ಸುಮಾರು ನಾಲ್ಕು ಲಕ್ಷಕ್ಕೆ 7 ವರ್ಷದ ಬಾಲಕನನ್ನು ಮಾರಾಟ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದಾಶಿವ ಶಿವಬಸಪ್ಪ ಮಗದುಮ್, ಲಕ್ಷ್ಮಿ ಗೋಲಬಾಂವಿ, ಕೊಲ್ಲಾಪುರದ ಸಂಗೀತಾ ವಿಷ್ಣು ಸಾವಂತ್, ಕಾರವಾರದ ಅನಸೂಯಾ ಗಿರಿಮಲ್ಲಪ್ಪ ದೊಡ್ಡಮನಿ ಬಂಧಿತ ಆರೋಪಿಗಳು.
ಸುಲ್ತಾನಪುರ ಗ್ರಾಮದ ಸಂಗೀತಾ ಎಂಬಾಕೆ ಎರಡನೇ ಮದುವೆ ಆಗಿದ್ದಳು. ಮದುವೆ ಮಾಡಿಸಿದ್ದ ದಲ್ಲಾಳಿ ಲಕ್ಷ್ಮೀ ಗೋಲಬಾಂವಿ ತನ್ನ ಗೆಳತಿ ಅನಸೂಯಾ ಜೊತೆ ಸೇರಿ ನಾಲ್ಕು ಲಕ್ಷಕ್ಕೆ ಬೆಳಗಾವಿಯ ದಿಲ್ ಶಾನ್ ಎಂಬ ಮಹಿಳೆಗೆ ಸಂಗೀತಾಳ 7 ವರ್ಷದ ಮಗನನ್ನು ಮರಾಟ ಮಾಡಲಾಗಿತ್ತು. ಬಳಿಕ ಆರೋಪಿಗಳು ಮಗು ಖರೀದಿಸಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಬರೆದುಕೊಡುವಂತೆ ದಿಲ್ ಶಾನ್ ಪಟ್ಟು ಹಿಡಿದಿದ್ದಳು. ಪೊಲೀಸರಿಗೆ ಹೆದರಿ ಆರೋಪಿಗಳು ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದರು. ಮೂರು ತಿಂಗಳ ಬಳಿಕ ಬಾಲಕನ ತಾಯಿ ಸಂಗೀತಾ ಎನ್‌ಜಿಒ ಒಂದರ ಮೂಲಕ ಪೊಲೀಸರಿಗೆ ದೂರು ನೀಡಿ ಮಗು ಪತ್ತೆ ಮಾಡಿಕೊಂಡುವಂತೆ ಮನವಿ ಮಾಡಿದ್ದಳು.
ಈ ಸುದ್ದಿ ಓದಿದ್ದೀರಾ?: ಬೆಳಗಾವಿ | ಮಲಪ್ರಭಾ ನದಿಯಲ್ಲಿ ಮುಳುಗಿ ಇಬ್ಬರು ಬಾಲಕರು ನೀರು ಪಾಲು
ಬೈಲಹೊಂಗಲ ತಾಲೂಕಿನ ಗ್ರಾಮವೊಂದರಲ್ಲಿ ಪತ್ತೆಯಾದ ಬಾಲಕನನ್ನು ಮರಳಿ ತಾಯಿಗೆ ಒಪ್ಪಿಸಿದ ಹುಕ್ಕೇರಿ ಪೊಲೀಸರು, ಮಗು ಮಾರಾಟ ತಂಡಕ್ಕೆ ಸಂಗೀತಾ ಎರಡನೇ ಪತಿ ಸಾಥ್ ನೀಡಿದ್ದ ಎನ್ನುವ ವಿಚಾರವನ್ನು ತನಿಖೆಯಲ್ಲಿ ಬಹಿರಂಗಪಡಿಸಿದ್ದಾರೆ.
