ತೆಲಂಗಾಣದಿಂದ ರಾಯಚೂರು ನಗರಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸಿಎಚ್ ಪೌಡರ್ ಮಿಶ್ರಿತ ಸೇಂದಿಯನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ನಗರದಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ.
ಸೇಂದಿ ಸಾಗಾಣಿಕೆ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳ ತಂಡ ಹಾಗೂ ಆರ್‌ಪಿಎಫ್ ಅಧಿಕಾರಿಗಳು 250 ಲೀಟರ್‌ಗೂ ಅಧಿಕ ಪ್ರಮಾಣದ ಕ್ಲೋರಲ್ ಹೈಡ್ರೆಡ್ ವಿಷಪೂರಿತ ರಾಸಾಯನಿಕ ಮಿಶ್ರಣ ಮಾಡಿ ಕಲಬೆರಿಕೆ ಸೇಂದಿ ತಯಾರಿಸಿ ಮಾರಾಟಕ್ಕಾಗಿ ಬಂದಿದ್ದರು ಎನ್ನಲಾಗಿದೆ.
ತೆಲಂಗಾಣದ ಕೃಷ್ಣ ಗ್ರಾಮದಿಂದ ರೈಲಿನ ಮೂಲಕ ರಾಯಚೂರಿಗೆ ಆಗಮಿಸಿ ನಗರದ ವಿವಿಧ ಬಡಾವಣೆಯಲ್ಲಿ ಸೇಂದಿ ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ರೈಲ್ವೆ ನಿಲ್ದಾಣದಲ್ಲಿ ದಾಳಿ ನಡೆಸಿದ್ದರು. ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧೀಸಿ, ಅಬಕಾರಿ ಕಾಯ್ದೆ ಉಲ್ಲಂಘನೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಲೋಕಾಯುಕ್ತದಲ್ಲಿ ಸರ್ಕಾರಿ ಅಧಿಕಾರಿಗಳ ಆಸ್ತಿ ವಿವರ ಸಿಗುವಂತಾಗಲಿ: ನಿರುಪಾದಿ ಕೆ ಗೋಮರ್ಸಿ
ದಾಳಿಯಲ್ಲಿ ಅಬಕಾರಿ ನಿರೀಕ್ಷಕರಾದ ಶೈಲಜಾ, ಹನುಮಂತ ಗುತ್ತೆದಾರ, ಸಣ್ಣಮಾರುತಿ, ಆರ್‌ಪಿಎಫ್ ಅಧಿಕಾರಿ ಮಹ್ಮದ್ ರಫೀ, ಸಿಬ್ಬಂದಿಗಳಾದ ಶಿವಾನಂದ, ಮಸ್ತಾನ್ ಸೇರಿದಂತೆ ಇತರರು ಇದ್ದರು.
