ನಾಗರಿಕ ಸಮಾಜವೊಂದು ಕಾಲಕಾಲಕ್ಕೆ ತನ್ನನ್ನು ತಾನು ಕಂಡುಕೊಳ್ಳುವುದಕ್ಕೆ ನಿಲುಗನ್ನಡಿಯಾಗಿ ನಿಲ್ಲಬೇಕಿರುವ ಗುರುತರ ಹೊಣೆ ಮಾಧ್ಯಮಗಳದು. ಕಳೆದ 50 ವರ್ಷಗಳಲ್ಲಿ, ಮಾಧ್ಯಮಗಳು (ಆಯಾಯ ಕಾಲದಲ್ಲಿನ ತಮ್ಮ ಮಿತಿಯೊಳಗೆ) ಈ ಕೆಲಸವನ್ನು ಮಾಡುತ್ತಾ ಬಂದಿವೆ. ಬರಬರುತ್ತಾ ಕಳೆದ 20 ವರ್ಷಗಳಿಂದೀಚೆಗೆ ಈ ನಿಲುಗನ್ನಡಿಯ ಪಾತ್ರ ದುರಾದೃಷ್ಟವಶಾತ್ ಬದಲಾಗಿದೆ. ಅದು ಸಮಾಜದ ಯಥಾವತ್ ಬಿಂಬವನ್ನು ತೋರಿಸುವ ಬದಲು, ಆ ಬಿಂಬಗಳು ಸಮಾಜದ (ಅದರಲ್ಲೂ ಜನಸಾಮಾನ್ಯರ) ಕಣ್ಣಿಗೆ ಬೀಳದಂತೆ ‘ಕಾಡಿಗೆ’ ಕಪ್ಪು ಹೊದೆಸಿ ಕುಳಿತುಬಿಟ್ಟಿವೆ! ಸಮಾಜಕ್ಕೆ ತನ್ನ ಮುಖವನ್ನು ತಾನೇ ನೋಡಿಕೊಳ್ಳುವ ಅವಕಾಶವೊಂದು…

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು. ಉಡುಪಿಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಕರಾವಳಿ ಅಲೆ, ಕೆನರಾಟೈಮ್ಸ್, ಜನಂತರಂಗ ಬಳಗದಲ್ಲಿ ಪತ್ರಕರ್ತರಾಗಿ ದುಡಿಮೆ ಆರಂಭಿಸಿದರು. ಪಟ್ಟಾಂಗ ಎಂಬ ಪತ್ರಿಕೆ ಮತ್ತು ಸವಿ ಎಂಬ ಜಾಹೀರಾತು ಏಜೆನ್ಸಿ ಪ್ರಾರಂಭಿಸಿದರು. 2000ರಲ್ಲಿ ಉದಯವಾಣಿ ಆನ್ ಲೈನ್ ಆವೃತ್ತಿಗೆ ಸುದ್ದಿ ಸಂಪಾದಕರಾಗಿ, ಆರೋಗ್ಯ ಪುರವಣಿಗೆ ಸಂಪಾದಕರಾಗಿ ಸೇವೆ ಸಲ್ಲಿಸಿದರು. 2008ರಿಂದ ತಲ್ಲೂರಿನಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್(ರಿ.) ಮೂಲಕ ನಾರಾಯಣ ವಿಶೇಷ ಮಕ್ಕಳ ಶಾಲೆ ಮತ್ತಿತರ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಲೇ 2015ರಲ್ಲಿ ಪ್ರೊಡಿಜಿ ಮುದ್ರಣ -ಸಂಸ್ಥೆ ಆರಂಭಿಸಿದರು. ಪ್ರಕಟಿತ ಕೃತಿಗಳು: 'ನುಣ್ಣನ್ನ ಬೆಟ್ಟ' (2017), 'ತಲ್ಲೂರು ಎಲ್ ಎನ್'(2018), 'ಏನಿದು ಪೌರತ್ವ ಕಾಯಿದೆ? (2019), 'ದುಪ್ಪಟ್ಟು'(2020), ಕರಿಡಬ್ಬಿ(2022). ಪುರಸ್ಕಾರಗಳು: ಅಮ್ಮ ಪ್ರಶಸ್ತಿ(2017), ಶಿವರಾಮ ಕಾರಂತ ಪುರಸ್ಕಾರ-2019 (2020).