ಮಹಾರಾಷ್ಟ್ರ | ಜಿಬಿಎಸ್‌ ವೈರಸ್‌ನಿಂದ ಮೊದಲ ಶಂಕಿತ ಸಾವು; ಪುಣೆಯಲ್ಲಿ 100 ದಾಟಿದ ಪ್ರಕರಣಗಳು

Date:

Advertisements

ಪುಣೆ ಮೂಲದ ರೋಗಿಯೊಬ್ಬರು ‘ಗಿಲ್ಲಾನ್ ಬರ್ರೆ ಸಿಂಡ್ರೋಮ್‌'(ಜಿಬಿಎಸ್) ವೈರಸ್‌ನಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯವರಾದ ಇವರು ಖಾಸಗಿ ಕೆಲಸದ ನಿಮಿತ್ತ ಸ್ವಗ್ರಾಮಕ್ಕೆ ತೆರಳಿದ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಈ ನಡುವೆ ಪುಣೆಯಲ್ಲಿ ಜಿಬಿಎಸ್‌ ಪ್ರಕರಣಗಳು 100 ದಾಟಿವೆ.

ಶೀತ, ಕೆಮ್ಮು, ಉಸಿರಾಟದ ತೊಂದರೆ ಮುಂತಾದ ಲಕ್ಷಣಗಳಿಂದಾಗಿ ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯುಗೆ ದಾಖಲಿಸಿಲಾಗಿದ್ದ ಇವರನ್ನು ರೋಗ ಸುಧಾರಣೆ ಕಂಡ ಮೇಲೆ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಆದಾಗ್ಯೂ ಉಸಿರಾಟದ ತೊಂದರೆಯಿಂದ ರೋಗ ಹದಗೆಟ್ಟ ಪರಿಣಾಮ ಪುನಃ ಐಸಿಯುಗೆ ದಾಖಲಿಸಲಾಗಿತ್ತು. ಆರೋಗ್ಯ ಚೇತರಿಕೆ ಕಾಣದ ಪರಿಣಾಮ ಮೃತಪಟ್ಟಿದ್ದಾರೆ. ಸಾವಿಗೀಡಾಗುವ ಮುನ್ನ ಅವರ ಅಂಗಗಳಲ್ಲಿ ಪಾರ್ಶ್ವವಾಯು ಉಂಟಾಗಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

40 ವರ್ಷದ ರೋಗಿಯೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ ರೋಗಿಯು ಗಿಲ್ಲೈನ್ ಬರ್ರೆ ಸಿಂಡ್ರೋಮ್‌(ಜಿಬಿಎಸ್) ನಿಂದ ಬಳಲುತ್ತಿದ್ದರು ಎಂದು ಸೊಲ್ಲಾಪುರ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯರಾದ ಸಂಜೀವ್‌ ಠಾಕೂರ್‌ ತಿಳಿಸಿದ್ದಾರೆ.

Advertisements

ಈ ಸುದ್ದಿಯನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಚೋದನಕಾರಿ ಭಾಷಣ – ಆಯುಧ ಹಂಚಿಕೆ ಕಾನೂನು ಉಲ್ಲಂಘನೆಯಲ್ಲವೇ?

ಮೃತರ ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸಲಾಗಿದ್ದು, ಇವರಿಗೆ ಜಿಬಿಎಸ್ ವೈರಸ್‌ ಇರುವ ಬಗ್ಗೆ ಶಂಕಿಸಲಾಗಿದೆ. ಐದು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಇವರು ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನೀಡಲು ನಿರ್ಧರಿಸಲಾಗಿದೆ. ವರದಿಯ ನಂತರ ಸಾವಿನ ಖಚಿತ ಕಾರಣವನ್ನು ತಿಳಿಯಲಾಗುತ್ತದೆ. ಮರಣೋತ್ತರ ಪರೀಕ್ಷೆಯಲ್ಲಿ ಜೀವಶಾಸ್ತ್ರಜ್ಞ ಹಾಗೂ ರೋಗ ಶಾಸ್ತ್ರಜ್ಞರು ಕೂಡ ಭಾಗಿಯಾಗಲಿದ್ದಾರೆ. ಸಿಎಸ್ಎಫ್‌ ಹಾಗೂ ರಕ್ತದ ಮಾದರಿಗಳನ್ನು ಪರೀಕ್ಷೆಗೆ ನೀಡಲಾಗಿದೆ. 6 ದಿನಗಳಲ್ಲಿ ವರದಿ ಬರಲಿದೆ” ಎಂದು ಸಂಜೀವ್‌ ಠಾಕೂರ್‌ ಹೇಳಿದ್ದಾರೆ.

