ವಿಜಯನಗರ ಜಿಲ್ಲಾ ಕೃಷಿಕ ಸಮಾಜದ ಚುನಾವಣೆಯಲ್ಲಿ ಪ್ರತಿ ತಾಲೂಕಿನಿಂದ ಇಬ್ಬರು ಪದಾಧಿಕಾರಿಗಳು ಜಿಲ್ಲಾ ಮಟ್ಟಕ್ಕೆ ಮತ್ತು ರಾಜ್ಯ ಮಟ್ಟಕ್ಕೆ ತಲಾ ಒಬ್ಬ ಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ.
ಹರಪನಹಳ್ಳಿ ತಾಲೂಕಿನಿಂದ ವಿಜಯನಗರ ಜಿಲ್ಲಾಧ್ಯಕ್ಷರಾಗಿ ಮಸಲವಾಡ ರೇವಣಸಿದ್ದಪ್ಪ, ಹರಪನಹಳ್ಳಿ ತಾಲೂಕು ಅಧ್ಯಕ್ಷರಾಗಿ ಮಡಿವಾಳಪ್ಪ ಕೂಡ್ಲಿಗಿ, ತಾಲೂಕು ಅಧ್ಯಕ್ಷ, ಜಿಲ್ಲಾ ಪ್ರತಿನಿಧಿಯಾಗಿ ಎಂ.ಜಿ ಸಿದ್ಧನಗೌಡ ಶಾಂತನಹಳ್ಳಿ, ಕೂಡ್ಲಿಗಿ ತಾಲೂಕು ಎಂ ಬಸವರಾಜ್ ಕಕ್ಕುಪ್ಪಿ ರಾಜ್ಯ ಪ್ರತಿನಿಧಿಯಾಗಿ, ಹೊಸಪೇಟೆಯ ಬಂಡೆ ಶ್ರೀನಿವಾಸ್ ಜಿಲ್ಲಾ ಉಪಾಧ್ಯಕ್ಷರಾಗಿ ಹುಲುಗಪ್ಪ ಹೊಸಪೇಟೆ ತಾಲೂಕ ಅಧ್ಯಕ್ಷರಾಗಿ, ಹಡಗಲಿ ತಾಲೂಕಿನ ಕೃಷ್ಣಪ್ಪ ತಾಲೂಕ ಅಧ್ಯಕ್ಷರಾಗಿ, ಬೆಟ್ಟಪ್ಪ ಉತ್ತಂಗಿ ಇವರು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಕೊಟ್ಟೂರು ತಾಲೂಕಿನಿಂದ ಜಿಲ್ಲಾ ಪ್ರತಿನಿಧಿಯಾಗಿ ಜೆ ಮರಳು ಸಿದ್ದಪ್ಪ, ಕೊಟ್ಟೂರ್ ತಾಲೂಕ ಅಧ್ಯಕ್ಷರಾಗಿ, ಜಿಲ್ಲಾ ಖಜಾಂಜಿಯಾಗಿ ನಾಗೇಶ್ ಆಯ್ಕೆಯಾಗಿದ್ದಾರೆ. ಹಗರಿಬೊಮ್ಮನಹಳ್ಳಿ ತಾಲೂಕಿನಿಂದ ಅಧ್ಯಕ್ಷರಾಗಿ ಹನಸಿ ದೇವರಾಜ್, ಜಿಲ್ಲಾ ಪ್ರತಿನಿಧಿಯಾಗಿ ಮಂಜುನಾಥ್, ಎಲ್ಲ ಪ್ರತಿನಿಧಿಗಳು ಒಗ್ಗಟ್ಟಾಗಿ “ರೈತರ ಏಳಿಗೆಗೆ ಶ್ರಮಿಸುತ್ತೆವೆ” ಎಂದು ಭರವಸೆ ನೀಡಿದರು.
ವಿಜಯನಗರ ಜಿಲ್ಲೆ ಎಂದು ಹೊಸದಾಗಿ ರಚನೆಯಾದ ನಂತರ ಇದೇ ಮೊದಲ ಬಾರಿಗೆ ಕೃಷಿಕ ಸಮಾಜ ಜಿಲ್ಲೆಯಿಂದ ಆಯ್ಕೆಯಾಗಿದ್ದು, ಈ ಹೊಸ ಜಿಲ್ಲೆಯ ಅಭಿವೃದ್ಧಿಗಾಗಿ ಮತ್ತು ರೈತರಿಗೆ ದೊರಕುವ ಸೌಲಭ್ಯಗಳನ್ನು ಸರ್ಕಾರದ ಮಟ್ಟದಲ್ಲಿ ಎಲ್ಲರೂ ಸೇರಿ ರೈತರ ಏಳಿಗೆಗೆ ಶ್ರಮಿಸಬೇಕೆಂದು ಹೇಳಿದರು.
ಇದನ್ನು ಓದಿದ್ದೀರಾ? ಡಾಲಿ ಚಾಯ್‌ವಾಲ ಮಂಗಳೂರಿನವನಾಗಿದ್ದಿದ್ದರೆ ಆತನ ಸ್ಟಾಲ್ ಕೂಡ ಬುಲ್ಡೋಜ್ ಆಗುತ್ತಿತ್ತು : ನಟ ರಾಜ್ ಬಿ ಶೆಟ್ಟಿ
ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕಿನ ಎಲ್ಲ ಕೃಷಿಕ ಸಮಾಜದ ಸದಸ್ಯರು ಮತ್ತೆ ಎಲ್ಲಾ ಆರು ತಾಲೂಕಿನ ಎಲ್ಲಾ ನಿರ್ದೇಶಕರು ಭಾಗವಹಿಸಿದ್ದರು.
