ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರ ಕುಟುಂಬಕ್ಕೆ ಸೇರಿದ ಮಧ್ಯ ಪ್ರದೇಶದಲ್ಲಿರುವ 15 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಗಳು ಶೀಘ್ರವೇ ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ.
ಈ ಆಸ್ತಿಗಳ ಮೇಲೆ 2015 ರಲ್ಲಿ ವಿಧಿಸಲಾಗಿದ್ದ ತಡೆಯಾಜ್ಞೆಯನ್ನು ಮಧ್ಯಪ್ರದೇಶ ಹೈಕೋರ್ಟ್ ತೆಗೆದುಹಾಕಿದೆ. ಇದರಿಂದಾಗಿ 1968ರ ಶತ್ರು ಆಸ್ತಿ ಕಾಯ್ದೆಯ ಅಡಿಯಲ್ಲಿ ಅವುಗಳನ್ನು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆಯಿದೆ. 1968ರ ಶತ್ರು ಆಸ್ತಿ ಕಾಯ್ದೆಯ ಪ್ರಕಾರ, 1947 ರ ವಿಭಜನೆಯ ನಂತರ ಪಾಕಿಸ್ತಾನಕ್ಕೆ ವಲಸೆ ಹೋದ ವ್ಯಕ್ತಿಗಳ ಒಡೆತನದ ಆಸ್ತಿಯನ್ನು ಕೇಂದ್ರ ಸರ್ಕಾರವು ಹಕ್ಕು ಸಾಧಿಸಬಹುದಾಗಿದೆ.
ಡಿ. 13 ರಂದು ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್, 2017ರ ತಿದ್ದುಪಡಿ ಮಾಡಿದ ಶತ್ರು ಆಸ್ತಿ ಕಾಯ್ದೆ ಅಡಿ ಶಾಸನಬದ್ಧ ಪರಿಹಾರವಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 30 ದಿನಗಳ ಪ್ರಾತಿನಿಧ್ಯ ಸಲ್ಲಿಸಬೇಕೆಂದು ಪಟೌಡಿ ಕುಟುಂಬಕ್ಕೆ ಸೂಚಿಸಿತ್ತು. ಇಂದಿನಿಂದ ಈ ಆದೇಶಕ್ಕೆ ಸಂಬಂಧಿಸಿಂತೆ 30 ದಿನಗಳ ಒಳಗಡೆ ಮೇಲ್ಮನವಿ ಸಲ್ಲಿಸದಿದ್ದರೆ ಕೋರ್ಟ್ ಆದೇಶ ಪ್ರಕಟಿಸುವುದಿಲ್ಲ. ಒಂದು ವೇಳೆ ಸಲ್ಲಿಸದಿದ್ದರೆ ಕೋರ್ಟ್ ತನ್ನದೇ ಆದ ಅರ್ಹತೆಯ ಆಧಾರದ ಮೇಲೆ ಮೇಲ್ಮನವಿಯನ್ನು ಪರಿಗಣಿಸುತ್ತದೆ ಎಂದು ಹೇಳಿತ್ತು. ಇಲ್ಲಿಯವರೆಗೆ ಪಟೌಡಿ ಕುಟುಂಬಸ್ಥರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರಾ ಎಂಬುದರ ಬಗ್ಗೆ ಮಾಹಿತಿಯಿಲ್ಲ.
