ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟದ ಕಿಡಿ ಹೊತ್ತಿಸಿದವರಲ್ಲಿ ನೇತಾಜಿ ಸುಭಾಷ ಚಂದ್ರ ಬೋಸ್ ಅವರು ಪ್ರಥಮರಾಗಿದ್ದಾರೆ ಎಂದು ವಿಶ್ವಕ್ರಾಂತಿ ದಿವ್ಯಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಅಭಿಪ್ರಾಯಪಟ್ಟರು.
ಭಾಲ್ಕಿ ಪಟ್ಟಣದ ಸುಭಾಷ ಚಂದ್ರಬೋಸ್ ವೃತ್ತದಲ್ಲಿ ಗುರುವಾರ ನೇತಾಜಿ ಅಭಿಮಾನಿ ಬಳಗ ಹಾಗು ವಿಶ್ವಕ್ರಾಂತಿ ದಿವ್ಯಪೀಠದ ಸಹಯೋಗದಲ್ಲಿ ಆಯೋಜಿಸಿದ ನೇತಾಜಿ ಸುಭಾಷ ಚಂದ್ರಬೋಸ್ ಜಯಂತಿ ಮಹೋತ್ಸವದಲ್ಲಿ ಅವರು ಮಾತನಾಡಿದರು.
ಸುಭಾಷಚಂದ್ರ ಬೋಸ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಆಜಾದ್ ಹಿಂದ್ ಫೌಜ್ ಸ್ಥಾಪಿಸಿದರು. ದೇಶದ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ನೇತಾಜಿಯವರು ಇಂಗ್ಲೀಷರಿಗೆ ಸಿಂಹ ಸ್ವಪ್ನವಾಗಿದ್ದರು. ಅವರ ಹೋರಾಟದ ಫಲವಾಗಿಯೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಇಂದಿನ ಯುವ ಸಮೂಹ ಗಾಂಧೀಜಿ, ಚಂದ್ರಶೇಖರ್ ಆಜಾದ್, ನೇತಾಜಿ, ಭಗತ್ ಸಿಂಗ್ ಸೇರಿದಂತೆ ಅನೇಕ ಮಹಾತ್ಮರ ಆದರ್ಶಗಳು ಪಾಲಿಸಬೇಕುʼ ಎಂದು ತಿಳಿಸಿದರು.
ಭಾಲ್ಕಿ ಪುರಸಭೆ ಸದಸ್ಯ ಪಾಂಡುರಗ ಯಾದವರಾವ ಕನಸೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಸ್ವಾಮಿ ವಿವೇಕಾನಂದರ ವಿಚಾರಧಾರೆಗಳಿಂದ ಪ್ರಭಾವಿತರಾದ ನೇತಾಜಿ ಸುಭಾಷ ಚಂದ್ರಬೋಸ್ ಅವರು ಭಾರತದ ಸ್ವಾತಂತ್ರ್ಯಕ್ಕಾಗಿಯೇ ಹಗಲಿರಳು ಹೋರಾಡಿದರು.ಇಂತಹ ಮಹಾನ್ ವ್ಯಕ್ತಿಯ ತತ್ವಾದರ್ಶಗಳನ್ನು ನಾವು ಮುನ್ನಡೆಸಬೇಕುʼ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅಪರಿಚಿತ ವಾಹನ ಡಿಕ್ಕಿ : ಮಹಾರಾಷ್ಟ್ರ ಮೂಲದ ಇಬ್ಬರ ಸಾವು
ಕಾರ್ಯಕ್ರಮದಲ್ಲಿ ಕನ್ನಡಪರ ಸಂಘಟನೆಯ ಮುಖಂಡ ಜಯರಾಜ ಕೊಳ್ಳಾ ಹಾಗೂ ಪ್ರಮುಖರಾದ ಗೋವಿಂದರಾವ ಬಿರಾದಾರ್, ಪ್ರಭು ಡಿಗ್ಗೆ,ಸಂತೋಷ ಹಡಪದ, ವೆಂಕಟರಾವ್ ಬಿರಾದರ್, ಇಂಧ್ರಜಿತ್ ಪಾಂಚಾಳ, ರಾಜೇಂದ್ರ ಪಾಟೀಲ್, ಸಂತೋಷ ಪಾಟೀಲ್, ದೀಪಕ ಸಿಂಧೆ, ಸಂತೋಷ ಬಿಜಿ ಪಾಟೀಲ್, ಪ್ರಭಾಕರ ಬೆಳಕೆರೆ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.