ಶಿವಮೊಗ್ಗ ಜಿಲ್ಲೆಯ ಸಾಗರದ ಬಿ ಹೆಚ್ ರಸ್ತೆಯ ಹಳೇ ಖಾಸಗಿ ಬಸ್ ನಿಲ್ದಾಣದ ಬಳಿ ರೂಟ್ ಪರ್ಮಿಟ್ ಇಲ್ಲದೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಓಡಿಸುವುದನ್ನು ತಡೆದು ಖಾಸಗಿ ಬಸ್ ಮಾಲಿಕರು ಹಾಗೂ ಚಾಲಕರು ಉಪವಿಭಾಗಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
“ಸಾಗರದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಹೊರ ಜಿಲ್ಲೆಗಳಿಗೂ ಖಾಸಗಿ ಬಸ್ ಓಡಿಸಿ ಮಾಲಿಕರು ಹಾಗೂ ಚಾಲಕರು ತಮ್ಮ ಸೇವೆ ಒದಗಿಸುತ್ತಾ ಅದರಲ್ಲೇ ತಮ್ಮ ಜೀವನ ಕಟ್ಟಿಕೊಂಡಿರುತ್ತಾರೆ. ಆದರೆ ಕೊರೋನಾ ಬಂದ ಬಳಿಕ ಖಾಸಗಿ ಬಸ್‌ಗಳು ಮೂಲೆ ಗುಂಪಾಗಿವೆ. ಸರ್ಕಾರದ ತೆರಿಗೆ, ಚಾಲಕ ನಿರ್ವಾಹಕರ ಸಂಬಳ ಕೊಡಲಾಗದೆ ಬಸ್‌ಗಳನ್ನು ಮಾರುವ ಪರಿಸ್ಥಿತಿ ಬಂದೊದಿಗಿದೆ. ಅಷ್ಟೇ ಅಲ್ಲದೆ ಈ ಬಾರೀ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಶಕ್ತಿ ಯೋಜನೆ ಜಾರಿ ಆಗಿ ಮಹಿಳೆಯರು ಯಾರೂ ಖಾಸಗಿ ಬಸ್ ಬಳಸುತ್ತಿಲ್ಲ. ಅದರ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಯವರು ರೂಟ್ ಪರ್ಮಿಟ್ ಇಲ್ಲದಿದ್ದರೂ ಯಾವಾವುದೋ ಸಮಯಕ್ಕೆ ಬಸ್ ಗಳನ್ನು ಓಡಿಸುತ್ತಿದ್ದಾರೆ. ಇದರಿಂದ ಖಾಸಗಿ ಬಸ್ ಮಾಲಿಕರಿಗೆ ನಷ್ಟ ಉಂಟಾಗಿ ಜೀವನ ಹೊರೆ ಬರೆಯಾಗಿ ಪರಿಣಮಿಸಿದೆ” ಎಂದು ಅಳಲು ತೋಡಿಕೊಂಡರು.
ಅಧಿಕಾರಿಗಳು ಖಾಸಗಿ ಬಸ್‌ಗಳ ಕಡೆ ಗಮನ ಹರಿಸುತ್ತಿಲ್ಲ. ವಿಷ ಕುಡಿಯುವ ಪರಿಸ್ಥಿತಿ ನಮ್ಮದಾಗಿದೆ ಎಂದು ತಮ್ಮ ಆಕ್ರೋಶ ಹೊರ ಹಾಕಿ ನಮ್ಮನ್ನು ರಕ್ಷಣೆ ಮಾಡಿ ಇಲ್ಲವಾದರೆ ನಮಗೆ ದಯಾ ಮರಣ ನೀಡಿ ಎಂದು ಸರ್ಕಾರಕ್ಕೆ ಅವಲತ್ತುಕೊಂಡು ಮನವಿ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ?: ಸಾಗರ | ಜ.18ರಿಂದ ಕನ್ನಡದಲ್ಲಿ ಸಾರ್ವಜನಿಕ ಕುರ್‌ಆನ್ ಪ್ರವಚನ ಕಾರ್ಯಕ್ರಮ
ಪ್ರತಿಭಟನೆಯಲ್ಲಿ ಖಸಾಗಿ ಬಸ್ ಮಾಲಿಕರ ಸಂಘದ ಅಯಕ್ಷ, ಎಸ್ ಜಿ ಎಂ ಟಿ ಕಂಪನಿ ಮಾಲಿಕ ರಾಧಾ ಸುಭಾಶ್ ನಾಯ್ಕ, ಉಪಾಧ್ಯಕ್ಷ ಯೋಗ ಕುಮಾರ್, ಹಾಗೂ ಕುಮಾರ್ ಗುಡ್ಡೆಮನೆ ನಾಗರಾಜ್ ಗೋಪಾಲ್ ಶೆಟ್ರು, ತಿಮ್ಮಪ್ಪ ಶೆಟ್ರು, ರಫೀಕ್ ರಿಪ್ಪನ್‌ಪೇಟೆ, ಪ್ರತಾಪ್ ಜೆ. ಆರ್. ಬಿ ಹಾಗೂ ಇನ್ನೂ ಹಲವಾರು ಬಸ್ ಮಾಲಿಕರು ಹಾಗೂ ಚಾಲಕರು ಏಜೆಂಟರು ಇದ್ದರು.