ಭೋಪಾಲ್ ಜಿಲ್ಲಾಧಿಕಾರಿ ಕೌಶಲೇಂದ್ರ ವಿಕ್ರಮ್ ಸಿಂಗ್ ಅವರು ಈ ವಿಷಯದ ಬಗ್ಗೆ ಹೈಕೋರ್ಟ್ ಆದೇಶ ಸ್ಪಷ್ಟವಾದ ನಂತರವೇ ಯಾವುದೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸೈಫ್ ಅಲಿ ಖಾನ್ ತಮ್ಮ ಬಾಲ್ಯವನ್ನು ಕಳೆದ ಮಧ್ಯ ಪ್ರದೇಶದ ಫ್ಲ್ಯಾಗ್ ಸ್ಟಾಫ್ ಹೌಸ್, ನೂರ್-ಉಸ್-ಸಬಾ ಅರಮನೆ, ದಾರ್-ಉಸ್-ಸಲಾಮ್, ಹಬೀಬಿಯ ಬಂಗಲೆ, ಅಹಮದಾಬಾದ್ ಅರಮನೆ, ಕೊಹೆಫಿಜಾ ಆಸ್ತಿ ಪರಿಶೀಲನೆಯಲ್ಲಿರುವ ಪ್ರಮುಖ ಆಸ್ತಿಗಳಾಗಿವೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕುಸಿಯುತ್ತಿರುವ ಸಾಮ್ರಾಜ್ಯದ ಹೊಸ ಅಧಿಪತಿ ಡೊನಾಲ್ಡ್ ಟ್ರಂಪ್
ಪಾಕಿಸ್ತಾನದಲ್ಲೂ ಭಾರತೀಯ ಪ್ರಜೆಗಳಿಗೆ ಸೇರಿದ್ದ ಆಸ್ತಿಗಳಿದ್ದವು. ಅಲ್ಲಿನ ಸರ್ಕಾರವು ಈಗಾಗಲೇ ಅವುಗಳನ್ನು ವಿಲೇವಾರಿ ಮಾಡಿ ತನ್ನ ವಶಕ್ಕೆ ಪಡೆದಿದೆ.
1947 ರಲ್ಲಿ, ಭೋಪಾಲ್ ರಾಜಪ್ರಭುತ್ವದ ರಾಜ್ಯವಾಗಿತ್ತು ಮತ್ತು ಅದರ ಕೊನೆಯ ನವಾಬ್, ನವಾಬ್ ಹಮೀದುಲ್ಲಾ ಖಾನ್
1950 ರಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರು. ಮನ್ಸೂರ್ ಅಲಿ ಖಾನ್ ಪಟೌಡಿ ಅವರ ತಾಯಿಯ ಅಜ್ಜ ನವಾಬ್ ಹಮೀದುಲ್ಲಾ
ಖಾನ್ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದರು, ಅವರಲ್ಲಿ ಹಿರಿಯವರು ಅಬಿದಾ ಸುಲ್ತಾನ್.
ಎರಡನೇ ಪುತ್ರಿ, ಸಾಜಿದಾ ಸುಲ್ತಾನ್ ಭಾರತದಲ್ಲಿಯೇ ಉಳಿದುಕೊಂಡಿದ್ದರು. ಸೈಫ್ ಅಲಿ ಖಾನ್ ಅವರ ಅಜ್ಜ ನವಾಬ್ ಇಫ್ತಿಕರ್
ಅಲಿ ಖಾನ್ ಪಟೌಡಿ ಅವರನ್ನು ವಿವಾಹವಾಗಿದ್ದರು ಮತ್ತು ಆಸ್ತಿಗಳ ಕಾನೂನುಬದ್ಧ ಉತ್ತರಾಧಿಕಾರಿಯಾದರು.
2019 ರಲ್ಲಿ, ನ್ಯಾಯಾಲಯವು ಸಾಜಿದ್ ಸುಲ್ತಾನ್ ಅವರನ್ನು ಕಾನೂನುಬದ್ಧ ಉತ್ತರಾಧಿಕಾರಿ ಎಂದು ಗುರುತಿಸಿತ್ತು. ಅವರ
ಮೊಮ್ಮಗ ಸೈಫ್ ಅಲಿ ಖಾನ್ ಅವರು ಆಸ್ತಿಯ ಪಾಲನ್ನು ಪಡೆದಿದ್ದರು. ಆದಾಗ್ಯೂ, ಅಬಿದಾ ಸುಲ್ತಾನ್ ಪಾಕಿಸ್ಥಾನಕ್ಕೆ ವಲಸೆ
ಹೋದ ಪರಿಣಾಮವಾಗಿ ಕೇಂದ್ರ ಸರಕಾರವು ಆಸ್ತಿಗಳನ್ನು ಶತ್ರು ಆಸ್ತಿ ಎಂದು ಹೇಳಿಕೊಂಡಿತ್ತು.