ಪುಣೆಯಲ್ಲಿ ಜಿಬಿಎಸ್‌ ವೈರಸ್‌ ಭಾನುವಾರದವರೆಗೂ 101 ಪ್ರಕರಣಗಳು ದಾಟಿದ್ದು, ಇವುಗಳಲ್ಲಿ 68 ಪುರುಷರು ಹಾಗೂ 33 ಮಹಿಳೆಯರು ಒಳಗೊಂಡಿದ್ದಾರೆ. 16 ರೋಗಿಗಳನ್ನು ವೆಂಟಿಲೇಟರ್‌ ಬೆಂಬಲದೊಂದಿಗೆ ದಾಖಲಿಸಲಾಗಿದೆ. ಪುಣೆ ಮಹಾನಗರ ಆರೋಗ್ಯ ಇಲಾಖೆ ವೈರಸ್‌ ಬಾಧಿತ ಸಿಂಹಗಢ ರಸ್ತೆಯ ಪ್ರದೇಶಗಳಲ್ಲಿ ಪರಿವೀಕ್ಷಣೆಯನ್ನು ಮುಂದುವರಿಸಿದೆ. ಈ ಪ್ರದೇಶದಲ್ಲಿ ಒಟ್ಟು 25,578 ಮನೆಗಳಿವೆ.

ಗಿಲ್ಲಾನ್ ಬರ್ರೆ ಸಿಂಡ್ರೋಮ್‌'(ಜಿಬಿಎಸ್) ಎಂಬುದು, ರೋಗಿಯ ಪ್ರತಿಕಾಯ ಸಾಮರ್ಥ್ಯವನ್ನು ಕುಗ್ಗಿಸುವ ಬ್ಯಾಕ್ಟೀರಿಯಾ ಹಾಗೂ ವೈರಲ್ ಸೋಂಕಿನಿಂದ ಬರುವ ನರ ಸಂಬಂಧಿ ಕಾಯಿಲೆಯಾಗಿದೆ. ಇದು ನರ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಪಾರ್ಶ್ವವಾಯು ಉಂಟುಮಾಡುತ್ತದೆ. ಹಾಗೆಯೆ ದೇಹವು ಹಠಾತ್ತನೆ ಮರಗಟ್ಟುವಂತೆ ಮಾಡಿ, ಕೈಕಾಲು ಹಾಗೂ ಸ್ನಾಯುಗಳನ್ನು
ದುರ್ಬಲಗೊಳಿಸುತ್ತದೆ.

ಈ ಕಾಯಿಲೆಯಿಂದ ಚೇತರಿಸಿಕೊಳ್ಳಲು ಕೆಲವು ದಿನಗಳು ಹಾಗೂ ಕೆಲವು ವಾರಗಳು ಬೇಕಾಗಬಹುದು. ಎಲ್ಲ ವಯಸ್ಸಿನವರಿಗೂ ಕಂಡುಬರುವ ರೋಗವಾದರೂ ಸಾಮಾನ್ಯವಾಗಿ ವಯಸ್ಕರು ಹಾಗೂ ಪುರುಷರಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ವೈರಸ್‌ ಏಕೆ ಸಂಭವಿಸುತ್ತದೆ ಎಂದು ಇನ್ನೂ ತಿಳಿಯಲಾಗಿಲ್ಲ. ಆದರೂ ಬಹುತೇಕ ಪ್ರಕರಣಗಳಲ್ಲಿ ಬ್ಯಾಕ್ಟೀರಿಯಾ ಹಾಗೂ ವೈರಲ್‌ ಸೋಂಕಿನಿಂದ ಉಂಟಾಗುತ್ತದೆ. ಒಂದು ಅಂದಾಜಿನ ಪ್ರಕಾರ ಒಂದು ಲಕ್ಷ ಜನಸಂಖ್ಯೆಯಲ್ಲಿ ಶೇ 0.5 ರಷ್ಟು ಮಂದಿಗೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X