ಫೆಬ್ರವರಿ 5ರಂದು ಮತದಾನ ನಡೆದು, ಫೆಬ್ರವರಿ 8ರಂದು ಫಲಿತಾಂಶಗಳು ಹೊರಬೀಳಲಿರುವ ದೆಹಲಿ ವಿಧಾನಸಭಾ ಚುನಾವಣೆ ಘನಘೋರ ಕಾಳಗದ ರೂಪ ಪಡೆದಿದೆ. ಸತತ ಎರಡು ಅವಧಿ ಅಧಿಕಾರ ನಡೆಸಿರುವ ಆಮ್ ಆದ್ಮೀ ಪಾರ್ಟಿ ಮೂರನೆಯ ಅವಧಿಯ ಮೇಲೆಯೂ ಕಣ್ಣಿಟ್ಟು ಹೋರಾಡುತ್ತಿದೆ. ಮತದಾರರ ನಿರುತ್ಸಾಹ, ಆಡಳಿತವಿರೋಧಿ ಮನಸ್ಥಿತಿ ಹಾಗೂ ಭ್ರಷ್ಟಾಚಾರದ ಆಪಾದನೆಗಳು, ಕಳಪೆ ನಾಗರಿಕ ಸೌಲಭ್ಯಗಳು ಹಾಗೂ ಅಭಿವೃದ್ಧಿ ಆಗಿಲ್ಲವೆಂಬ ಸವಾಲುಗಳನ್ನು ಎದುರಿಸಿದೆ. ತಾವು ನೀಡಿದ್ದ ಮೂರು ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವುದಾಗಿ ಖುದ್ದು ಕೇಜ್ರೀವಾಲ್ ಒಪ್ಪಿಕೊಂಡಿದ್ದಾರೆ. ಮನೆಮನೆಗೆ ಸ್ವಚ್ಛ ಕುಡಿಯುವ…

ಡಿ ಉಮಾಪತಿ
ಹಿರಿಯ ಪತ್ರಕರ್ತರು