ಸ್ವದೇಶಿ ಉತ್ಪನ್ನಗಳ ಹೆಸರಿನಲ್ಲಿ ಭಾರತೀಯ ಮಾರುಕಟ್ಟೆಗೆ ಬಂದಿದ್ದ ಬಾಬಾ ರಾಮ್‌ದೇವ್ ಅವರ ಪತಂಜಲಿ ಬ್ರಾಂಡ್‌ನ ಆಹಾರ ಉತ್ಪನ್ನಗಳು ಆಹಾರ ಸುರಕ್ಷತಾ ಮಾನದಂಡಗಳನ್ನು ಪಾಲಿಸುವಲ್ಲಿ ವಿಫಲವಾಗಿವೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಪತಂಜಲಿ ಫುಡ್ಸ್ ಲಿಮಿಟೆಡ್ ಉತ್ಪಾದಿಸಿದ್ದ ಕೆಂಪು ಮೆಣಸಿನಕಾಯಿ ಪುಡಿಯನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಆಹಾರ ನಿಯಂತ್ರಣ ಪ್ರಾಧಿಕಾರ ಎಫ್ಎಸ್ಎಸ್ಎಐ ನಿರ್ದೇಶನ ನೀಡಿದೆ. ಅದರಂತೆ, 4 ಟನ್ ಮೆಣಸಿನಕಾಯಿ ಪುಡಿಯನ್ನು ಮಾರುಕಟ್ಟೆಯಿಂದ ಪತಂಜಲಿ ಪಡೆಯಲಿದೆ.
ಪತಂಜಲಿ ಬ್ರಾಂಡ್‌ನ 200 ಗ್ರಾಮ್ ತೂಕದ ಮೆಣಸಿನಕಾಯಿ ಪುಡಿಯ ಪ್ಯಾಕೆಟ್‌ಗಳನ್ನು ಪ್ರಯೋಗಾಲಯದ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿಯಲ್ಲಿ ಪತಂಜಲಿ ಉತ್ಪನ್ನಗಳು ಆಹಾರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿವೆ. ನಿಗದಿ ಮಾಡಲಾಗಿರುವ ಗರಿಷ್ಠ ಪ್ರಮಾಣದ ಕೀಟನಾಶಕ ಉಳಿಕೆ ಪ್ರಮಾಣಕ್ಕಿಂತ ಹೆಚ್ಚು ಪ್ರಮಾಣದ ಕೀಟನಾಶಕ ಉಳಿಕೆಗಳು ಪತಂಜಲಿ ಉತ್ಪನ್ನಗಳಲ್ಲಿ ಕಂಡುಬಂದಿವೆ ಎಂದು ಭಾರತೀಯ ಆಹಾರ ಪ್ರಮಾಣೀಕರಣ ಮತ್ತು ಸುರಕ್ಷತಾ ಪ್ರಾಧಿಕಾರ (ಎಫ್ಎಸ್ಎಸ್ಎಐ) ಹೇಳಿದೆ. ಹೀಗಾಗಿ, ಪತಂಜಲಿಯ ಮೆಣಸಿನಕಾಯಿ ಪುಡಿಯನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ನಿರ್ದೇಶನ ನೀಡಿದೆ.
“ಎಫ್ಎಸ್ಎಸ್ಎಐ ಸೂಚನೆಯಂತೆ 4 ಟನ್ ನಷ್ಟು ಕೆಂಪು ಮೆಣಸಿನಕಾಯಿ ಪುಡಿಯನ್ನು ಮಾರುಕಟ್ಟೆಯಿಂದ ಹಿಂಪಡೆದಯಲಾಗುತ್ತಿದೆ. ಗ್ರಾಹಕರು ಆ ಉತ್ಪನ್ನಗಳಲ್ಲಿ ಮರಳಿಸಬೇಕು. ಮರಳಿಸಲಾದ ಉತ್ಪನ್ನಗಳ ಸಂಪೂರ್ಣ ಹಣವನ್ನು ಮರುಪಾವತಿ ಮಾಡಲಾಗುತ್ತದೆ” ಎಂದು ಪತಂಜಲಿ ಫುಡ್ಸ್ ಲಿಮಿಟೆಡ್ ಕಂಪನಿಯ ಸಿಇಒ ಸಂಜೀವ್ ಅಸ್ಥಾನಾ ತಿಳಿಸಿದ್ದಾರೆ.
ಇತ್ತೀಚೆಗೆ, ಪತಂಜಲಿ ಆಯುರ್ವೇದ ಬ್ರಾಂಡ್‌ನ ಪ್ರಚಾರಕ್ಕಾಗಿ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ನೀಡಿದ್ದಕ್ಕಾಗಿ ಅವರ ವಿರುದ್ಧ ಕೇರಳ ಔಷಧ ನಿಯಂತ್ರಕರು ದೂರು ದಾಖಲಿಸಿದೆ. ಅವರ ದೂರಿನ ವಿಚಾರಣೆ ನಡೆಸಿರುವ ಕೇರಳದ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯವು ರಾಮ್‌ದೇವ್ ವಿರುದ್ಧ ಜಾಮೀನು ನೀಡಬಹುದಾದ ಬಂಧನ ವಾರಂಟ್ ಹೊರಡಿಸಿದೆ.
ಜೈಲಿಗಾಕಬೇಕಲ್ಲವೇ, ಬೇರೆ ಅಂಗಡಿಗಳವರು ಮಾಡಿದರೇ ಕೇಸಾಕಲ್ಲವೇ