ಡೂಪ್ಲಿಕೇಟ್ ಕಾಂಗ್ರೆಸ್ಸಿಗೆ ನಕಲಿ ಗಾಂಧಿಗಳ ನೇತೃತ್ವ ಸಿಕ್ಕಿದೆ ಎಂದು ಬೆಳಗಾವಿಯಲ್ಲಿ ನಡೆಯುವ ಗಾಂಧಿ ಭಾರತ ಸಮಾವೇಶದ ಕುರಿತು ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ದೇಶದಲ್ಲಿ ಮೊದಲು ಸ್ವಾಮಿತ್ವ ಯೋಜನೆ ಶುರುವಾಗಿದ್ದೇ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಮೇಲೆ. ಆದರೆ ಎಲ್ಲಿಯೂ ಕಾಂಗ್ರೆಸ್ ಮೋದಿಯವರ ಹೆಸರು ತೆಗೆದುಕೊಳ್ಳುವುದಿಲ್ಲ. ಮಹಾತ್ಮ ಗಾಂಧೀಜಿಯವರು ಕಾಂಗ್ರೆಸ್ ವಿಸರ್ಜನೆ ಮಾಡಲು ಹೇಳಿದ್ದರು. ಅವರು ಹೇಳಿದಂತೆ ಇಂದು ಪಕ್ಷವೇ ಅಸ್ತಿತ್ವದಲ್ಲಿ ಇಲ್ಲ.
ಈ ವರದಿ ಓದಿದ್ದೀರಾ? ಬೆಳಗಾವಿ | ‘ಗಾಂಧಿ ಭಾರತ’ ಸಮಾವೇಶ: ಯಶಸ್ವಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ ಕರೆ
ಕಾಂಗ್ರೆಸ್ ಪಕ್ಷದ್ದು ಮುಗಿದು ಹೋದ ಕಥೆಯಾಗಿದೆ. ಈಗ ಅಸ್ತಿತ್ವದಲ್ಲಿರುವುದು ನಿಜವಾದ ಕಾಂಗ್ರೆಸ್ ಅಲ್ಲವೇ ಅಲ್ಲ. ಡುಬ್ಲಿಕೇಟ್ ಕಾಂಗ್ರೆಸ್ ಚಾಲ್ತಿಯಲ್ಲಿದೆ. ನಕಲಿ ಕಾಂಗ್ರೆಸ್ಸಿನ ನಕಲಿ ಗಾಂಧಿಗಳ ನೇತೃತ್ವದಲ್ಲಿ ಸಮಾವೇಶ ಮಾಡುತ್ತಿದ್ದು, ಸರಕಾರದ ದುಡ್ಡಿನಲ್ಲಿ ಜಾತ್ರೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.