ಕ್ರಿಕೆಟ್ | ಬಿಸಿಸಿಐನ ಕೆಟ್ಟ ರಾಜಕಾರಣದಿಂದ ಮರೆಯಾದ ಮಿಂಚಿನ ಆಟಗಾರರು

Date:

Advertisements
ಇಲ್ಲಿ ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಬಿಸಿಸಿಐ ಒಳಗಿರುವ ನಿಯಮವೂ ಇದೇ. ತಾರತಮ್ಯವನ್ನು ಪ್ರಶ್ನಿಸದೆ ಬೋರ್ಡ್‌ಗೆ ಪ್ರಿಯರಾದವರೆಲ್ಲ ಎಲ್ಲಿದ್ದಾರೆ ಗಮನಿಸಿ. ಪ್ರಶ್ನಿಸಿದ ಕಪಿಲ್, ಬಿಷನ್ ಸಿಂಗ್ ಬೇಡಿ, ರಾಯುಡು ಏನಾದರೂ ಒಮ್ಮೆ ನೋಡಿ. Eventually everybody has to fall in line.

ಬಿಸಿಸಿಐ ಕ್ರಿಕೆಟ್ ಬೋರ್ಡ್‌ನಲ್ಲಿ ನಡೆಯುತ್ತಿರುವ ಆಯ್ಕೆ ರಾಜಕೀಯ ದೇಶದ ರಾಜಕೀಯದ ಪಡಿಯಚ್ಚು ಎಂದರೆ ತಪ್ಪಿಲ್ಲ ಅನ್ನೋದು ನನ್ನ ಅನಿಸಿಕೆ. ಸಂದರ್ಶನದಲ್ಲಿ ರಾಬಿನ್ ಉತ್ತಪ್ಪ ಅದನ್ನು ಸರಿಯಾಗಿಯೇ ಸಾಂಸ್ಕೃತಿಕ ರಾಜಕಾರಣ ಅಂತ ಕರೆದರು.

ಒಂದು ಕಡೆ ತಂಡದಲ್ಲಿ ಫಾರ್ಮ್ ಕಳೆದುಕೊಂಡಿರುವವರನ್ನು ರಣಜಿ ಆಡಿ ಅಂತ ಒತ್ತಾಯ ಮಾಡಲಾಗುತ್ತಿದೆ. ಇನ್ನೊಂದೆಡೆ ರಣಜಿಯಲ್ಲಿ, ವಿಜಯ್ ಹಜಾರೆ ಪಂದ್ಯಾವಳಿಯಲ್ಲಿ ಶತಕಗಳ ಸುರಿಮಳೆಗಯ್ಯುತ್ತಿರುವ ಕರುಣ್ ನಾಯರ್ ಅಂತವರನ್ನು ತಂಡದಿಂದ ಹೇಗಾದರೂ ಮಾಡಿ ಹೊರಗಿಡುವ ಎಲ್ಲ ಕುತಂತ್ರಗಳನ್ನು ಮಾಡಲಾಗುತ್ತಿದೆ. ವೀರೇಂದ್ರ ಸೆಹವಾಗ್ ನಂತರದಲ್ಲಿ ತ್ರಿಶತಕ ಸಿಡಿಸಿದ ಭಾರತದ ಏಕೈಕ ಆಟಗಾರ ಕರುಣ್ ಅವರನ್ನು ಆಯ್ಕೆ ಮಂಡಳಿ ಸಂಪೂರ್ಣವಾಗಿ ಮರೆತೇ ಹೋಗಿತ್ತು. ಅಭಿಮಾನಿಗಳು ಕೂಡ ಕರುಣ್ ಅವರನ್ನು ತಮ್ಮ ನೆನಪಿನಿಂದ ಅಳಿಸಿ ಹಾಕಿದ್ದರು. ಕರುಣ್‌ಗೆ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸುವುದು ಬಿಡಿ ಕರ್ನಾಟಕ ತಂಡಕ್ಕೂ ಈ ಹುಡುಗ ಬೇಡವಾಗಿದ್ದ!

