ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಯಕ್ಲಾಸಪುರ ರಸ್ತೆಯಲ್ಲಿರುವ ವೈದ್ಯಕೀಯ ತಾಜ್ಯ ವಿಲೇವಾರಿ ಘಟಕದಲ್ಲಿ ₹1.26 ಲಕ್ಷ ಮೌಲ್ಯದ 11 ಕೆಜಿ ಗಾಂಜಾ ನಾಶಪಡಿಸಲಾಯಿತು.
ಜಿಲ್ಲೆಯ ಬಳಗಾನೂರು ಠಾಣೆ, ತುರ್ವಿಹಾಳ ಠಾಣೆ, ಯರಗೇರಾ ಠಾಣೆ, ಮಸ್ಕಿ ಠಾಣೆ, ರಾಯಚೂರು ಗ್ರಾಮೀಣ ಠಾಣೆ, ರಾಯಚೂರು ಸೆನ್ ಪೊಲೀಸ್ ಠಾಣೆ, ಸಿಂಧನೂರು ಗ್ರಾಮೀಣ ಠಾಣೆ, ಸದರ್ ಬಜಾರ್ ಠಾಣೆ, ಲಿಂಗಸೂಗೂರು ಠಾಣೆಗಳಲ್ಲಿ 2023 ಹಾಗೂ 2024 ಸಾಲಿನಲ್ಲಿ 13 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಗಾಂಜಾವನ್ನು ನಾಶಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಬಜಾಲ್ ಬಳಿಯ ಕೊಳಚೆ ನೀರು ಸಂಸ್ಕರಣಾ ಘಟಕಕ್ಕೆ ಮೇಯರ್ ಭೇಟಿ
ಮಾದಕ ವಸ್ತು ವಿಲೇವಾರಿ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ಪುಟ್ಟಮಾದಯ್ಯ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ-2 ಜಿ ಹರೀಶ್ ಹಾಗೂ ಸದಸ್ಯರಾದ ರಾಯಚೂರು ಉಪವಿಭಾಗದ ಡಿಎಸ್‌ಪಿ ಎಂ ಜಿ ಸತ್ಯನಾರಾಯಣರಾವ್, ಲಿಂಗಸೂಗೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ದತ್ತಾತ್ರೇಯ ಕರ್ನಾಡ್, ರಿಮ್ ಆಕ್ಟ್ ರಾಯಚೂರು ಅಧ್ಯಕ್ಷ ಡಾ ಶ್ರೀಶೈಲೇಶ ಅಮರಖೇಡ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣದ ಪರಿಸರ ಅಧಿಕಾರಿ ಪ್ರಕಾಶ, ಉಪಪರಿಸರ ಅಧಿಕಾರಿ ಶೈಲಜಾ ವಿ ಅಮೀನಗಡ, ತಾಂತ್ರಿಕ ಅಧಿಕಾರಿ ಜಯಕುಮಾರ, ಡಿಸಿಆರ್‌ಬಿ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ತಿಮ್ಮಣ್ಣ ಎಸ್ ಅವರಿ ಇದ್ದರು.
