ಕ್ವಾಲಿಟಿ ಲಿಮಿಟೆಡ್‌ನ ಮಾಜಿ ಪ್ರವರ್ತಕ ಸಿದ್ಧಾಂತ್ ಗುಪ್ತಾ ವಿರುದ್ಧದ ಲುಕ್ ಔಟ್ ನೋಟಿಸ್ ಅನ್ನು ಅಮಾನತುಗೊಳಿಸುವಂತೆ ದೆಹಲಿ ಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ (ಇಡಿ) ನಿರ್ದೇಶನ ನೀಡಿದೆ. ಹಾಗೆಯೇ ವಿದೇಶ ಪ್ರವಾಸ ಮಾಡುವುದು ಸಾಂವಿಧಾನಿಕ ಹಕ್ಕು ಎಂದು ಹೇಳಿದ್ದಾರೆ.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಅಂಜು ಬಜಾಜ್ ಚಂದನಾ ಅವರು ಜನವರಿ 25ರಿಂದ ಫೆಬ್ರವರಿ 8ರವರೆಗೆ ಜಾರಿ ನಿರ್ದೇಶನಾಲಯ (ಇಡಿ) ಹೊರಡಿಸಿದ ಎಲ್‌ಒಸಿಯನ್ನು ಅಮಾನತುಗೊಳಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಅಂಗೀಕರಿಸಿದರು. ಸಿದ್ಧಾಂತ್ ಗುಪ್ತಾ, ತನ್ನ ಮಗಳನ್ನು ಸಿಂಗಾಪುರಕ್ಕೆ ಅಧ್ಯಯನಕ್ಕಾಗಿ ಕರೆದೊಯ್ದು ಅಲ್ಲಿ ಬೇಕಾದ ವ್ಯವಸ್ಥೆ ಮಾಡಿ ಹಿಂದಿರುಗಲು ವಿದೇಶಕ್ಕೆ ಪ್ರವಾಸ ಮಾಡಲು ಅವಕಾಶ ಕೋರಿದ್ದರು.
ಇದನ್ನು ಓದಿದ್ದೀರಾ? ಎಎಪಿಯ ಸತ್ಯೇಂದ್ರ ಜೈನ್‌ಗೆ ದೆಹಲಿ ಕೋರ್ಟ್ ಜಾಮೀನು
ಸಿದ್ಧಾಂತ್ ಗುಪ್ತಾ ಅರ್ಜಿ ಅಂಗೀಕರಿಸಿದ ನ್ಯಾಯಾಧೀಶರು, “ಸ್ವತಂತ್ರ ಚಲನೆಯ ಹಕ್ಕಿನಲ್ಲಿ ವಿದೇಶ ಪ್ರವಾಸವೂ ಕೂಡಾ ಸೇರಿದೆ. ಅದು ಅರ್ಜಿದಾರರ ಸಾಂವಿಧಾನಿಕ ಹಕ್ಕು. ಅರ್ಜಿದಾರರು ಸೀಮಿತ ಅವಧಿಗೆ ಮತ್ತು ನಿರ್ದಿಷ್ಟ ಉದ್ದೇಶಕ್ಕಾಗಿ ವಿದೇಶ ಪ್ರವಾಸ ಮಾಡಲು ಅನುಮತಿ ಕೋರಿದ್ದಾರೆ. ನನ್ನ ಪ್ರಕಾರ ಸೀಮಿತ ಅವಧಿಗೆ ಎಲ್‌ಒಸಿಯನ್ನು ಅಮಾನತುಗೊಳಿಸಿ ಅರ್ಜಿದಾರರಿಗೆ ವಿದೇಶಕ್ಕೆ ಭೇಟಿ ನೀಡಲು ಅವಕಾಶ ನೀಡಿದರೆ ಇಡಿಗೆ ಯಾವುದೇ ಹಾನಿಯಾಗುವುದಿಲ್ಲ” ಎಂದು ನ್ಯಾಯಾಧೀಶರು ಶುಕ್ರವಾರ ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.
ಗುಪ್ತಾ ಅವರ ನಿರೀಕ್ಷಣಾ ಜಾಮೀನು ಅರ್ಜಿ ನ್ಯಾಯಾಲಯದಲ್ಲಿ ಬಾಕಿ ಇದ್ದು, ಜನವರಿ 30ರಂದು ವಿಚಾರಣೆಗೆ ನಿಗದಿಪಡಿಸಲಾಗಿದೆ ಎಂದು ನ್ಯಾಯಾಧೀಶರು ಈ ಸಂದರ್ಭದಲ್ಲೇ ತಿಳಿಸಿದ್ದಾರೆ. ಇನ್ನು ಬಿಸಿಐ ಸಲ್ಲಿಸಿದ ಸಂಬಂಧಿತ ಪ್ರಕರಣದಲ್ಲಿ, ಇಡಿ ಪ್ರಸ್ತುತ ತನಿಖೆಯನ್ನು ಪ್ರಾರಂಭಿಸಿದ್ದು, ಆರೋಪಿಗೆ ವಿದೇಶಕ್ಕೆ ಭೇಟಿ ನೀಡಲು ಈ ಹಿಂದೆ ಅನುಮತಿ ನೀಡಲಾಗಿತ್ತು.
ಇದನ್ನು ಓದಿದ್ದೀರಾ? ಮಾನನಷ್ಟ ಪ್ರಕರಣದಲ್ಲಿ ಯೂಟ್ಯೂಬರ್ ಧ್ರುವ್ ರಾಠಿಗೆ ದೆಹಲಿ ಕೋರ್ಟ್ ಸಮನ್ಸ್
ಗುಪ್ತಾ ವಿದೇಶ ಪ್ರವಾಸ ಮಾಡಲು ಅನುಮತಿ ನೀಡಿದರೆ ಭಾರತಕ್ಕೆ ಹಿಂತಿರುಗದಿರುವ ಸಾಧ್ಯತೆ ಇದೆ ಎಂದು ಇಡಿ ವಾದವಾಗಿದೆ. ಗುಪ್ತಾ ಮತ್ತು ಕಂಪನಿಯ ಸಹ-ಪ್ರವರ್ತಕ ಸಂಜಯ್ ಧಿಂಗ್ರಾ ಅವರು ಕ್ವಾಲಿಟಿ ಲಿಮಿಟೆಡ್‌ನ ವಹಿವಾಟು ಹೆಚ್ಚಿಸುವ ಸಲುವಾಗಿ ಹಲವಾರು ನಕಲಿ ಕಂಪನಿಗಳು ಮತ್ತು ಘಟಕಗಳನ್ನು ರಚಿಸಿದ್ದಾರೆ ಎಂಬುದು ಇಡಿ ಆರೋಪವಾಗಿದೆ.
ಈ ಅಪರಾಧದ ಆದಾಯವನ್ನು ಅಂದರೆ ಕ್ವಾಲಿಟಿ ಲಿಮಿಟೆಡ್ ಬ್ಯಾಂಕುಗಳ ಒಕ್ಕೂಟದಿಂದ ಪಡೆದ ಸಾಲದ ಹಣವನ್ನು ತಮ್ಮ ಹೆಸರಿನಲ್ಲಿ ಮತ್ತು ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ ಇರಿಸಿದ್ದಾರೆ ಎಂಬ ಆರೋಪವಿದೆ.
