ಬೆಳಗಾವಿ ಜಲ್ಲೆಯ ರಾಮದುರ್ಗ ತಾಲೂಕಿನ ಸಾಲಾಪೂರ ಗ್ರಾಮದಲ್ಲಿ ಶಾಲಾ ವಿಧ್ಯಾರ್ಥಿಗಳು ಸೌಹಾರ್ದತೆ ಸಾರುವ ಕಾರ್ಯಕ್ರಮಗಳೊಂದಿಗೆ ಸಂಭ್ರಮದ ಗಣರಾಜ್ಯೋತ್ಸವ ಆಚರಿಸಿದರು.
ರಾಮದುರ್ಗ ತಾಲೂಕಿನ ಸಾಲಾಪೂರ ಗ್ರಾಮದಲ್ಲಿ ಸಂಗೋಳ್ಳಿ ರಾಯಣ್ಣ ವೃತ್ತ ಮತ್ತು ಮಹಾತ್ಮ ಗಾಂಧೀಜಿ ವೃತ್ತದಲ್ಲಿ ದ್ವಜಾರೋಹಣ ಮಾಡಿದರು ನಂತರ ಗ್ರಾಮ ಪಂಚಾಯತಿ ಆವರಣದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು ಶಾಲಾ ವಿಧ್ಯಾರ್ಥಿಗಳು ದೇಶ ಭಕ್ತಿ ಗೀತೆ,ಸಂವಿಧಾನ ಕುರಿತಾಗಿ ಭಾಷಣ ಮಾಡಿದರು ಹಾಗೂ ಸೌಹಾರ್ದತೆ ಸಾರುವ ಕಿರು ನಾಟಕ,ನೃತ್ಯ ಮಾಡುವ ಮೂಲಕ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮೆರಗು ತಂದುಕೊಟ್ಟರು.
ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಪಿಕೆಪಿಎಸ್ ಸದಸ್ಯರಾದ ಸೋಮಶೇಖರ ಹಂಪನ್ನವರ ಮಾತನಾಡಿ ದೇಶಕ್ಕಾಗಿ ಅನೇಕ ಸ್ವಾತಂತ್ರ್ಯ ಹೋರಾಟಗಾರು ಪ್ರಾಣವನ್ನು ನೀಡಿದ್ದಾರೆ ಡಾ.ಬಿ.ಆರ್.ಅಂಬೇಡ್ಕರ ಅವರು ಸಂವಿಧಾನವನ್ನು ರಚಿಸಿ ಮಹತ್ವದ ಕೊಡುಗೆ ನೀಡಿದರು ದೇಶದ ಭದ್ರತೆಗಾಗಿ ಯುವಕರು ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಡಿ. ಬಿ.ಹುದ್ದಾರ ಶಿಕ್ಷಕರು ರಚಿಸಿದ ಪ್ರವಾಸ ಕಥನ ಬೆಡಗಿನ ತಾಣ ಬಡಗಣದ ಯಾತ್ರೆ ಪುಸ್ತಕವನ್ನು ಇದೆ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು ಈ ಕುರಿತು ಸಾಹಿತಿಗಳಾದ ಪಾಂಡುರಂಗ ಜಟ್ಟಗನ್ನವರ ಮತ್ತು ಸುರೇಶ ದೇಸಾಯಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ,ಪ್ರೌಢ,ಉತೇಜನ ಶಾಲಾ ವಿಧ್ಯಾರ್ಥಿಗಳು ಹಾಗೂ ಅಂಗನವಾಡಿ ಮಕ್ಕಳು ಮತ್ತು ಗ್ರಾಮ ಪಂಚಾಯತಿ,ಪಿಕೆಪಿಎಸ್,ಎಸ್ ಡಿ ಎಮ್ ಸಿ ಅಧ್ಯಕ್ಷರು ಸದಸ್ಯರು ಶಾಲಾ ಶಿಕ್ಷಕ ಸಿಬ್ಬಂದಿಗಳು ಸಾಲಾಪೂರ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.