ಆಗುಂಬೆ ಘಾಟಿಯಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಕೊಪ್ಪ ಮೂಲದ ಹರೀಶ್ ಬಲ್ಲಾಳ್ ಮೃತರು ಎಂದು ತಿಳಿದುಬಂದಿದೆ.
ಪರ್ಕಳದಿಂದ ತೀರ್ಥಹಳ್ಳಿ ಮಾರ್ಗವಾಗಿ ಕೊಪ್ಪಕ್ಕೆ ತೆರಳುತ್ತಿದ್ದ ವೇಳೆ ಹರೀಶ್‌ಗೆ ತೀವ್ರ ಹೃದಯಾಘಾತವಾಗಿದೆ. ತಕ್ಷಣ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದೆ. ಆದರೆ ಮಾರ್ಗಮಧ್ಯೆ ಅದಾಗಲೇ ಹರೀಶ್ ಪ್ರಾಣಬಿಟ್ಟಿದ್ದಾರೆ. ಆಗುಂಬೆ ವೈದ್ಯಾಧಿಕಾರಿ ಅನಿಕೇತನ್ ಪರೀಕ್ಷಿಸಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ತೀರ್ಥಹಳ್ಳಿ | ನದಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಶವ ಪತ್ತೆ