ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕು ಕಚೇರಿಯಲ್ಲಿ ಹೆಚ್ಚಿನ ಭ್ರಷ್ಟಾಚಾರ ನಡೆಯುತ್ತಿದೆ. ದಲ್ಲಾಳಿಗಳ ಹಾವಳಿ ಮಿತಿ ಮೀರಿದ್ದು ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ಆಗುತ್ತಿಲ್ಲ ಎಂದು ಪೊನ್ನಂಪೇಟೆಯ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ವಿಶ್ವನಾಥ್, ಶಾಸಕ ಎ ಎಸ್ ಪೊನ್ನಣ್ಣನವರಿಗೆ ದೂರು ನೀಡಿದ್ದಾರೆ.
ದೂರು ಪಡೆದ ಶಾಸಕ ಪೊನ್ನಣ್ಣ, ಭ್ರಷ್ಟಾಚಾರವನ್ನು ತನ್ನ ಕ್ಷೇತ್ರದಲ್ಲಿ ಸಹಿಸಲು ಸಾಧ್ಯವಿಲ್ಲ. ಭ್ರಷ್ಟಾಚಾರದಲ್ಲಿ ಭಾಗಿಯಾಗುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಲೋಕಾಯುಕ್ತರನ್ನು ತಾಲೂಕು ಕಚೇರಿಗೆ ಭೇಟಿ ನೀಡಲು ತಿಳಿಸಿದ್ದು, ಸಾರ್ವಜನಿಕರು ತಮಗಾದ ಸಮಸ್ಯೆಗಳ ಬಗ್ಗೆ ದೂರು ನೀಡುವಂತೆ ತಿಳಿಸಿದರು.
ಪೊನ್ನಂಪೇಟೆಯಲ್ಲಿ ಕೆಲವರು ಶಾಸಕರ ಹೆಸರಿನಲ್ಲಿ ದಲ್ಲಾಳಿ ವೃತ್ತಿಯನ್ನು ಆರಂಭಿಸಿದ್ದು ಕಚೇರಿ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿಗಳಿಗೆ ಶಾಸಕರಿಗೆ ದೂರು ನೀಡುವುದಾಗಿ ಹೆದರಿಸಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ತಾಲೂಕು ಕಚೇರಿ ಸರ್ವೆ ಇಲಾಖೆಯಲ್ಲಿ ಬೆಳಗಿನಿಂದಲೇ ಆಗಮಿಸಿ ಕಚೇರಿಗಳಲ್ಲಿ ಕಾಣಿಸಿಕೊಂಡು ಕಡತಗಳನ್ನು ಪರಿಶೀಲಿಸುವ ಕೆಲಸ ಮಾಡುತ್ತಿದ್ದಾರೆ. ಕೆಲವೊಮ್ಮೆ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಲು ದೊಡ್ಡವರ ಹೆಸರು ಬಳಸಿ ಹಣ ಪೀಕುತ್ತಿದ್ದಾರೆ. ಕೂಡಲೆ ಅಧಿಕಾರಿಗಳು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಿ ದಲ್ಲಾಳಿಗಳನ್ನು ದೂರ ಇಡುವಂತೆ ಹಾಗೂ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಮಾಡುವ ದಲ್ಲಾಳಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ?: ಕೊಡಗು | ಹೋರಾಟದಿಂದ ನೆಲೆಗೊಂಡ ಕಾನ್ಶೀರಾಂ ನಗರಕ್ಕೆ ಹದಿನೆಂಟನೇ ವರ್ಷದ ಸಂಭ್ರಮ
