ಮನೆ ಖಾಲಿ ಮಾಡುವ ವಿಚಾರದಲ್ಲಿ ಮಹಿಳೆಯರಿಬ್ಬರಿಗೆ ಸಾರ್ವಜನಿಕವಾಗಿ ಥಳಿಸಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ಈ ಪೈಕಿ ಮಹಿಳೆಯೊಬ್ಬರನ್ನು ಕಂಬಕ್ಕೆ ಕಟ್ಟಿ ಥಳಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಗ್ವಾಲಿಯರ್‌ನ ದಾಬ್ರಾ ಪಟ್ಟಣದಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, ಮನೆ ಖಾಲಿ ಮಾಡುವ ವಿಚಾರದಲ್ಲಿ ಮಹಿಳೆಯರಿಗೆ ಥಳಿಸಲಾಗಿದೆ ಎನ್ನಲಾಗಿದೆ. ಸದ್ಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಈ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ವಿದ್ಯುತ್ ಕಂಬವೊಂದಕ್ಕೆ ಮಹಿಳೆಯೊಬ್ಬರನ್ನು ಕಟ್ಟಿ ಹಾಕಿರುವುದು ಕಂಡುಬಂದಿದೆ. ಇನ್ನೋರ್ವ ಮಹಿಳೆಗೆ ಗಾಯಗಳಾಗಿದ್ದು ಸಮೀಪದಲ್ಲೇ ಶೋಚನೀಯ ಸ್ಥಿತಿಯಲ್ಲಿದ್ದರು ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಹಾವೇರಿ | ಪ್ರೀತಿಸಿದ ಯುವತಿ ಜೊತೆ ಹೋದ ಮಗ: ತಾಯಿಯನ್ನು ಕಂಬಕ್ಕೆ ಕಟ್ಟಿ ಹಲ್ಲೆ; 6 ಮಂದಿಯ ಬಂಧನ
ग्वालियर जिले के थाना डबरा सिटी क्षेत्र में मकान पर कब्जे को लेकर यह घटना संज्ञान में आने पर पुलिस ने त्वरित कार्यवाही करते हुए एफआईआर दर्ज की गई है। पुलिस द्वारा आरोपियों को हिरासत में लेकर प्रभावी कार्रवाई की जा रही है। pic.twitter.com/RgVBiVcowQ
— SP_Gwalior (@Gwalior_police) January 21, 2025
ವಿಜಯ್ ಅಗರ್ವಾಲ್ ಮತ್ತು ಆತನ ಸಹಚರರು ತಮ್ಮನ್ನು ಕಂಬಕ್ಕೆ ಕಟ್ಟಿ ಥಳಿಸಿರುವುದಾಗಿ ಮಹಿಳೆಯರು ಆರೋಪಿಸಿದ್ದು, ಪೊಲೀಸರು ಒಟ್ಟು 14 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಪೈಕಿ ನಾಲ್ವರನ್ನು ಬಂಧಿಸಿದ್ದಾರೆ. ಇತರೆ ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
VIDEO | Gwalior: Inspector Yashwant Goyal informs, "We got the information about people fighting against women in Kamleshwar colony. When we reached there, we found a woman tied to a pole, and the other was found in injured state. When we interrogated, we found that a person… pic.twitter.com/u7T8eEfkSh
— Press Trust of India (@PTI_News) January 22, 2025
ಮಹಿಳೆಯರಿಗೆ ಸಾರ್ವಜನಿಕವಾಗಿ ಥಳಿಸಿರುವ ಹಲವು ಪ್ರಕರಣಗಳು ಇತ್ತೀಚೆಗೆ ವರದಿಯಾಗುತ್ತಿದೆ. ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರಕ್ಕೂ ಬಲಿಯಾಗಿರುವುದು ಮಹಿಳೆಯರೇ. ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಲಾಗಿತ್ತು. ಮಹಿಳಾ ದೌರ್ಜನ್ಯ ವಿಚಾರದಲ್ಲಿ ನಮ್ಮ ರಾಜ್ಯವೇನು ಹೊರತಾಗಿಲ್ಲ. ಯುವತಿ ಮತ್ತು ಯುವಕರಿಬ್ಬರು ಪ್ರೀತಿಸಿ ಮನೆ ತೊರೆದು ಹೋದರೆಂಬ ಕಾರಣಕ್ಕೆ ಯುವತಿಯ ತಾಯಿಯನ್ನು ಕಂಬಕ್ಕೆ ಕಟ್ಟಿ ಥಳಿಸಿರುವ ಅಮಾನವೀಯ ಘಟನೆ ನಮ್ಮ ರಾಜ್ಯದ ಹಾವೇರಿಯಲ್ಲಿ ಕಳೆದ ವರ್ಷ ನಡೆದಿದೆ. ಇಂತಹ ಅದೆಷ್ಟೋ ಘಟನೆಗಳು ಪ್ರತಿದಿನ ವರದಿಯಾಗುತ್ತಿದ್ದರೆ, ಕೆಲವು ಘಟನೆಗಳು ಬೆಳಕಿಗೆ ಬರುತ್ತಿಲ್ಲ.
