಟ್ಟ ಜಾತಿಗಳಿಂದ ಬಂದವರು ಎಂದು ಅಧಿಕೃತ ದತ್ತಾಂಶಗಳು ತೋರಿಸುತ್ತವೆ. ಅವರಲ್ಲಿ ಬಹುಪಾಲು ಜನರು ಒಂದು ಕಾಲದಲ್ಲಿ ‘ಅಸ್ಪೃಶ್ಯರು’ ಎಂದು ಕರೆಯಲಾಗುತ್ತಿದ್ದ ದಲಿತರಾಗಿದ್ದಾರೆ.

ಐದು ವರ್ಷಗಳ ಹಿಂದೆ, ಪ್ರಯಾಗರಾಜ್‌ನಲ್ಲಿ ಕೊನೆಯ ಬಾರಿಗೆ ಉತ್ಸವ ನಡೆದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಕುಂಭಮೇಳದ ಅಂತ್ಯದಲ್ಲಿ ಐದು ಕಾರ್ಮಿಕರ ಪಾದಗಳನ್ನು ತೊಳೆದಿದ್ದರು. ಕುಂಭಮೇಳ ಯಶಸ್ಸಿಗೆ ಇವರೇ ಕಾರಣವೆಂದು ಹಾಡಿಹೊಗಳಿದ್ದರು.

ಅದು, 2019ರ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಯುತ್ತಿದ್ದ ಕೆಲವೇ ತಿಂಗಳುಗಳ ಮುನ್ನ ಅವರು ಕಾರ್ಮಿಕರ ಪಾದಗಳನ್ನು ತೊರೆದು, ತಾವು ಹಿಂದು ಏಕತೆಯನ್ನು ಪ್ರತಿಬಿಂಬಿಸುತ್ತೇವೆಂದು ಪೋಸು ಕೊಟ್ಟಿದ್ದರು.

ಆದರೆ, ಇದೇ ಮೋದಿ ಅವರು ಪ್ರತಿಪಾದಿಸುವ ಹಿಂದುತ್ವ, ಅವರ ಬಿಜೆಪಿ-ಆರ್‌ಎಸ್‌ಎಸ್‌ ಜಾರಿಗೊಳಿಸಲು ವಂಚಿಸುತ್ತಿರುವ ಮನುಸ್ಮೃತಿಯು ‘ಒಬ್ಬ ಮನುಷ್ಯನ ಜೀವನದ ಸ್ಥಾನವನ್ನು ಜಾತಿಯು ಹುಟ್ಟಿನಿಂದಲೇ ನಿರ್ಧರಿಸಿರುತ್ತದೆ’ ಎಂದು ಹೇಳುತ್ತದೆ. ಹೀಗಿರುವಾಗ, ಮೋದಿ ಅವರು ಜಾತೀಯತೆಯನ್ನು ಮೀರಿ, ಏಕತೆಯನ್ನು ತರಲು ಸಾಧ್ಯವೇ? ವರ್ಣಾಶ್ರಮ ಆಧಾರಿತ ಜಾತಿ ವ್ಯವಸ್ಥೆ, ಮಹಿಳೆಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲಎಂದು ಪ್ರತಿಪಾದಿಸುವ ಆರ್‌ಎಸ್‌ಎಸ್‌-ಬಿಜೆಪಿ ಜಾತಿಗಳನ್ನು ಮೀರಿ, ಸಮಾನತೆಯ ಮಾತನಾಡಲು ಸಾಧ್ಯವೇ?

ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಪ್ರಬಲ ಜಾತಿಗಳು ಸಾಂಸ್ಕೃತಿಕ ಸವಲತ್ತುಗಳನ್ನು ಅನುಭವಿಸುತ್ತಿದ್ದರೆ, ತಳ ಸಮುದಾಯಗಳು ಬೇರೂರಿರುವ ತಾರತಮ್ಯವನ್ನು ಎದುರಿಸುತ್ತಿವೆ. ಕುಂಭಮೇಳದಲ್ಲಿ ಕೆಲಸ ಮಾಡುತ್ತಿರುವ ನೈರ್ಮಲ್ಯ ಕಾರ್ಮಿಕರು ಕೂಡ ಆಳವಾಗಿ ಬೇರೋರಿರುವ ತಿರಸ್ಕಾರದ ಮನೋಭಾವವನ್ನು ಎದುರಿಸುತ್ತಿದ್ದಾರೆ.

ಈ ವರದಿ ಓದಿದ್ದೀರಾ?: ಮಹಾ ಕುಂಭಮೇಳ ಯಾರಿಗಾಗಿ, ಯಾತಕ್ಕಾಗಿ?

“ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು ನಮ್ಮ (ಪೌರ ಕಾರ್ಮಿಕರು) ಕೆಲಸ ಎಂದು ಜನರು ಹೇಳುತ್ತಾರೆ. ಹಲವರು ಶೌಚಾಲಯಕ್ಕೆ ನೀರನ್ನೂ ಸಹ ಹಾಕುವುದಿಲ್ಲ. ಶೌಚಾಲಯಗಳಲ್ಲಿ ನೀರಿನ ಸಂಪರ್ಕ ಕಡಿತಗೊಂಡರೆ, ಅವರಿಗೆ ಬಕೆಟ್‌ನಲ್ಲಿ ನಾವೇ ನೀರನ್ನೂ ಸಹ ಪೂರೈಕೆ ಮಾಡಬೇಕು. ಕೆಲವರು ನೀರಿನ ಬಾಟಲಿಗಳನ್ನು ಬಳಸುತ್ತಾರೆ. ತಮ್ಮ ಕೆಲಸ ಮುಗಿದ ಬಳಿಕ ಆ ಬಾಟಲಿಗಳನ್ನು ಶೌಚಾಲಯದೊಳಗೆ ಬಿಟ್ಟು ಹೋಗುತ್ತಾರೆ” ಎಂದು ಕುಂಭಮೇಳದಲ್ಲಿ ಕೆಲಸ ಮಾಡಲು ಪ್ರಯಾಗ್‌ರಾಜ್‌ಗೆ 200 ಕಿ.ಮೀ ದೂರದಿಂದ ಬಂದಿದ್ದ ಗೀತಾ ವಾಲ್ಮೀಕಿ ಅಸಮಾಧಾನ ವ್ಯಕ್ತಪಡಿದ್ದಾರೆ.

“ಬಾಟಲಿಗಳನ್ನು ಒಳಗೆ ತೆಗೆದುಕೊಂಡು ಹೋಗಬೇಡಿ ಎಂದು ಜನರಿಗೆ ಹೇಳುತ್ತಲೇ ಇರುತ್ತೇವೆ. ಹೇಳಿ-ಹೇಳಿ ನಮ್ಮ ಗಂಟಲು ಹಾಳಾಗಿದೆ. ಆದರೆ, ಯಾರೂ ಕೇಳುವುದಿಲ್ಲ” ಎಂದು ಶೌಚಾಲಯಗಳ ಶುಚಿತ್ವದ ಮೇಲ್ವಿಚಾರಕ ಸುರೇಶ್ ಕುಮಾರ್ ಹೇಳಿದ್ದಾರೆ.

“ಕೈಯಾರೆ ಸ್ವಚ್ಛಗೊಳಿಸುವುದನ್ನು ತಪ್ಪಿಸಲು ಕಾರ್ಮಿಕರಿಗೆ ಜೆಟ್ ಸ್ಪ್ರೇ ಯಂತ್ರಗಳನ್ನು ಒದಗಿಸಲಾಗಿದೆ. ತ್ಯಾಜ್ಯವನ್ನು ಹೆಕ್ಕಲು ಆಧುನಿಕ ಉಪಕರಣಗಳನ್ನು ತರಲಾಗಿದೆ. ಸೆಪ್ಟಿಕ್ ಟ್ಯಾಂಕ್‌ಗಳು ಉಕ್ಕಿ ಹರಿಯದಂತೆ ಮತ್ತು ಶೌಚಾಲಯಗಳು ಉಸಿರುಗಟ್ಟಿಸದಂತೆ ಖಚಿತಪಡಿಸಿಕೊಳ್ಳಲು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ ಪೋರ್ಟಬಲ್ ಶೌಚಾಲಯ ಕ್ಯಾಬಿನ್‌ಗಳ ಸಾಲುಗಳನ್ನು ನಿರ್ವಹಿಸುವ ಕಾರ್ಮಿಕರಿಗೆ ಅವುಗಳನ್ನು ಸ್ವಚ್ಚಗೊಳಿಸುವುದು ಸವಾಲಿನ ಕೆಲಸ. ಅವರು ಕೊಳಕಾಗಿಬಿಡುತ್ತಾರೆ” ಎಂದು ಹೇಳಿದ್ದಾರೆ.

ವಿಶೇಷವಾಗಿ ಸ್ನಾನಗೃಹಗಳಿಗೆ ಹತ್ತಿರವಿರುವ ಶೌಚಾಲಯಗಳು ಮಲದಿಂದ ತುಂಬಿ ತುಳುಕುತ್ತಿರುತ್ತವೆ. ದುರ್ವಾಸನೆಯನ್ನು ತಪ್ಪಿಸಲು ಮೂಗು ಮುಚ್ಚಿಕೊಂಡು, ನೈರ್ಮಲ್ಯ ಕಾರ್ಮಿಕರು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ. ನಿರಂತರ ಜನಸಂದಣಿಯ ನಡುವೆ ಅವರ ಕೆಲಸವು ಯುದ್ಧದಂತೆ ತೋರುತ್ತದೆ ಎಂದು ದಿವೈರ್ ವರದಿ ಮಾಡಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

Download Eedina App Android / iOS

X