ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರಿಗೆ ಭಾರತ ರತ್ನ ನೀಡಬೇಕು ಎಂದು ಶಿವಸೇನೆ (ಯುಬಿಟಿ) ಗುರುವಾರ ಆಗ್ರಹಿಸಿದೆ. ಠಾಕ್ರೆ ಅವರ 99ನೇ ಜಯಂತಿಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಿವಸೇನೆ ನಾಯಕ ಸಂಜಯ್ ರಾವತ್ ಈ ಬೇಡಿಕೆ ಮುಂದಿಟ್ಟಿದ್ದಾರೆ,
“ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಯಾರು ಅರ್ಹರಲ್ಲವೋ ಅವರಿಗೂ ಭಾರತದ ಅತೀ ದೊಡ್ಡ ಪ್ರಶಸ್ತಿಯಾದ ಭಾರತ್ ರತ್ನವನ್ನು ನೀಡಿದ್ದಾರೆ. ಆದರೆ ಭಾರತದಲ್ಲಿ ಹಿಂದುತ್ವದ ಬೀಜವನ್ನು ಬಿತ್ತಿದ ವ್ಯಕ್ತಿಯೂ ಭಾರತ ರತ್ನವನ್ನು ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ | ದಕ್ಕದ ಸಚಿವ ಸ್ಥಾನ; ಶಿವಸೇನೆ ಶಾಸಕ ರಾಜೀನಾಮೆ
“ಅವರಿಗೆ (ಬಾಳ್ ಠಾಕ್ರೆ) ಈವರೆಗೂ ಭಾರತ ರತ್ನ ಯಾಕೆ ನೀಡಿಲ್ಲ? ‘ಹಿಂದೂ-ಹೃದಯ ಸಾಮ್ರಾಟ್’ ಬಾಳ್ ಠಾಕ್ರೆ ಅವರಿಗೆ ಈ ಗೌರವವನ್ನು ಸಲ್ಲಿಸಲೇಬೇಕು. ಇದು ಶಿವಸೇನೆ (ಯುಬಿಟಿ) ಆಗ್ರಹವಾಗಿದೆ” ಎಂದು ತಿಳಿಸಿದ್ದಾರೆ.
“ಇನ್ನೊಂದು ವರ್ಷದಲ್ಲಿ ಠಾಕ್ರೆ ಅವರ ನೂರನೇ ಜನ್ಮದಿನ ಆಚರಿಸಲಾಗುತ್ತದೆ. ಅದಕ್ಕೂ ಮೊದಲು ಅವರಿಗೆ ಭಾರತ ರತ್ನ ನೀಡಬೇಕು. ನೀವು ವೀರ ಸಾವರ್ಕರ್‌ಗೆ ಭಾರತ ರತ್ನವನ್ನು ನೀಡಿಲ್ಲ. ಬಾಲ ಸಾಹೇಬ್‌ಗೆ ನೀವು ಭಾರತ ರತ್ನ ನೀಡಿದರೆ ವೀರ ಸಾವರ್ಕರ್ ಅವರಿಗೆ ಗೌರವ ಸಲ್ಲಿಸಿದಂತೆಯೇ ಆಗುತ್ತದೆ” ಎಂದು ಅಭಿಪ್ರಾಯಿಸಿದರು.
