ಗುಬ್ಬಿ | ಸಂವಿಧಾನ ಆಶೋತ್ತರದಂತೆ ಇನ್ನೂ ಸಮಾನತೆ ತರಬೇಕಿದೆ : ಶಾಸಕ ಎಸ್.ಆರ್.ಶ್ರೀನಿವಾಸ್

Date:

Advertisements

ಶೋಷಿತ ವರ್ಗಕ್ಕೆ ಸಾಮಾಜಿಕ ನ್ಯಾಯ ತರುವಲ್ಲಿ ನಾವೆಲ್ಲರೂ ಇನ್ನೂ ಬದ್ಧತೆ ಬೆಳೆಸಿಕೊಳ್ಳಬೇಕಿದೆ. ಅಂಬೇಡ್ಕರ್ ಅವರ ಸಂವಿಧಾನ ಆಶೋತ್ತರದಂತೆ ಸಮಾನತೆ ತರಬೇಕಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ಆಡಳಿತ ಆಯೋಜಿಸಿದ್ದ 76 ನೇ ಗಣ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಮಾತನಾಡಿದ ಅವರು ದೇಶದ ಪ್ರಜಾಪ್ರಭುತ್ವ ಗಣರಾಜ್ಯ ಮೂಲಕ ಸಾಮಾಜಿಕ ನ್ಯಾಯ ಬದ್ಧತೆಯ ದಿನ ಸಮಾಜಕ್ಕೆ ಕೊಡುಗೆ ನೀಡಿದ ವ್ಯಕ್ತಿಗಳ ಸನ್ಮಾನಿಸಿ ಗೌರವಿಸುವ ಕೆಲಸ ಮಾಡಬೇಕು ಎಂದರು.

ಸಂವಿಧಾನದಂತೆ ಕೆಲಸ ಮಾಡುವ ಮೂರು ಪ್ರಮುಖ ಅಂಗಗಳು ಇನ್ನೂ ಮೇಲು ಕೀಳು, ಬಡವ ಶ್ರೀಮಂತ ತೊಡೆದು ಹಾಕಲು ಸಾಧ್ಯವಾಗಿಲ್ಲ. ಅಂಬೇಡ್ಕರ್ ಅವರ ಆಶಯದಂತೆ ನವ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಅಧಿಕಾರ ಎನ್ನುವುದು ಅವರವರ ಜವಾಬ್ದಾರಿ ಅರಿತು ಕೆಲಸ ಮಾಡಿ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಕೆಲಸ ಮಾಡಿದಲ್ಲಿ ಮಾತ್ರ ಸಂವಿಧಾನ ಸಾರ್ಥಕತೆ ಪಡೆಯುತ್ತದೆ. ಈ ಕೆಲಸಕ್ಕೆ ಉತ್ತಮ ಶಿಕ್ಷಣ ಒದಗಿಸುವ ಕೆಲಸ ಆಗಬೇಕು ಎಂದರು.

Advertisements

ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಬಿ.ಆರತಿ ಸಂದೇಶ ನೀಡಿ ಭಾರತೀಯರು ದೇಶದ ಗಣ್ಯರನ್ನು ಸ್ಮರಿಸಬೇಕು. ತ್ಯಾಗ ಬಲಿದಾನ ನೀಡಿದ ಸೈನಿಕರು ಹಾಗೂ ದೇಶದ ಪ್ರಗತಿಗೆ ಸಹಕಾರಿಯಾದ ವಿಜ್ಞಾನಿಗಳಿಗೆ ಈ ದಿನ ಗೌರವ ಸಲ್ಲಬೇಕು. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಒಂದು ಉತ್ತಮ ಆಡಳಿತ ನೀಡಿ ದೇಶದ ಉನ್ನತಿಗೆ ಶ್ರಮಿಸುತ್ತವೆ. ಮೂರು ಅಂಗಗಳ ಜೊತೆ ನಾಗರೀಕ ತನ್ನ ಕರ್ತವ್ಯ ಅಚ್ಚುಕಟ್ಟಾಗಿ ಪಾಲಿಸಬೇಕು ಎಂದರು.