ನನಗೆ ನೆನಪಿದೆ ಡಿಸೆಂಬರ್ 22 ರಂದು ಕರುಣ್ ಒಂದು ಟ್ವೀಟ್ ಮಾಡಿದ್ದರು. “ಪ್ರೀತಿಯ ಕ್ರಿಕೆಟ್, ನನಗೆ ಮತ್ತೊಂದು ಅವಕಾಶ ಕೊಡು” ಎಂದು. ಹತಾಶ ವ್ಯಕ್ತಿಯೊಬ್ಬ ದೇವರ ಮುಂದೆ ಮಂಡಿಯೂರಿ ಬೇಡುವ ಹಾಗೆ ಕರುಣ್ ತಾನು ನಂಬಿದ್ದ ಕ್ರೀಡೆಯನ್ನು ಬೇಡಿಕೊಂಡಿದ್ದ! ಜೈನ್ ಕಾಲೇಜಿನಲ್ಲಿ ನಾನು ಬೋಧಿಸುವಾಗ ನನ್ನ ವಿದ್ಯಾರ್ಥಿಯಾಗಿದ್ದ ಕರುಣ್ ಈ ಪರಿ ಮಾನಸಿಕವಾಗಿ ಕುಗ್ಗಿ ಹೋಗಿದ್ದನ್ನು ನೋಡಿ ನನಗೆ ಬೇಸರವಾಗಿತ್ತು. ಆದರೆ, ಅವನನ್ನು ಸಂಪರ್ಕಿಸುವ ಯಾವ ಮಾರ್ಗವು ನನ್ನ ಬಳಿ ಇರಲ್ಲಿಲ್ಲ. ಅದೇ ತರಗತಿಯಲ್ಲಿ ಓದುತ್ತಿದ್ದ ಮಾಯಾಂಕ್ ಅಗರ್ವಾಲ್‌ಗೆ ಸಿಗದ ಮನ್ನಣೆ ನೋಡಿ ಬೋರ್ಡ್ ಒಳಗಿನ eco system ಮಾತ್ರ ನನಗೆ ಸ್ಪಷ್ಟವಾಗಿತ್ತು.

Advertisements

ಆಡದ ಆಟಗಾರರನ್ನು ತಂಡದಿಂದ ಕೈಬಿಟ್ಟು ಚೆನ್ನಾಗಿ ಆಡುತ್ತಿರುವ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳೋಕೆ ಏನು ದಾಡಿ ಅಂತ ಮುಗ್ಧ ಕ್ರಿಕೆಟ್ ಅಭಿಮಾನಿಗಳು ಕೇಳಬಹುದು. ವಿಷಯ ಅಷ್ಟು ಸರಳವಾಗಿಲ್ಲ. ಈಗ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಆಟಗಾರರನ್ನು ಒಮ್ಮೆ ಗಮನಿಸಿ, ಮತ್ತವರು endorse ಮಾಡುತ್ತಿರುವ ಬ್ರ್ಯಾಂಡ್‌ಗಳನ್ನು ನೋಡಿ, ಯಾವ ಯಾವ ಜಾಹೀರಾತುಗಳಲ್ಲಿ ಯಾರ್ ಯಾರು ಕಾಣಿಸಿಕೊಳ್ಳುತ್ತಾರೆ ನೋಟ್ ಮಾಡಿಕೊಳ್ಳಿ. ಕ್ರೀಡೆ, ವ್ಯಾಪಾರ, ಬಂಡವಾಳ, ಹೂಡಿಕೆ, ಜಾಹೀರಾತು, ರಾಜಕೀಯ ಎಲ್ಲದರ ಅಪವಿತ್ರ ಮೈತ್ರಿ ನಮ್ಮ ದೇಶದ ಕ್ರಿಕೆಟ್.

ಪೂಜಾರ, ರಹಾನೆ, ವಿಹಾರಿ, ಅಭಿಮನ್ಯು ಈಶ್ವರನ್ ರಂತಹ ಅದ್ಭುತ ಆಟಗಾರರನ್ನು ಬೋರ್ಡ್ ಕಡೆಗಣಿಸಿದೆ. ಕರುಣ್ ಕೂಡ ಬಹುಶಃ ಅದೇ ದಾರಿ ಹಿಡಿದು ಇರುಳಲ್ಲಿ ಮಿಂಚಿ ಮಾಯವಾಗುವ ಧೂಮಕೇತುವಿನಂತೆ ಮಾಯವಾಗುತ್ತಿದ್ದ ಅನ್ಸುತ್ತೆ. ಆದ್ರೆ ಅವನಿಗೆ ಸಹಾಯಾಸ್ತ ನೀಡಿ ಆಸರೆಯಾಗೋಕೆ ಬೋರ್ಡ್ ಒಳಗೆ ಅಭಯ್ ಕುರುವಿಲ್ಲರಂತಹ ಜನರಿದ್ದುದು ಕರುಣ್ ಅದೃಷ್ಟವಷ್ಟೇ. ಬಡ, ಮಧ್ಯಮ ವರ್ಗಗಳಿಂದ ಬರುವ ಸಾಕಷ್ಟು ಪ್ರತಿಭೆಗಳಿಗೆ ಈ ರೀತಿಯ backing ಇರಲ್ಲ ಅನ್ನೋದು ದುರಂತ.

