ಕನ್ನಡ ಜಾನಪದ ಸಾಹಿತ್ಯ ಪರಿಷತ್ ಮಹಿಳಾ ಘಟಕ ಹಾಗೂ ಕನ್ನಡ ಜಾನಪದ ಸಾಹಿತ್ಯ ಪರಿಷತ್ ಮೇಗುಂದ ಹೋಬಳಿ ಘಟಕದ ವತಿಯಿಂದ ಆಯೋಜಿಸಲಾದ, ಸಂಕ್ರಾಂತಿ ಜಾನಪದ ಸುಗ್ಗಿ ಸಂಭ್ರಮ ಕಾರ್ಯಕ್ರಮವನ್ನು ಶುಕ್ರವಾರ ಮೇಗೂರು ಗಿರಿಜನ ಆಶ್ರಮ ಶಾಲೆಯಲ್ಲಿ ನಡೆಸಲಾಯಿತು.

ಜಾನಪದ ಕಲೆ, ಸಾಹಿತ್ಯ, ಜಾನಪದ ಹಳ್ಳಿಯ ಸೊಗಡು ಇತ್ತೀಚಿನ ದಿನಗಳಲ್ಲಿ ನಶಿಸಿ ಹೋಗುತ್ತಿದೆ. ಹಳ್ಳಿಯ ಸೊಗಡಿನ ಹಾಡಿನ ಮೂಲಕ ನೃತ್ಯಗಳು ಬಹಳ ಚೆನ್ನಾಗಿರುತ್ತದೆ.ಇವತ್ತಿನ ದಿನದ ನಗರಗಳಲ್ಲಿ ಪರಕೀಯರ ಹಾಡಿಗೆ ನೃತ್ಯ ಮಾಡಿಸಿ ಹೊಗಳುತ್ತಾರೆ. ಜಾನಪದ ಹಳ್ಳಿಯ ಸೊಗಡನ್ನು ನಾವು ಈ ಕಾರ್ಯಕ್ರಮಗಳ ಮೂಲಕ ಎಲ್ಲಾ ಭಾಗದಲ್ಲಿ ಕಾರ್ಯರೂಪಕ್ಕೆ ತರಬೇಕು, ಎಂದು ಮೇಗುಂದ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಮುರೊಳ್ಳಿ ಮಾತಾಡಿದರು.

ಕೊಪ್ಪ ತಾಲ್ಲೂಕು ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಶ್ರೀನಿಧಿ ದಿನೇಶ್ ಅಧ್ಯಕ್ಷತೆ ವಹಿಸಿ ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು, ಹೆಣ್ಣು ಕೇವಲ ಮನೆ ಕೆಲಸ ಮಾಡಲು ಸೀಮಿತವಲ್ಲ, ಮಹಿಳೆಯರು ಈ ದೇಶದ ಬೆನ್ನೆಲುಬು ಆಗಿದ್ದಾರೆ, ಎಂದು ಕಾರ್ಯಕ್ರಮದಲ್ಲಿ ಮಾತಾಡಿದರು.

ಸರ್ಕಾರಿ ಶಾಲೆ ಉಳಿಯಬೇಕು ಹಾಗೆಯೇ, ಮಲೆನಾಡಿನಲ್ಲಿ ದೂರದ ಊರುಗಳಿಂದ ದಿನ ನಿತ್ಯ ಓದಲು ಬರುವುದಕ್ಕೆ ವಿದ್ಯಾರ್ಥಿಗಳು ಕಷ್ಟ ಪಡುತ್ತಾರೆ. ಈ ಭಾಗದಲ್ಲಿ ಆಶ್ರಮ ಶಾಲೆ ಮಾಡಿರುವುದು ಬಹಳ ಅನುಕೂಲವಾಗಿದೆ. ಈವತ್ತಿನ ದಿನಗಳಲ್ಲಿ ಜಾನಪದ ಕಲೆಗಳು ಮತ್ತಷ್ಟು ಸರ್ಕಾರಿ ಶಾಲೆ ಹಾಗೂ ಎಲ್ಲಾ ಭಾಗಗಳಲ್ಲಿ ಜಾನಪದ ಅರಿವು ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಮೇಗುಂದ ಹೋಬಳಿ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣ ರತ್ನಾಕರ್ ಮಾತಾಡಿದರು.

