10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ ಚಾಲನೆ ನೀಡಿದರು.
ಇಂದು ಬೆಳಿಗ್ಗೆ 10 ಗಂಟೆಗೆ ತಾಯಿ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷ ಪ್ರೊ. ಚಂದ್ರಶೇಖರ ವಸ್ತ್ರದ ಅವರ ಮೆರವಣಿಗೆಯು ಗಜೇಂದ್ರಗಡ ಪಟ್ಟಣದ ಮೈಸೂರ ಮಠದಿಂದ ವಿವಿಧ ಕಲಾತಂಡಗಳು, ಶಾಲಾ ಮಕ್ಕಳು ಹಾಗೂ ಮುಖಂಡರ ಸಮ್ಮುಖದಲ್ಲಿ ನಡೆಯಿತು.
ಪಟ್ಟಣದ ಮೈಸೂರ ಮಠದಿಂದ ಆರಂಭವಾದ ಭವ್ಯ ಸಾರೋಟಿನ ಮೆರವಣಿಗೆ ಬಸವೇಶ್ವರ ವೃತ್ತ, ದುರ್ಗಾ ವೃತ್ತ, ಜೋಡು ರಸ್ತೆ, ಕಾಲಕಾಲೇಶ್ವರ ವೃತ್ತ, ರೋಣ ರಸ್ತೆ ಮೂಲಕ ಸಮ್ಮೇಳನ ನಡೆಯಲಿರುವ ಜಗದ್ಗುರು ತೋಂಟದಾರ್ಯ ಸಿಬಿಎಸ್ಇ ಶಾಲೆ ಆವರಣದಲ್ಲಿರುವ ಮುಖ್ಯ ವೇದಿಕೆ ತಲುಪಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿಕತ್ವದ ಸೂಡಿ ಗ್ರಾಮದ ಚಂಡೆ ವಾದ್ಯ, ನರಗುಂದದ ಜಗ್ಗಲಗಿ, ಕೊಣ್ಣೂರಿನ ಗಾರುರಡಿ ಗೊಂಬೆ, ದರೋಜಿಯ ಹಗಲುವೇಷ, ಗಜೇಂದ್ರಗಡದ ಲಂಬಾಣಿ ದೊಡ್ಡೆವಾಜ, ಇಟಗಿ ಗ್ರಾಮದ ವೀರಭದ್ರೇಶ್ವರ ಕರಡಿ ಮಜಲು, ಡೊಳ್ಳು ಕುಣಿತ, ಬ್ಯಾಂಜ್ ಮೇಳ, ಹಲಗೆ ಮೇಳಗಳು ಇದ್ದವು.