ಕೊಪ್ಪಳ | ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಬಸವರಾಜ್ ಸೂಳಿಬಾವಿ ವಿರೋಧ

Date:

Advertisements

ಕೊಪ್ಪಳ ಜಿಲ್ಲೆಯ ಅರಸನಕೇರಿ, ಚಿಕ್ಕ ಬೆಣಕಲ್ ಮತ್ತು ಹಿರೇ ಬೆಣಕಲ್ ಗ್ರಾಮಗಳಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಮುಂದಾಗಿರುವ ಸರ್ಕಾರದ ನಡೆಗೆ ಸಾಮಾಜಿಕ ಹೋರಾಟಗಾರ ಬಸವರಾಜ್‌ ಸೂಳಿಬಾವಿ ವಿರೋಧ ವ್ಯಕ್ತಪಡಿಸಿದರು.

ಈಗಾಗಲೇ ಮೂರು ಪರಮಾಣು ವಿದ್ಯುತ್ ಸ್ಥಾವರಗಳಿಗೆ ಜಾಗ ಕೊಟ್ಟು ಪರಿಸರ ಮತ್ತು ಜನರ ಆರೋಗ್ಯ ಹಾನಿಗೆ ಕಾರಣವಾದ ರಾಜ್ಯ ಸರ್ಕಾರ ಮತ್ತೊಮ್ಮೆ ಅಂಥದ್ದೇ ಯೋಜನೆಗೆ ಜಾಗ ಕೊಡಲು ಸಿದ್ಧವಾಗಿದೆ. ಈ ಬಾರಿ ಅದಕ್ಕೆ ಬಲಿಯಾಗಲು ಸಿದ್ದವಾಗಿರುವುದು ಕೊಪ್ಪಳ ಜಿಲ್ಲೆಯ ನೆಲ. ಈಗಾಗಲೇ ಅಸಂಖ್ಯೆ ಕಾರ್ಖಾನೆಗಳ ಆಡಂಗೋಲದ ನೆಲವಾಗಿ ದೊಡ್ಡ ಪ್ರಮಾಣದ ಪರಿಸರ ಹಾನಿಯಾಗುವುದರ ಜೊತೆಗೆ ಜನರ ಆರೋಗ್ಯ ಹದಗೆಟ್ಟಿದೆ. ರಾಜ್ಯ ಸರ್ಕಾರವೇ ವನ್ಯ ಜೀವಿ ಸುರಕ್ಷಿತ ಧಾಮವೆಂದು ಘೋಷಣೆ ಮಾಡಿರುವ ಪ್ರದೇಶದಲ್ಲಿ ಮತ್ತು ಪ್ರಾಗೈತಿಹಾಸಿಕ ಪ್ರದೇಶವೆಂದು ಹೆಸರಾದ ಪ್ರದೇಶದಲ್ಲಿ ಅಣು ಸ್ಥಾವರ ಸ್ಥಾಪನೆಗೆ ಉದ್ದೇಶಿಸಿರುವುದು ಸರಿಯಲ್ಲ ಎಂದು ಆಕ್ರೋಶಗೊಂಡರು.

ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ‘ಹಬ್ ಅಂಡ್ ಸ್ಪೋಕ್’ ಹೆಸರಲ್ಲಿ ಸರ್ಕಾರಿ ಶಾಲೆ ಮುಚ್ಚಲು ಮುಂದಾದರೆ ಹೋರಾಟ: ಎಐಡಿಎಸ್‌ಒ

Advertisements

ಸದ್ಯ ಸ್ಥಾವರ ಉದ್ದೇಶಿತ ಗ್ರಾಮಗಳಿಗೆ ಪ್ರಗತಿಪರ ಮತ್ತು ಪರಿಸರವಾದಿ ಗೆಳೆಯರ ತಂಡ ಭೇಟಿ ಮಾಡಿ ಗ್ರಾಮಸ್ಥರ ಜೊತೆ ಚರ್ಚೆ ನಡೆಸಿವೆ. ಅವಲೋಕನಕ್ಕಾಗಿ ಭೇಟಿ ನೀಡಿದ ತಂಡದಲ್ಲಿ ಟಿ. ರತ್ನಾಕರ, ಶುಕ್ರಾಜ ತಾಳಕೇರಿ, ಮುತ್ತು ಬಿಳೆಯಲಿ, ಡಿ. ಎಚ್. ಪೂಜಾರ, ಕೆ. ಬಿ. ಗೋನಾಳ, ಗಂಗಾವತಿಯ ವಿಜಯ ಮತ್ತಿತರರು ಇದ್ದರು.

WhatsApp Image 2025 01 21 at 7.51.06 AM 1
ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X