ಔರಾದ್ ತಾಲೂಕಿನ ಸಂತಪುರ ಗ್ರಾಮದ ಮಾಜಿ ಸೈನಿಕ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿ ಅಫ್‌ನಾನ್ ಜಲೀಲ್ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಅರೇಬಿಕ್ ಪಠಣ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಗಮನ ಸೆಳೆದಿದ್ದಾನೆ.
ಅಫ್‌ನಾನ್ 9ನೇ ತರಗತಿಯಲ್ಲಿ ಓದುತ್ತಿದ್ದು, ಬೀದರ್ ನಗರದಲ್ಲಿ ಗುರುವಾರ ನಡೆದ 2024-25ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಭಾಗವಹಿಸಿ ಅರೇಬಿಕ್ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ ಎಂದು ಶಾಲೆಯ ಮುಖ್ಯಗುರು ರಾಜಶೇಖರ ದೇಶಮುಖ ತಿಳಿಸಿದ್ದಾರೆ.
ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗೆ ಸಂಸ್ಥೆಯ ಅಧ್ಯಕ್ಷ ಬಾಪುರಾವ್ ಪಾಟೀಲ್ ಹಾಗೂ ಶಿಕ್ಷಕರಾದ ಶಿವಕುಮಾರ್, ಸಾಜನ್, ಆನಂದ, ಸುನೀಲ್, ಈರಮ್ಮ ಪಾಟೀಲ್, ಅನೀಲ್, ಪಲ್ಲವಿ, ಈರಮ್ಮಾ ಬಿ., ಸುಷ್ಮಾ, ವಿಜಯಕುಮಾರ್, ಪ್ರಕಾಶ, ನಿವೇದಿತಾ, ಕಾವೇರಿ, ಪ್ರೀಯಾದರ್ಶನಿ, ಗೀತಾ, ರೇವಣಯ್ಯಾ ಹರ್ಷ ವ್ಯಕ್ತಪಡಿಸಿದ್ದಾರೆ.