ಮಹಾತ್ಮ ಗಾಂಧೀಜಿ ಅವರು ಹುತಾತ್ಮರಾದ ದಿನ ಜನವರಿ 30ರಂದು ಹಾವೇರಿ ಪಟ್ಟಣದಲ್ಲಿ ಬೀದಿ ಕವಿಗೋಷ್ಠಿ ಮಾಡಲಾಗುವುದು” ಪ್ರಗತಿಪರ ಚಿಂತಕ ಬಸವರಾಜ ಪೂಜಾರ ತಿಳಿಸಿದರು.
“ವಿದ್ಯಾರ್ಥಿ-ಯುವಜನ-ಮಹಿಳಾ, ರೈತ-ಕಾರ್ಮಿಕ, ದಲಿತ-ದಮನಿತ, ಸಾಹಿತಿ-ಕಲಾವಿದರ ಸಂಘಟನೆಗಳನ್ನೊಳಗೊಂಡ ಪ್ರಗತಿಪರ ಹಾಗೂ ಸಮಾನ ಮನಸ್ಸುಗಳ ವೇದಿಕೆ, ಸೌಹಾರ್ದ ಕರ್ನಾಟಕವು ಪ್ರತಿ ವರ್ಷ ಸೌಹಾರ್ದ ಮಾನವ ಸರಪಳಿ ಸೇರಿದಂತೆ ಹಲವಾರು ವಿಶಿಷ್ಠ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬರುತ್ತಿದೆ. ಮಹಾತ್ಮಾ ಗಾಂಧಿ ಹುತಾತ್ಮ ದಿನದ ಸ್ಮರಣಾರ್ಥವಾಗಿ ಜನವರಿ 30ರಂದು ಮಹಾತ್ಮಾ ಗಾಂಧಿ ವೃತ್ತದಲ್ಲಿ ಬೆಳಿಗ್ಗೆ ಒಂಬತ್ತು ಗಂಟೆಗೆ ಕವಿಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಶಾಲಾ ವಿಧ್ಯಾರ್ಥಿಗಳಿಂದ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ
ಕಾರ್ಯಕ್ರಮದಲ್ಲಿ ಚಿಂತಕರು, ಹೋರಾಟಗಾರರು, ಕವಿಗಳು, ಸಾಹಿತಿ ಕಲಾವಿದರು ಭಾಗವಹಿಸುವರು ಎಂದು ಬಸವರಾಜ ಪೂಜಾರ ತಿಳಿಸಿದರು.
