ಕರ್ನಾಟಕ ಮೂಲದ ಬಾಲಿವುಡ್ ನಟಿ ಸುಲೋಚನಾ ಲಾತ್ಕರ್ ನಿಧನ

Date:

Advertisements

ಬಾಲಿವುಡ್ ಹಾಗೂ ಮರಾಠಿ ಸಿನಿಮಾ ರಂಗದ ಹಿರಿಯ ನಟಿ ಸುಲೋಚನಾ ಲಾತ್ಕರ್ ಅವರು ಭಾನುವಾರ ಸಂಜೆ ನಿಧನರಾಗಿದ್ದಾರೆ.

94 ವರ್ಷದ ಸುಲೋಚನಾ ಲಾತ್ಕರ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸುಲೋಚನಾ ಅವರನ್ನು ಮೇ ತಿಂಗಳಿನಿಂದ ಮುಂಬೈನ ದಾದರ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ 4 ರಂದು ಅವರ ಆರೋಗ್ಯವು ಸಂಪೂರ್ಣ ಹದಗೆಟ್ಟಿತ್ತು ನಿರಂತರ ಆಮ್ಲಜನಕ ಪೂರೈಕೆಯೊಂದಿಗೆ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ 6.30ರ ಸುಮಾರಿಗೆ ನಿಧನರಾದರು ಎಂದು ಪುತ್ರಿ ಕಾಂಚನ್ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಡಕಾಳತಾ ಗ್ರಾಮದಲ್ಲಿ 1928, ಜುಲೈ 30 ರಂದು ಜನಿಸಿದ್ದ ಸುಲೋಚನಾ ಲಾತ್ಕರ್ ಅವರು 1940 ರಲ್ಲಿ ಮರಾಠಿ ರಂಗಭೂಮಿ ಪ್ರವೇಶಿಸಿದ್ದರು. ಆನಂತರ ಮರಾಠಿ, ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಮರಾಠಿಯಲ್ಲಿ 50 ಹಾಗೂ ಹಿಂದಿಯಲ್ಲಿ 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ? ಕುಜ ದೋಷ: ಅತ್ಯಾಚಾರ ಸಂತ್ರಸ್ತೆಯ ಜಾತಕ ಪರಿಶೀಲನೆಗೆ ಸೂಚಿಸಿದ ಅಲಹಾಬಾದ್ ಹೈಕೋರ್ಟ್‌ಗೆ ಸುಪ್ರೀಂ ತಡೆ

ಸುಲೋಚನಾ ಲಾಟ್ಕರ್ ಅವರು 1960 ಮತ್ತು 70ರ ದಶಕದಲ್ಲಿ ಬಾಲಿವುಡ್‌ನ ತಾಯಿ ಪಾತ್ರದ ನಟಿಯಾಗಿ ಗುರುತಿಸಲ್ಪಟ್ಟಿದ್ದರು.ಆ ಕಾಲದಲ್ಲಿ ಬಾಲಿವುಡ್‌ನ ಮೂವರು ದಿಗ್ಗಜ ನಟರಾದ ಸುನಿಲ್ ದತ್, ದೇವಾನಂದ್ ಮತ್ತು ರಾಜೇಶ್ ಖನ್ನಾ ಅವರ ತಾಯಿಯ ಪಾತ್ರವನ್ನು ನಿರ್ವಹಿಸಿ ಮೆಚ್ಚುಗೆ ಗಳಿಸಿದ್ದರು.

ಅಬ್ ದಿಲ್ಲಿ ದುರ್ ನಹಿನ್, ಸುಜಾತಾ, ಆಯೆ ದಿನ್ ಬಹರ್ ಕೆ, ದಿಲ್ ದೇಕೆ ದೇಖೋ, ಆಶಾ, ಮಜ್ಬೂರ್, ನೈರೋಶ್ನಿ, ಆಯಿ ಮಿಲನ್ ಕಿ ಬೇಲಾ, ಗೋರಾ ಔರ್ ಕಾಲಾ, ದೇವರ್, ಬಾಂದಿನಿ, ಶ್ರೀ420, ನಾಗಿನ್, ಅಬ್ ದಿಲ್ಲಿ ದುರ್ ನಹಿನ್ ಮತ್ತು ಮಿಸ್ಟರ್ ಅಂಡ್ ಮಿಸಸ್ ಸುಲೋಚನಾ ನಟಿಸಿದ ಪ್ರಮುಖ ಬಾಲಿವುಡ್ ಚಿತ್ರಗಳು.

ಸುಲೋಚನಾ ಅವರಿಗೆ 1999 ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 2009 ರಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ಪ್ರತಿಷ್ಠಿತ ಮಹಾರಾಷ್ಟ್ರ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಸುಲೋಚನಾ ಅವರ ನಿಧನಕ್ಕೆ ಬಾಲಿವುಡ್‌ನ ಹಿರಿಯ ಬಾಲಿವುಡ್ ನಟ ಅಭಿತಾಬ್ ಬಚ್ಚನ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಸೋಮವಾರ ಮುಂಬೈನ ಶಿವಾಜಿ ಪಾರ್ಕ್‌ನ ದಾದರ್‌ನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸರ್ಕಾರದಿಂದ ನಷ್ಟ ಸರಿದೂಗಿಸಲಾಗದು, ರೈತರೇ ಕಷ್ಟಕ್ಕೆ ಒಗ್ಗಿಕೊಳ್ಳಬೇಕು: ಬಿಜೆಪಿ ನಾಯಕನ ಹೇಳಿಕೆಗೆ ತೀವ್ರ ಆಕ್ರೋಶ

ಇತ್ತೀಚಿಗೆ ಆದ ಅತಿವೃಷ್ಟಿಯಿಂದ ರೈತರಿಗೆ ಆಗಿರುವ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಲು...

ಏನಿದು ಅನಿಲ್ ಅಂಬಾನಿ ಬ್ಯಾಂಕ್ ವಂಚನೆ? ಕ್ರಮ ಕೈಗೊಳ್ಳುತ್ತಾರ ಮೋದಿ?

ತನ್ನನ್ನು ತಾನು ದಿವಾಳಿ ಎಂದು ಘೋಷಿಸಿಕೊಂಡಿರುವ ಭಾರತದ ಭಾರೀ ಶ್ರೀಮಂತ ಉದ್ಯಮಿ...

ತೆಲಂಗಾಣ | ಅಂತರ್ಜಾತಿ ವಿವಾಹದ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ

ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಪ್ರಕರಣ ತೆಲಂಗಾಣದ...

Download Eedina App Android / iOS

X