ಎಪಿಸಿಆರ್ ಕರ್ನಾಟಕದ ವತಿಯಿಂದ ಏರ್ಮಾಳಿನ ರಾಜೀವ್ ಗಾಂಧಿ ಅಕಾಡೆಮಿಯ ಮೈದಾನದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐಎಮ್ ಮುಖಂಡರಾದ ಬಾಲಕೃಷ್ಣ ಶೆಟ್ಟಿ ಮಾತನಾಡಿ, “ಕುಂಭ ಮೇಳದಲ್ಲಿ ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕೆಂಬ ಅಂಗೀಕಾರ ಮಾಡುತ್ತಿದ್ದಾರೆ. ನಾವು ಗಂಡಾಂತರದ ಪರಿಸ್ಥಿತಿಯಲ್ಲಿ ನಿಂತಿದ್ದೇವೆ. ಸ್ವಾತಂತ್ರ್ಯ ಹೋರಾಟಕ್ಕೆ ಯಾವುದೇ ಒಂದು ಧರ್ಮದ ಜನ ಹೋರಾಟ ನಡೆಸಿಲ್ಲ.ಎಲ್ಲ ಧರ್ಮದವರು ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಈ ಐಕ್ಯತೆಯನ್ನು ಒಡೆಯುವ ಪ್ರಯತ್ನಗಳು ಸಾಗುತ್ತಿದೆ. ಆದರೆ ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ಈ ಐಕ್ಯತೆಯನ್ನು ಒಡೆಯಲು ಬಿಡುವುದಿಲ್ಲ ಎಂಬ ಪ್ರತಿಜ್ಞೆ ಮಾಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಪಿಸಿಆರ್ ಉಪಾಧ್ಯಕ್ಷ ಅಡ್ವೇಕೆಟ್ ಪಿ ಉಸ್ಮಾನ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಕಟಪಾಡಿ, ಎಪಿಸಿಆರ್ ರಾಜ್ಯ ಕಾರ್ಯದರ್ಶಿ ಅಡ್ವಕೇಟ್ ನಿಯಾಝ್, ಮುಸ್ಲಿಂ ಒಕ್ಕೂಟ ಕಾರ್ಯದರ್ಶಿ ಟಿ.ಎಮ್ ಜಫ್ರುಲ್ಲಾ, ಪ್ರೊ. ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು.
