ಗಾಂಧಿ ಆದರ್ಶ ಎಂದರೆ ಪರಿಶಿಷ್ಟರ ಹಣ ಲೂಟಿ ಮಾಡುವುದಾ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, ಗಾಂಧಿ ಆದರ್ಶಗಳನ್ನು ಅನುಸರಿಸುವುದು ಎಂದರೆ ಪರಿಶಿಷ್ಟರ ಕಲ್ಯಾಣಕ್ಕೆ ವಿನಿಯೋಗವಾಗಬೇಕಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಲೂಟಿ ಮಾಡುವುದಾ? ಅಥವಾ ಸೂರಿಲ್ಲದ ಜನಸಾಮಾನ್ಯರು ಸೂರು ಕಟ್ಟಿಕೊಳ್ಳಲು ಸಿಗಬೇಕಾಗಿದ್ದ ಮುಡಾ ಸೈಟುಗಳನ್ನು ಲಪಟಾಯಿಸುವುದಾ? ಎಂದು ಪ್ರಶ್ನಿಸಿದ್ದಾರೆ
ಗಾಂಧಿ ತತ್ವಗಳನ್ನು ಅಳವಡಿಸಿಕೊಳ್ಳುವುದು ಎಂದರೆ ಗಾಂಧೀಜಿ ಅವರು ತಂದುಕೊಟ್ಟ ಸ್ವಾತಂತ್ರ್ಯ ಬಳಸಿಕೊಂಡು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವ ದೇಶದ್ರೋಹಿಗಳನ್ನು ಸಮರ್ಥನೆ ಮಾಡಿಕೊಳ್ಳುವುದಾ? ಅಥವಾ ಗೋಮಾತೆಯ ಕೆಚ್ಚಲು ಕತ್ತರಿಸಿದರೂ ಮೌನ ವಹಿಸುವುದಾ? ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದಲ್ಲೇವಾಲ್ ಉಪವಾಸಕ್ಕೂ ಸ್ಪಂದಿಸದ ಮೋದಿ ಮತ್ತೆ ಮಂಡಿಯೂರುವುದು ಸನ್ನಿಹಿತ!
ಗಾಂಧಿ ಕನಸನ್ನು ನನಸಾಗಿಸುವುದು ಎಂದರೆ ನಕಲಿ ಗಾಂಧಿಗಳ ಕೈಗೆ ಕಾಂಗ್ರೆಸ್ ಪಕ್ಷವನ್ನು ಕೊಟ್ಟು ಗುಮಲಾಗಿರಿ ಮಾಡುವುದಾ? ಅಥವಾ ಸ್ವತಂತ್ರ ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿ ಇಡೀ ದೇಶವನ್ನೇ ಜೈಲು ಮಾಡುವುದಾ? ಎಂದು ವಿಪಕ್ಷ ನಾಯಕ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಬಹುಶಃ ಇದನ್ನೆಲ್ಲಾ ಮುಂದಾಲೋಚನೆ ಮಾಡಿಯೇ ಗಾಂಧೀಜಿ ಅವರು ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಪಕ್ಷವನ್ನ ವಿಸರ್ಜನೆ ಮಾಡಬೇಕು ಎಂದು ಹೇಳಿದ್ದರು ಅನ್ನಿಸುತ್ತೆ. ಈಗಿರುವ ನಕಲಿ ಗಾಂಧಿಗಳು ಎಷ್ಟು ಡೋಂಗಿ ಗಾಂಧಿವಾದಗಳೋ ಅಧಿಕಾರಕ್ಕಾಗಿ ಅವರ ಗುಲಾಮಗಿರಿ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಅವರಿಗಿಂತ ಹೆಚ್ಚು ಡೋಂಗಿಗಳು ಎಂದು ವಾಗ್ದಾಳಿ ನಡೆಸಿದ್ದಾರೆ.
