ಸಂಕ್ರಾಂತಿ ಹಬ್ಬಕ್ಕೆ ಹೋದವರು ತಡವಾಗಿ ಮರಳಿ ಬಂದಿದ್ದಕ್ಕೆ ಇಟ್ಟಂಗಿ ಬಟ್ಟಿ ಮಾಲೀಕ ದಲಿತ ಕಾರ್ಮಿಕ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಹಳ್ಳೆಗೋಳಾಗದ ದಲಿತ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಒದಗಿಸಬೇಕು” ಎಂದು ಅಂಬೇಡ್ಕರ್ ಸೇನೆ ತಾಲ್ಲೂಕು ಅಧ್ಯಕ್ಷ ಗೋಪಾಲ ಕಟ್ಟಿಮನಿ ಒತ್ತಾಯಿಸಿದರು.
ವಿಜಯಪುರ ಪಟ್ಟಣದ ಗಾಂಧಿನಗರದಲ್ಲಿ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡುತ್ತಿರುವ ಮೂವರು ದಲಿತ ಕಾರ್ಮಿಕರ ಮೇಲೆ ಮಾಲೀಕ ಮಾಡಿದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಅಂಬೇಡ್ಕರ್ ಸೇನೆ ವತಿಯಿಂದ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲ್ಲೂಕಿನ ಸಿರಸ್ತೆದಾರ ಜೆ.ಆರ್. ಜೈನಾಪೂರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದ ಕಾರ್ಮಿಕರ ಮೇಲೆ ಒಂದು ಸಣ್ಣ ಕಾರಣಕ್ಕಾಗಿ ಹಲ್ಲೆ ಮಾಡಿರುವುದು ಖಂಡನೀಯ. ಹಲ್ಲೆ ಮಾಡಿದ ಮಾಲೀಕ ಕೇಮು ರಾಠೋಡ ತನ್ನ ಸಹಚರರೊದಿಗೆ ಸೇರಿ ದಲಿತ ಸಮಾಜದ ಕಾರ್ಮಿಕರಾದ ಸದಾಶಿವ ಮಾದರ್, ಸದಾಶಿವ ಬಬಲಾರಿ ಹಾಗೂ ಉಮೇಶ ಮಾದರ್ ಈ ಮೂವರ ಮೇಲೆ ಪೈಮಗಳನ್ನು ಬಳಸಿ ಮಾರಣಾಂತಿಕ ಹಲ್ಲೆಯನ್ನು ಮಾಡಿದ್ದಾನೆ. ಎಂದರು.
“ಈ ಘಟನೆ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಯಾಗಿದೆ. ಈಗಾಗಲೇ ಈ ಹಲ್ಲೆಕೋರರನ್ನು ಪೊಲೀಸರು ಬಂದಿಸಿದ್ದಾರೆ. ಹಲ್ಲೆಗೆ ಒಳಗಾದವರಿಗೆ ಕಾರ್ಮಿಕ ಇಲಾಖೆಯವರು ಸೂಕ್ತ ಭದ್ರತೆ ಒದಗಿಸಬೇಕು” ಎಂದು ಗೋಪಾಲ ಕಟ್ಟಿಮನಿ ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ ಹೆಚ್ಚಾಗಿದ್ದು, ಶಾಲಾ ಕಾಲೇಜು ಹಾಸ್ಟೆಲುಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಒತ್ತಾಯ
ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆ ಜಿಲ್ಲಾ ಉಪಾಧ್ಯಕ್ಷ ಬಸ್ತು ಕಟ್ಟಿಮನಿ, ಕಾರ್ಯದರ್ಶಿ ಮಹದೇವ ಆಸ್ತಿ, ಮುಖಂಡರು ಪರಶುರಾಮ ತಳವಾರ, ಯಮನಪ್ಪ ನಾಡೋಣ, ಪದಾಧಿಕಾರಿಗಳ ಶೇಖಪ್ಪ ಕಟ್ಟಿಮನಿ, ದ್ಯಾಮಣ್ಣ ಸೋಮನಾಳ, ಮಡು ಚಲವಾದಿ ಮತ್ತೀತರರು ಉಪಸ್ಥಿತರಿದ್ದರು.