ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಯು ಬಾಣಂತಿ ಮತ್ತು ಹಸುಗೂಸನ್ನು ಹೊರಗೆ ಹಾಕಿ ಮನೆಯನ್ನು ಜಪ್ತಿ ಮಾಡಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಾಣಂತಿ ಮಹಿಳೆಯ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.
ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಯು ಬಾಣಂತಿ ಮತ್ತು ಹಸುಗೂಸನ್ನು ಮನೆಯಿಂದ ಹೊರ ಹಾಕಿ ಮನೆ ಜಪ್ತಿ ಮಾಡಿದ್ದರು ಇದರಿಂದಾಗಿ ಬಾಣಂತಿ ಮಹಿಳೆಯ ಕುಟುಂಬವು ಬೀದಿಗೆ ಬಂದಿತ್ತು. ಏಕಾಏಕಿ ಮನೆ ಜಪ್ತಿ ಮಾಡಿದ್ದರಿಂದ ಕುಟುಂಬದವರು ಕಣ್ಣೀರು ಹಾಕಿದ್ದರು. ಈ ಸುದ್ಧಿ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಾಣಂತಿ ಮಹಿಳೆಯ ಕುಟುಂಬದ ಸಹಾಯಕ್ಕೆ ಧಾವಿಸಿದ್ದು ತಮ್ಮ ಆಪ್ತ ಸಹಾಯಕ ಮಹಾಂತೇಶ ಹಿರೇಮಠ ಅವರ ಮೂಲಕ ಖಾಸಗಿ ಫೈನಾನ್ಸ್ ಕಂಪನಿ ಜೊತೆ ಮಾತನಾಡಿ ಮನೆಯ ಬೀಗ ತೆಗೆಸಿ ಬಾಣಂತಿ ಹಾಗೂ ಕುಟುಂಬವನ್ನು ಮನೆಯೊಳಗೆ ಸೇರಿಸಿದ್ದಾರೆ. ಅಲ್ಲದೇ ಅವರಿಗೆ ದಿನಸಿ ಮತ್ತು ಆರ್ಥಿಕ ನೇರವು ನೀಡಿ ಮಾನವಿಯತೆ ಮೆರೆದಿದ್ದಾರೆ
ಗಣಪತಿ ರಾಮಚಂದ್ರ ಲೋಹಾರ್ ಕುಟುಂಬದವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