ಉಪನ್ಯಾಸಕ ತಿಮ್ಮೇಗೌಡ ಮಾತನಾಡಿ 1950 ಜನವರಿ 26 ರಂದು ಗಣರಾಜ್ಯ ರೂಪಿಸಿ ಸಂವಿಧಾನ ಜಾರಿ ಮಾಡಿಕೊಂಡು ನಮ್ಮ ದೇಶದ ಆಡಳಿತ ಆರಂಭಿಸಿದೆವು. ಬ್ರಿಟಿಷರ ಆಳ್ವಿಕೆಯಲ್ಲಿ ನಮ್ಮ ದೇಶದಲ್ಲಿ ನಾವೇ ತೃತೀಯ ಪ್ರಜೆಗಳಾಗಿ ಇದ್ದು ಸ್ವಾತಂತ್ರ್ಯ ಹೋರಾಟ ಮೂಲಕ ಸ್ವಾತಂತ್ರ್ಯ ಪಡೆದು ನಂತರ ವಿವಿಧ ರಾಜ್ಯಗಳನ್ನು ಒಗ್ಗೂಡಿಸಿ ಸಂವಿಧಾನ ಜಾರಿಗೆ ತರಲಾಯಿತು. ಹೀಗೆ ದೇಶದ ಅಭಿವೃದ್ದಿ ಹಂತ ಹಂತವಾಗಿ ಸಾಗಿ ಇಡೀ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಪ್ರಜಾಪ್ರಭುತ್ವ ಸಂವಿಧಾನ ಎನಿಸಿಕೊಂಡಿದ್ದೇವೆ. ಹೀಗೆ ದೇಶದ ಸರ್ವತೋಮುಖ ಅಭಿವೃದ್ಧಿಗೆ ಹಲವರ ಕೊಡುಗೆ ಇದೆ. ಅವರನ್ನೆಲ್ಲಾ ಸ್ಮರಿಸುವುದು ನಮ್ಮ ಕರ್ತವ್ಯ ಎಂದರು.

ಪೋಲಿಸ್, ಗೃಹರಕ್ಷಕ ದಳ, ಎನ್ ಸಿಸಿ, ಸ್ಕೌಟ್ ಅಂಡ್ ಗೈಡ್ಸ್ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಕವಾಯತು ನಡೆಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.

ವೇದಿಕೆಯಲ್ಲಿ ಪಪಂ ಅಧ್ಯಕ್ಷೆ ಮಂಗಳಮ್ಮ ರಾಜಣ್ಣ, ಉಪಾಧ್ಯಕ್ಷೆ ಮಮತಾ ಶಿವಪ್ಪ ಸೇರಿದಂತೆ ಎಲ್ಲಾ ಸದಸ್ಯರು, ತಾಪಂ ಇಓ ಶಿವಪ್ರಕಾಶ್, ಬಿಇಓ ನಟರಾಜ್, ಸಿಪಿಐ ಗೋಪಿನಾಥ್, ಪ್ರಾಚಾರ್ಯ ಪ್ರಸನ್ನ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಿಂದುಮಾಧವ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಸಿಇಓ ಭರತ್ ಎಸ್ ವರ್ಗಾವಣೆ

ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದು ಗದಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ...

ಚಿಕ್ಕಮಗಳೂರು l ಹಳ್ಳ ದಾಟಲು ಹೋದ ಯುವಕ ನೀರು ಪಾಲು

ಭಾರೀ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಓರ್ವ ವ್ಯಕ್ತಿ ದಾಟುತ್ತಿದ್ದ ವೇಳೆ...

ಚಿಕ್ಕಮಗಳೂರು l ವಾಹನ ಚಲಾಯಿಸುವಾಗ ನಿಯಮ ಉಲ್ಲಂಘನೆ: ಗುಲಾಬಿ ಹೂ ನೀಡಿ ಜಾಗೃತಿ ಮೂಡಿಸಿದ ಅಧಿಕಾರಿಗಳು

ವಾಹನ ಚಲಾಯಿಸುವಾಗ ಹೆಲ್ಮಟ್, ಸೀಟ್ ಬೆಲ್ಟ್ ಧರಿಸದವರಿಗೆ ಗುಲಾಬಿ ಹೂ ಕೊಡುವ...

ಹಾವೇರಿ | ಒಳಮೀಸಲಾತಿಗೆ ಶ್ರಮಿಸಿದವರಿಗೆ ಧನ್ಯವಾದ ಸಲ್ಲಿಸಿದ ಉಡಚಪ್ಪ ಮಾಳಗಿ

"ರಾಜ್ಯದಲ್ಲಿ ವಿವಿಧ ದಲಿತ ಸಂಘಟನೆಯ ಮುಖಂಡರು ಹಾಗೂ ದಲಿತ ಸಮುದಾಯದವರ ನಿರಂತರ...

Download Eedina App Android / iOS

X