ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಮತ್ತು ನಾಡಿನ ಹಸ್ತಪ್ರತಿ ಕ್ಷೇತ್ರದ ಹಿರಿಯ ಸಂಶೋಧಕ ಡಾ. ಕೆ ರವೀಂದ್ರನಾಥ ಅವರು ಕಲಬುರಗಿಯ ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠ ನೀಡುವ 2025ನೇ ಸಾಲಿನ ʼಹಂಡೆಸಿರಿ ರಾಷ್ಟ್ರೀಯ ಪ್ರಶಸ್ತಿʼಗೆ ಭಾಜನರಾಗಿದ್ದಾರೆ ಎಂದು ಪೀಠದ ನಿರ್ದೇಶಕ ಪ್ರೊ. ಎಸ್ ಸಿ ಪಾಟೀಲ್ ತಿಳಿಸಿದರು.
ರವೀಂದ್ರನಾಥ ಅವರು ಹಸ್ತಪ್ರತಿಯ ಗ್ರಂಥ ಸಂಪಾದನೆ, ಚರಿತ್ರೆ-ದಾಖಲು ಸಾಹಿತ್ಯ, ವಚನ ಸಾಹಿತ್ಯ ಹಾಗೂ ಹಸ್ತಪ್ರತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ 70ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ವಿಜಯನಗರ | ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಗೆ ಶ್ರೇಷ್ಠ ಸಂವಿಧಾನವೇ ಆಧಾರ; ಶಾಸಕಿ ಎಮ್ ಪಿ ಲತಾ
ಅವರ ಸೇವೆಯನ್ನು ಗುರುತಿಸಿ ಚಾಲುಕ್ಯ ಪೀಠವು ಈ ಬಾರಿಯ ʼಹಂಡೆಸಿರಿ ರಾಷ್ಟ್ರೀಯ ಪ್ರಶಸ್ತಿʼಯನ್ನು ನೀಡಿ ಗೌರವಿಸಲು ನಿರ್ಧರಿಸಿದೆ. ಈ ಪ್ರಶಸ್ತಿಯು ಫಲಕದೊಂದಿಗೆ ₹25 ಸಾವಿರ ನಗದು ಒಳಗೊಂಡಿರುತ್ತದೆ. ಕೂಡಲಸಂಗಮದಲ್ಲಿ ಫೆ. 1 ಮತ್ತು 2ರಂದು ನಡೆಯುವ ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠದ 3ನೇ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ನಿರ್ದೇಶಕ ಪಾಟೀಲ್ ಮಾಹಿತಿ ಹಂಚಿಕೊಂಡರು.
