ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಾಪೂರ ಗ್ರಾಮದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ಅಂಬೇಡ್ಕರವರ ಸಮ ಸಮಾಜದ ಪರಿಕಲ್ಪನೆ ಮತ್ತು ಐಕ್ಯತೆಯ ಕುರಿತು ಯುಕೆಜಿ ವಿಧ್ಯಾರ್ಥಿನಿ ಮಾತನಾಡಿ ನೆರೆದಿದ್ದ ಸಾರ್ವಜನಿಕರ ಗಮನ ಸೆಳೆದಳು.
ರಾಮದುರ್ಗ ತಾಲೂಕಿನ ಸಾಲಾಪೂರ ಗ್ರಾಮದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉತ್ತೇಜನ ಕನ್ನಡ ಪ್ರಾಥಮಿಕ ಶಾಲೆಯ ಯುಕೆಜಿ ವಿಧ್ಯಾರ್ಥಿನಿ ಚೇತನಾ ಕಟಗಿ ಡಾ|| ಬಿ.ಆರ್ ಅಂಬೇಡ್ಕರ್ ಅವರ ಸಮ ಸಮಾಜ, ದೇಶದ ಐಕ್ಯತೆ, ಸೌಹಾರ್ದತೆಯ ಕುರಿತು ಮಾತನಾಡಿದಳು
ನಮ್ಮ ದೇಶದ ಅಖಂಡತೆಯನ್ನು ಸುನಿಶ್ಚಿತಗೊಳಿಸಿ ವ್ಯವಸ್ಥಿತವಾದ ಆಡಳಿತ ನೀಡುವುದು ಕಷ್ಟವಾಗಿತ್ತು ಕೋಮುವಾದ,ಬಡತನ,ಸಾಮಾಜಿಕ ಅಸಮಾನತೆಗಳು ನಮ್ಮ ದೇಶಕ್ಕೆ ಸವಾಲಾಗಿದ್ದವು ಈ ಸಂದರ್ಭದಲ್ಲಿ ದೇಶಕ್ಕೆ ಸಮ ಸಮಾಜ ಮತ್ತು ಐಕ್ಯತೆಯನ್ನು ಎತ್ತಿ ಹಿಡಿಯುವ ಸಂವಿಧಾನವನ್ನು ಡಾ.ಅಂಬೇಡ್ಕರ್ ಅವರು 3 ವರ್ಷಗಳ ಕಾಲ ಅಧ್ಯಯನ ಮಾಡಿ 1950 ಜನೆವರಿ 26ರಂದು ನಮ್ಮ ದೇಶಕ್ಕೆ ಶ್ರೇಷ್ಠ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ
ನಮ್ಮ ದೇಶದಲ್ಲಿ ಇಂದಿಗೂ ನಾವು ಭ್ರಷ್ಟಾಚಾರ, ಬಡತನ ಮತ್ತು ಕೋಮುವಾದ, ಅಸಮಾನತೆಯ ವಿರುದ್ಧ ಹೋರಾಡುವಂತಹ ಪರಿಸ್ಥಿತಿ ಇದೆ ಇವುಗಳು ನಮ್ಮ ದೇಶದ ಅಭಿವೃದ್ಧಿಯನ್ನು ಹಿಂದಕ್ಕೆ ಎಳೆಯುತ್ತಿವೆ. ಆದರೂ ನಾವುಗಳೆಲ್ಲ ಒಂದಾಗಿ ದೇಶದಲ್ಲಿರುವ ಅನೇಕ ಸಮಸ್ಯೆಗಳ ವಿರುದ್ಧ ಹೋರಾಡಿ ಬಲಿಷ್ಠ ಭಾರತವನ್ನು ನಿರ್ಮಿಸೋಣ ಎಂದು ಭಾಷಣ ಮಾಡುವ ಮೂಲಕ ಸಾರ್ವಜನಿಕರಿಗೆ ಸೌಹಾರ್ದತೆ,ಮತ್ತು ಸಮ ಸಮಾಜ ನಿರ್ಮಾಣದ ಕುರಿತಾಗಿ ಅರಿವು ಮೂಡಿಸಿದಳು.
ಈ ಸಂದರ್ಭದಲ್ಲಿ ಸರಕಾರಿ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಉತ್ತೇಜನ ಶಾಲೆಯ ವಿಧ್ಯಾರ್ಥಿಗಳು ಹಾಗೂ ಶಿಕ್ಷಕ ಸಿಬ್ಬಂದಿಗಳು ಮತ್ತು ಸಾಲಾಪೂರ ಗ್ರಾಮ ಪಂಚಾಯತ ಹಾಗೂ ಪಿಕೆಪಿಎಸ್, ಎಸ್ ಡಿ ಎಮ್ ಸಿ ಅಧ್ಯಕ್ಷರು ಸದಸ್ಯರು,ಮತ್ತು ಸಾಲಾಪೂರ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.