ಸುಮಾರು 25-30 ವರ್ಷಗಳಿಂದ ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳಲ್ಲಿ ಮೂಲಸೌಕರ್ಯ, ಭೂಮಿಯ ಹಕ್ಕು, ಆದಿವಾಸಿಗಳ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಹಲವಾರು ವರ್ಷಗಳಿಂದ ಸರ್ಕಾರಗಳ ಮುಂದೆ ಬೇಡಿಕೆ ಇಟ್ಟು ಅನೇಕ ಹೋರಾಟಗಳು ನಡೆಸುತ್ತಾ, ಅರಣ್ಯ ಇಲಾಖೆಯ ಕಿರುಕುಳಗಳನ್ನು ವಿರೋಧಿಸುತ್ತಾ ನಕ್ಸಲ್ ಚಳುವಳಿ ಅಥವಾ ಮಾವೋವಾದಿ ಹೋರಾಟದ ಕಡೆಗೆ ಒಲವು ಹೊಂದಿದ್ದ. ನಾಡನ್ನು ತ್ಯಜಿಸಿ, ತಮ್ಮ ಕುಟುಂಬ ಪರಿವಾರವನ್ನು ತ್ಯಜಿಸಿ, ತಮ್ಮ ಯೌವನವನ್ನು, ಸುಖ ಸಂತೋಷಗಳನ್ನು ತ್ಯಜಿಸಿ ಕಾಡಿನ ಪಾಲಾಗಿ ಭೂಗತರಾಗಿದ್ದರು.

ಅಂತಹವರಲ್ಲಿ ಈ ಹಿಂದೆ ಅದೆಷ್ಟೋ ಜನ ಈ ಹಿಂದೆಯೇ ಮುಖ್ಯ ವಾಹಿನಿಗೆ ಬಂದಿದ್ದಾರೆ. ಅದೇ ರೀತಿ ಕರ್ನಾಟಕದಲ್ಲಿ ಉಳಿದ 7 ಜನ ನಕ್ಸಲರಲ್ಲಿ 6 ಜನ ನಕ್ಸಲರು, ನಕ್ಸಲ್ ಚಳುವಳಿಯಿಂದ ಮುಖ್ಯವಾಹಿನಿಗೆ ಇತ್ತೀಚೆಗೆ ಬಂದಿದ್ದಾರೆ. ಇನ್ನೊಬ್ಬರನ್ನು ಹುಡುಕುವ ಪ್ರಯತ್ನ ಆಗುತ್ತಿದೆ. ಆದರೆ ಈ 6 ಜನರನ್ನು ಮುಖ್ಯವಾಹಿನಿಗೆ ಕರೆತರಲು ಗುಡ್ಡಗಾಡು ಪ್ರದೇಶವಿರುವ ಜಾಗದಲ್ಲಿ ವಾಸಮಾಡುತ್ತಿರುವ ಸಾರ್ವಜನಿಕರ ಸಹಾಯವನ್ನೂ ಪಡೆಯಲಾಗಿತ್ತು. ಹಾಗೆಯೇ, ವಿಶೇಷವಾಗಿ ಚಿಂತಕರು ಮತ್ತು ಪ್ರಗತಿಪರ ಹಾಗೂ ಮಾವೋವಾದಿ ಹೋರಾಟಗಾರರು ಸೇರಿ “ಶಾಂತಿಗಾಗಿ ನಾಗರಿಕ ವೇದಿಕೆ”ಯನ್ನು ಮಾಡಲಾಗಿತ್ತು.

ಶಾಂತಿಗಾಗಿ ನಾಗರಿಕರ ವೇದಿಕೆಯಿಂದ ನಕ್ಸಲ್ ಚಳುವಳಿಯಲ್ಲಿ ಇದ್ದ 6 ಜನರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಸಂಪೂರ್ಣ ಯಶಸ್ಸನ್ನು ಕಂಡಿದೆ. ಆದ್ದರಿಂದ ಆರು ಜನರನ್ನು ಕರೆತರಲು ಶ್ರಮಿಸಿದ ಪ್ರತಿಯೊಬ್ಬರಿಗೂ, “ಶಾಂತಿಗಾಗಿ ನಾಗರಿಕ ವೇದಿಕೆ”ಯಿಂದ ಶನಿವಾರ ಶೃಂಗೇರಿ ತಾಲ್ಲೂಕಿನ ಹಾಗಲಗಂಚಿ ಗ್ರಾಮದಲ್ಲಿ, ಪರಸ್ಪರ ಪರಿಚಯಿಸುವ ಮೂಲಕ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಜೊತೆಗೆ, ಬಹಳ ಖುಷಿಯಿಂದ ಔತಣ ಕೂಟವನ್ನು ಏರ್ಪಡಿಸಿದರು. ಹಾಗೆಯೇ, 6 ಜನ ಮುಖ್ಯವಾಹಿನಿಗೆ ಬರಲು ಅವಕಾಶ ಕಲ್ಪಿಸಿಕೊಟ್ಟ ರಾಜ್ಯ ಸರ್ಕಾರಕ್ಕೆ ಧನ್ಯವಾದವನ್ನು ವ್ಯಕ್ತಪಡಿಸಿದರು.

