ಶಿವಮೊಗ್ಗ ಜಿಲ್ಲೆ, ಸೊರಬ ತಾಲ್ಲೂಕು ಆನವಟ್ಟಿ ಹೋಬಳಿಯ ಎಣ್ಣೆಕೊಪ್ಪ ಸಮೀಪವಿರುವ ಕಮನವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಶ್ರೀ ಮಹರ್ಷಿ ವಾಲ್ಮೀಕಿ ಸೇವಾ ಟ್ರಸ್ಟ್ ನೆಗವಾಡಿ ತಾಂಡ ಸಹಯೋಗದಿಂದ ಶಾಲಾ ಮಕ್ಕಳಿಗೆ ಯೋಗಾಸನ ಶಿಬಿರವನ್ನು ಬುಧವಾರ ನಡೆಸಲಾಗಿದೆ.
ಯೋಗ ಶಿಕ್ಷಕರಾದ ಆರ್ ಕೃಷ್ಣಪ್ಪ, ಅವರು ಸರ್ಕಾರಿ ಶಾಲೆಯಲ್ಲಿ ಉತ್ತಮ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಏಕಾಗ್ರತೆಗೆ ಬೇಕಾದ ಧ್ಯಾನ – ಪ್ರಾಣಾಯಾಮವನ್ನು ಉಚಿತವಾಗಿ ಕಲಿಸಿ ಕೊಡುತ್ತಿದ್ದಾರೆ. ಮಕ್ಕಳ ಉತ್ತಮ ಆರೋಗ್ಯ ಮತ್ತು ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಬೇಕಾದ ಯೋಗಾಸನ, ಮುದ್ರೆಗಳನ್ನು ಉಚಿತವಾಗಿ ಕಲಿಸಿಕೊಟ್ಟರು. ಶಿಕ್ಷಕ ಹಾಗೂ ಸಿಬ್ಬಂದಿವರ್ಗ ಅವರಿಗೆ ಯೋಗಾಸನಗಳನ್ನು ಮಾಡಿಸುವ ಮೂಲಕ, ನಾವು ಮತ್ತಷ್ಟು ಆಸಕ್ತಿಯಿಂದ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದು ತಿಳಿಸಿಕೊಟ್ಟರು.
ಇದನ್ನೂ ಓದಿದ್ದೀರಾ?ಹಾಸನ | 97 ಎಕರೆ ಭೂಮಿ ಕಬಳಿಕೆಗೆ ಯತ್ನ; ಪ್ರಭಾವಿ ರಾಜಕಾರಣಿಗಳ ಹುನ್ನಾರವೆಂದ ಎಚ್ ಡಿ ರೇವಣ್ಣ
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಸಿಬ್ಬಂದಿವರ್ಗದವರು ಹಾಗೂ ಎಣ್ಣೆಕೊಪ್ಪ ಕಮನವಳ್ಳಿ ಗ್ರಾಮಸ್ಥರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