ಶಿಲೆ ಹೆಚ್ಚು ಪೆಟ್ಟು ತಿಂದರೆ ದೇವರ ವಿಗ್ರಹವಾಗುತ್ತದೆ, ಕಮ್ಮಿ ಪೆಟ್ಟು ತಿಂದ ಶಿಲೆಯು ಮೆಟ್ಟಿಲಾಗುತ್ತದೆ. ಜೀವನದಲ್ಲಿ ಹೆಚ್ಚು ಕಷ್ಟ ಪಟ್ಟವರು, ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗುತ್ತಾರೆ. ಹಾಗೆಯೇ ಪ್ರೀತಿಯಿಂದ ಮಕ್ಕಳಿಗೆ ವಿದ್ಯೆ ಹೇಳಿಕೊಡುವ ಕಲೆ ಇರುವುದು ಸರ್ಕಾರಿ ಶಾಲೆಯ ಶಿಕ್ಷಕರಿಗೆ ಮಾತ್ರ ಎಂದು ಮೇಗುಂದ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಶಾಂತಕುಮಾರ್ ಜೈನ್ ಕಾರ್ಯಕ್ರಮದಲ್ಲಿ ಮಾತಾಡಿದರು.
ಗುಡ್ಡೆತೋಟ ಗ್ರಾಮ ಪಂಚಾಯಿತಿ ಸದಸ್ಯ ಯಡಗುಂದ ವಾಸು ಕಾರ್ಯಕ್ರಮವನ್ನು ಉದ್ಘಾಟಿಸಿ, ಎರಡು ವರ್ಷದ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಈದಿನ .ಕಾಮ್ ಜಿಲ್ಲಾ ವರದಿಗಾರರು ಗಿರಿಜಾ ಅವರು ಗಿರಿಜನರ ಆಶ್ರಮ ಶಾಲೆಗೆ ಭೇಟಿ ನೀಡಿ ಶಾಲೆಯ ಕುರಿತು ಲೇಖನ ಬರೆದಿದ್ದರು.ಇದರಿಂದ ಮತ್ತಷ್ಟು ವಿದ್ಯಾರ್ಥಿಗಳು ಬೇರೆ ಬೇರೆ ಭಾಗದಿಂದ ಮೇಗೂರು ಶಾಲೆಗೆ ಬಂದಿದ್ದಾರೆ. ಈದಿನ.ಕಾಮ್ ಮಾಧ್ಯಮದಲ್ಲಿ ಸತ್ಯವನ್ನು ಬಿತ್ತುವ ಮೂಲಕ ಎಲ್ಲೆಡೆ ಜನರಿಗೆ ಮಾಹಿತಿ ತಿಳಿಯುತ್ತಿದೆ ಎಂದು ಮಾತಾಡಿದರು.

ಸಂಕ್ರಾಂತಿ ಜಾನಪದ ಸುಗ್ಗಿ ಸಂಭ್ರಮದಲ್ಲಿ ಜನಮಿತ್ರ ವರದಿಗಾರರಾದ ಪ್ರದೀಪ್ ಹೆಬ್ಬಾರ್, ಈದಿನ.ಕಾಮ್ ಜಿಲ್ಲಾ ವರದಿಗಾರರಾದ ಗಿರಿಜಾ ಎಸ್ .ಜಿ ಅವರನ್ನು ಜಿಲ್ಲಾ ವರದಿ ಹಾಗೂ ಕೆಲಸ ಮಾಡಿರುವುದನ್ನು ಗಮನಿಸಿ, ವಿಶೇಷ ಆಹ್ವಾನಿತರಾಗಿ ಆಹ್ವಾನಿಸಿ ಸನ್ಮಾನಿಸಲಾಯಿತು.
ಪಿಯೋನ್ ನುಡಿಸುವ ವಾಜಕರಾದ ಆಶಿಶ್ ದೇವಾಡಿಗ ಅವರ ಕಲೆ ಗುರುತಿಸಿ ಸನ್ಮಾನಿದರು. ಹಾಗೆಯೇ ಬೈರೇದೇವರು,ಅತ್ತಿಕುಳಿ, ಮೇಗೂರು, ಶಾಂತಿಗ್ರಾಮ ಶಾಲೆಯ ಶಿಕ್ಷಕರು ಹಾಗೂ ಅಂಗನವಾಡಿ ಮತ್ತು ಅಡುಗೆ ಸಿಬ್ಬಂದಿಗಳಿಗೆ ಅಭಿನಂದಿಸಿದರು.

ಮಕ್ಕಳು ಉತ್ಸುಕತೆಯಿಂದ ಹಾಡು, ನೃತ್ಯ, ಜಾನಪದ ಹಳ್ಳಿಯ ಸೊಗಡಿನ ಕಲೆಯನ್ನು ಬಹಳ ಅದ್ಧೂರಿಯಿಂದ ಅಕ್ಕಪಕ್ಕದ ಶಾಲಾ ಮಕ್ಕಳು ಪ್ರದರ್ಶನ ಮಾಡಿದರು. ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ನೀಡುವ ಮೂಲಕ ಸೋಲು ಗೆಲವು ಎರಡನ್ನೂ ಸಮನಾಗಿ ಸ್ವೀಕರಿಸಬೇಕು ಎಂದು ಕಾರ್ಯಕ್ರಮವನ್ನು ಯಶಸ್ವಿಯಿಂದ ನೆರವೇರಿಸಲಾಯಿತು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಹೊರಗುತ್ತಿಗೆ ನೌಕರರ ಪ್ರತಿಭಟನೆ; ಜಿಲ್ಲಾಧಿಕಾರಿಗೆ ಮನವಿ
ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೃಪಾಲ ಅರೆಹಳ್ಳ, ಭಾಗ್ಯ ಚಂದ್ರಶೇಖರ್, ರೇವಣ್ಣ, ಮಹೇಶ್, ಪುಷ್ಪ , ಮೇಗೂರು ಗ್ರಾಮಸ್ಥರು, ಕಲಾವಿದರು, ಪತ್ರಕರ್ತರು, ಸುತ್ತಮುತ್ತಲಿನ ಸರ್ಕಾರಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಕನ್ನಡ ಜಾನಪದ ಮಹಿಳಾ ಘಟಕ ಮತ್ತು ಕನ್ನಡ ಸಾಹಿತ್ಯ ಪರಿಷತ್ ಮುಖಂಡರು, ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತಿಯಲ್ಲಿದ್ದರು.