ಇತ್ತೀಚಿಗೆ, ರವಿಚಂದ್ರನ್ ಅಶ್ವಿನ್ ದಿಢೀರನೆ ನಿವೃತ್ತಿ ಘೋಷಿಸಿದರು. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಸಮರ್ಥವಾಗಿದ್ದ ಅದ್ಭುತ ಆಟಗಾರ ಅಶ್ವಿನ್. ಐನೂರಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದ ಬೌಲರ್ ಒಬ್ಬನನ್ನು ತಂಡ ನಡೆಸಿಕೊಂಡ ರೀತಿಗೆ ಯಾವ ಸ್ವಾಭಿಮಾನಿಯು ತಂಡದಲ್ಲಿ ಉಳಿಯುತ್ತಿರಲಿಲ್ಲ. ‘ಸೌತ್ vs ನಾರ್ಥ್ ಎನ್ನುವ ಡಿವೈಡ್ ಇಲ್ಲ’ ಅಂತ ಈಗಲೂ ವಾದ ಮಾಡ್ತೀರಾ ಕ್ರಿಕೆಟ್ ಅಭಿಮಾನಿಗಳೇ… ನಮ್ಮ ದೇಶದಲ್ಲಿ ಕೆಲ ಆಟಗಾರರು ನಿವೃತ್ತಿ ಘೋಷಿಸಲು ಅನುಕೂಲವಾಗುವಂತೆ ಕಳಪೆ ತಂಡವನ್ನು ನಮ್ಮ ನೆಲಕ್ಕೆ ಕರೆಸಿ, ಸರಣಿ ಆಡಿಸಿ, ಕೆಲ ಆಟಗಾರರ ನಿವೃತಿಯನ್ನು ಮೆಗಾ ಈವೆಂಟ್ ಮಾಡಲಾಗುತ್ತದೆ. ಅಶ್ವಿನ್ ಅವರಂತಹ ಆಟಗಾರರ ನಿವೃತ್ತಿ ಎರಡು ನಿಮಿಷದ ಪತ್ರಿಕಾ ಗೋಷ್ಠಿಯಲ್ಲಿ ಮುಗಿದು ಹೋಗುತ್ತದೆ. (ಇನ್ನು ಆಸ್ಟ್ರೇಲಿಯಕ್ಕೆ ಮೊಹಮ್ಮದ್ ಶಾಮಿ, ಹರ್ಷ್ ದೀಪ ಸಿಂಗ್ ಅವರನ್ನು ಏಕೆ ಕರೆದುಕೊಂಡು ಹೋಗಲಿಲ್ಲ ಅನ್ನೋದರ ಬಗ್ಗೆ ಚರ್ಚಿಸಿ ಈಗ ಫಲವಿಲ್ಲ.)

ಈ ವರದಿ ಓದಿದ್ದೀರಾ?: 7 ಇನ್ನಿಂಗ್ಸ್‌ನಲ್ಲಿ 752 ರನ್, 6 ಬಾರಿ ನಾಟ್‌ಔಟ್‌; ಹೊಸ ದಾಖಲೆಯ ಅಂಚಿನಲ್ಲಿ ಕರುಣ್ ನಾಯರ್

9/11 ನಂತರದ ದಿನಗಳಲ್ಲಿ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ತನ್ನ ಭಾಷಣದಲ್ಲಿ ಬೇರೆ ದೇಶಗಳಿಗೆ ಎಚ್ಚರಿಕೆಯ ಸಂದೇಶವೊಂದನ್ನು ರವಾನೆ ಮಾಡಿದ್ದ, “ನೀವು ಅಮೆರಿಕಾದೊಡನೆ ಇದ್ದೀರಿ. ಇಲ್ಲ ಅಂದ್ರೆ ಭಯೋತ್ಪಾದಕರ ಬೆಂಬಲಿಗರಾಗಿದ್ದೀರಿ” ಎಂದು. ರಾಜಕೀಯವಾಗಿ ದೇಶದಲ್ಲಿ ಕೆಲಸ ಮಾಡುತ್ತಿರುವ ಅಲಿಖಿತ ನಿಯಮವು ಕೂಡ ಇದೆ. “ನೀವು ಆಳುವ ಪಕ್ಷದೊಡನೆ ಇದ್ದೀರಿ, ಇಲ್ಲವೇ ನೀವು ಭ್ರಷ್ಟರು, ದೇಶ ದ್ರೋಹಿಗಳು” ಎಂದು. ಇಲ್ಲಿ ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಬಿಸಿಸಿಐ ಒಳಗಿರುವ ನಿಯಮವೂ ಇದೇ. ತಾರತಮ್ಯವನ್ನು ಪ್ರಶ್ನಿಸದೆ ಬೋರ್ಡ್‌ಗೆ ಪ್ರಿಯರಾದವರೆಲ್ಲ ಎಲ್ಲಿದ್ದಾರೆ ಗಮನಿಸಿ. ಪ್ರಶ್ನಿಸಿದ ಕಪಿಲ್, ಬಿಷನ್ ಸಿಂಗ್ ಬೇಡಿ, ರಾಯುಡು ಏನಾದರೂ ಒಮ್ಮೆ ನೋಡಿ. Eventually everybody has to fall in line.

