ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ವೇಗವಾಗಿ ಬಂದ ಕ್ರೂಷರ್ ಢಿಕ್ಕಿ ಹೊಡೆದಿದ್ದು, ಅಪಘಾತವಾಗಿರುವ ಘಟನೆ ಯಾದಗಿರಿಯ ಚಕ್ರ ಗ್ರಾಮದ ಬಳಿಯಿರುವ ರಾಷ್ಟ್ರೀಯ ಹೆದ್ದಾರಿ 150(ಎ)ರಲ್ಲಿ ನಡೆದಿದೆ.
ಘಟನೆಯಲ್ಲಿ ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ 13 ಜನರನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ಮತ್ತು ಗಾಯಗೊಂಡವರು ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯವರು ಎಂದು ತಿಳಿದುಬಂದಿದೆ. ಅವರೆಲ್ಲರೂ, ಕಲಬುರಗಿಯ ಖ್ವಾಜಾ ಬಂದೇನವಾಜ ದರ್ಗಾದಲ್ಲಿ ನಡೆಯುವ ಉರುಸ್ ಜಾತ್ರೆಗೆ ತೆರಳುತ್ತಿದ್ದರು. ಈ ವೇಳೆ, ಅಪಘಾತ ಸಂಭವಿಸಿದೆ. ಜಾತ್ರೆಗೆ ಹೊರಟ್ಟಿದ್ದವರಲ್ಲಿ ಐವರು ಮಸಣ ಸೇರಿದ್ದಾರೆ.
ಘಟನೆ ಸಂಬಂಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.