ನಿಜಶರಣ ಅಂಬಿಗರ ಚೌಡಯ್ಯನವರು ಕ್ರಿಸ್ತಶಕ 12ನೇ ಶತಮಾನದ ಪ್ರಸಿದ್ಧ ವಚನಕಾರರು ಮತ್ತುಸಮಾಜ ಸುಧಾರಕರಾಗಿದ್ದರೆಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಬಿ ಎನ್ ವಿಶ್ವನಾಥ್ ನಾಯಕ್ ಹೇಳಿದರು.
ಯಾದಗಿರಿ ನಗರದ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಕಚೇರಿಯಲ್ಲಿ ಜರುಗಿದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, “ಚೌಡಯ್ಯ ಅವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಶಿವಪುರದಲ್ಲಿ ಜನಿಸಿದರು ನಂತರ ಕಲ್ಯಾಣಕ್ಕೆ ಬಂದು ಬಸವಣ್ಣನವರ ಅನುಯಾಯಿಯಾಗಿ ಅವರ ಮಾರ್ಗದರ್ಶನದಲ್ಲಿ ಜೀವನ ನಡೆಸಿ ಖಡಕ್ ವಚನಕಾರರಾಗಿದರು” ಎಂದು ಅವರು ಹೇಳಿದರು.
“ನೇರ ನಿಷ್ಠುರ ಖಡಕ್ ವಚನಕಾರರಾಗಿದ್ದ ಅವರು ವಚನಗಳಲ್ಲಿ ಕಾಣಬಹುದು” ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಯ ಕರ್ನಾಟಕ ಸಂಘಟನೆಯ ಮುಖಂಡರಾದ ಭೀಮು ಪೂಜಾರಿ, ಅಶೋಕ್ ರೆಡ್ಡಿ ಯಲೇರಿ, ಮಲ್ಲಿಕಾರ್ಜುನ್ ಹತ್ತಿಕುಣಿ, ಶೇಖರ್ ಹತ್ತಿಕುಣಿ, ರಾಜು ಹತ್ತಿಕುಣಿ, ಸುರೇಶ್ ನಾಯಕ್ ಕಲ್ಪಟ್ಟಿ, ಈಶಪ್ಪ ಕೊಪ್ಪನೋರ್, ನವಾಬ್ ಚೌದ್ರಿ, ಶೋಯಬ್ ಅಹಮದ್, ಅಮೀರ್ ಖಾನ್, ಮುಜೀಬ್, ಏಜಾಜ್, ರೆಹಮಾನ್, ನಾಗರಾಜ ಸಾವ್ಕಾರ್, ಅಭಿಷೇಕ್ ಇನಿತರರು ಇದ್ದರು.