ಅದೇನೇ ಇರಲಿ, IPL ಪಂದ್ಯಾವಳಿ ಶುರುವಾದ ಮೇಲೆ ಬೀದಿ-ಬೀದಿಗೆ ಒಂದೊಂದು ಕ್ರಿಕೆಟ್ ಕೋಚಿಂಗ್ ಕೇಂದ್ರಗಳು ಶುರುವಾಗಿವೆ. ಮನೆಯಲ್ಲಿ ಪುಟ್ಟ ಮಕ್ಕಳು ಕ್ರಿಕೆಟ್ ಆಡುತ್ತೇನೆ ಅಂದಾಗ ಪೋಷಕರು ನಿರಾಕರಿಸುತ್ತಿದ್ದ ಕಾಲ ಈಗಿಲ್ಲ. ಐಪಿಎಲ್ ತಂಡದಲ್ಲಿ ಒಮ್ಮೆ ಆಯ್ಕೆ ಆದ್ರೆ ಜೀವನ ಸೆಟೆಲ್ ಆಗುತ್ತೆ ಅನ್ನುವ ಕನಸು ದೇಶದ ಪ್ರತಿಯೊಬ್ಬ ಪೋಷಕನು ಕಾಣುವ ದಿನಗಳು ಇವು. ಮಗ ಧೋನಿ, ವಿರಾಟ್ ಆಗ್ತಾನೆ ಅಂತ ದಿನ ಬೆಳಗಾದರೆ ಗಜಗಾತ್ರದ ಕ್ರಿಕೆಟ್ ಕಿಟ್ ನೇತು ಹಾಕಿಕೊಂಡ ಪುಟ್ಟ ಪೋರರನ್ನು ಆಟದ ಮೈದಾನಕ್ಕೆ ತಮ್ಮ ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುವ ಪೋಷಕರನ್ನು ನೋಡಿದಾಗ ಬಿಸಿಸಿಐ ಬೆಳೆಸುತ್ತಿರುವ ecosystem ಇವರ ಕನಸುಗಳನ್ನು ನುಚ್ಚುನೂರು ಮಾಡದಿರಲಿ ಎಂದು ಪ್ರಾರ್ಥಿಸುತ್ತೇನೆ. ನನ್ನಿಂದ ಸಾಧ್ಯವಿರುವುದು ಅಷ್ಟು ಮಾತ್ರ.

ಹೊಸ ಯುಜಿಸಿ ನಿಯಮಗಳು, ಕೇಂದ್ರ ರಾಜ್ಯಗಳಿಗೆ ನೀಡುತ್ತಿರುವ ತೆರಿಗೆ, ಸವೆಯುತ್ತಿರುವ ಒಕ್ಕೂಟ ವ್ಯವಸ್ಥೆ, ಸೌಥ್ vs ನಾರ್ಥ್ ಕಂದಕ, “ನೀವು ನಮ್ಮೊಡನಿದ್ದೀರಿ ಅಥವಾ ನೀವು ದೇಶ ದ್ರೋಹಿಗಳು, ಭ್ರಷ್ಟರು” ಎನ್ನುವ ಅಲಿಖಿತ ನಿಯಮಗಳನ್ನು ಅರ್ಥ ಮಾಡಿಕೊಳ್ಳಬೇಕು ಅಂದ್ರೆ ಒಮ್ಮೆ ಸೂಕ್ಷ್ಮವಾಗಿ ಬಿಸಿಸಿಐ ಕಾರ್ಯವೈಖರಿಯನ್ನು ವಿಶ್ಲೇಷಿಸಬೇಕಷ್ಟೇ… Sports reflects everything.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

‍ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
‍ಲೇಖಕ, ಪ್ರಾಧ್ಯಾಪಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಮಹಿಳಾ ವಿಶ್ವಕಪ್‌, ಆಸೀಸ್‌ ಪ್ರವಾಸಕ್ಕೆ ಟೀಂ ಇಂಡಿಯಾ ತಂಡ ಪ್ರಕಟ

ಮುಂದಿನ ತಿಂಗಳು ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್‌ಗೆ...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X