ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಂಚೋಳಿ ತಾಲ್ಲೂಕಿನ ಕುಂಚಾವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
ಬೀದರ್ ಮೂಲದ ಅವಿನಾಶ್ ಸಿದ್ರಾಮ (24), ಅಭಿಷೇಕ ವಿಠಲರಾವ್ (26 ಹಾಗೂ ಸಂಜು ಪುಂಡಲಿಕ (40) ಮೃತರು. ಗಂಭೀರವಾಗಿ ಗಾಯಗೊಂಡ ನವೀನ್, ವಿನೋದ ಹಾಗೂ ಅರುಣ ಅವರನ್ನು ಬೀದರ್ ಬ್ರಿಮ್ಸ್‌ಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಹಾಪುರ-ಶಿವರಾಂಪುರ ರಾಷ್ಟ್ರೀಯ ಹೆದ್ದಾರಿ 149ರಲ್ಲಿ ಸೋಮವಾರ ಮಧ್ಯಾಹ್ನ ಈ ದುರ್ಘಟನೆ ಜರುಗಿದೆ. ಕಾರಿನಲ್ಲಿ 6 ಜನ ತೆಲಂಗಾಣದ ಧಾರುರ ಕಡೆಗೆ ಹೊರಟಿದ್ದರು, ಈ ವೇಳೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ಮಣಿಪುರದ ಬಗ್ಗೆ ಮೋದಿ ಮೌನ ಯಾಕೆ? ಇಲ್ಲಿವೆ ಆ ಆರು ಕಾರಣಗಳು!
ಸ್ಥಳಕ್ಕೆ ಕುಂಚಾವರಂ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.